ಕಾವ್ಯ ಸಂಗಾತಿ
ಟೆಂಟ್ ಸಿನಿಮಾ
ಡಾ. ಅರಕಲಗೂಡು ನೀಲಕಂಠ ಮೂರ್ತಿ

ಈಗ ಟೆಂಟ್ ಸಿನಿಮಾ
ತುಂಬ ತುಂಬ ಹಳೆಯದು
ಇನ್ನೇನು ಇಂದೋ ನಾಳೆಯೋ
ಕಡಯ ಆಟ
ಸಾದರವಾಗಲಿದೆ
ಅನ್ನುವ ಹಾಗೆ
ಅಥವ ಮುಗಿದೇಹೋದ ಹಾಗೆ
ಸಾವಿರಾರು
ತೇಪೆಯ ಅಂಥ ಟೆಂಟಿನತ್ತ
ಈ ದಿನಗಳಲಿ ಗಿರಾಕಿ
ಯಾರು ಬರುವರು
ಏಕೆ ಬರುವರು
ಅದಕ್ಕೆ ಬೆಂಕಿ
ಒಂದೆ ಉಳಿದಿರುವ ಬಾಕಿ…
ಅಷ್ಟಲ್ಲದೆ
ಕುರ್ಚಿ ಬೆಂಚು ನೆಲ
ನೆಲ ಕಚ್ಚಿದ ಹಳೆಯ ಕುಲ!
ಗಾಳಿಗೆ ಅಲ್ಲಾಡುವ ಪರದೆ
ಸುತ್ತಿ ಮೂಲೆಗುಂಪಾಗಿದೆ
ಪರದೆ ಹಿಂದೋಡಿ ನಟನಟಿಯರ
ತಡಕಿದ ಆ ಮುಗ್ಧ ಕಾಲ
ಕಳೆದು ಹೋಗಿದೆ
ಮತ್ತೆ ಬರದ ಹಾಗೆ…!
ಈಗ ಥಿಯೇಟರುಗಳೇ ಹಳೆಯ
ಸರಕು
ಐಷಾರಾಮಿಗಳದೇ ಝಳಕು!
ಟಿಕೆಟ್ ಬೂತಿನಲ್ಲೀಗ
ನೂಕುನುಗ್ಗಲಿಲ್ಲ
ಶಿಸ್ತಿನ ಸಾಲುಗಳು
ಮನೆಗಳಿಂದಲೆ
ಮುಂಗಡ ಖರೀದಿಗಳು
ಇತ್ಯಾದಿ…
ಕಾಳಸಂತೆ
ಮೊದಲಿಗಿಂತ ಈಗ ಬಲು ಹುಲುಸು!
ನೀರಿಂದ ಹಿಡಿದು ಎಲ್ಲದಕ್ಕು
ಕೈತುಂಬ ಕಾಸು
ಮತ್ತು ಪ್ಲಾಸ್ಟಿಕ್ ಹಣದ್ದೇ ಧಿಮಾಕು
ನಮ್ಮ ಅಂದಿನ ಚಡ್ಡಿ ಯುಗದ
ಟೆಂಟ್ ಸಿನಿಮಾ
ಈಗ ಹಳ್ಳಿ ಹಳ್ಳಿಯಲಿ
ಶೋಧಿಸಿದರು ಇಲ್ಲವೇ ಇಲ್ಲದ
ಸುದ್ದಿಯೇ ಅಸಲಿ…!
ಡಾ. ಅರಕಲಗೂಡು ನೀಲಕಂಠ ಮೂರ್ತಿ

ಈ ಜೀವನ ಒಂದು ಟೆಂಟ್ ಸಿನಿಮಾ
ಚನ್ನಾಗೆ ಇದೆ ಈ ಹೋಲಿಕೆ!
Congrats Murthy