ಕಾವ್ಯ ಸಂಗಾತಿ
ಶ್ರಾವಣದ ಮುಂಗುರುಳು
ಶ್ರೀನಿವಾಸ ಜಾಲವಾದಿ
ಶ್ರಾವಣಾ ಬಂತು ಈ ನೆಲದ ಘಮಲಿಗೆ
ಬಂತು ಬಂತು ತಂತು ತಂತು ನಗೆ ಮಲ್ಲಿಗೆ
ಶ್ರಾವಣದ ತಾಜಾ ಮುಗುಳು ಅರಳಿದೆ ದೇವ ಸ್ಮರಣೆ ಸಾಗಿದೆ ಎಲ್ಲೆಡೆ ಸಂತಸದಿ
ರಾಯರು ಬರುವರು ಶ್ರಾವಣದಲ್ಲಿಯೇ
ಎಲ್ಲೆಡೆ ಮೂಡುವುದು ಸಂತ ಕಿರಣಗಳು
ಅಮೃತ ಜೇನಿನ ಸಂಗಮವೇ ಬಾನದಲಿ
ನಡೆಯುವದಾಗ ವಿಸ್ಮಯದ ಪ್ರಭಾವಳಿ!
ಲಜ್ಜೆಯ ಹೆಜ್ಜೆ ನೋಡು ಶ್ರಾವಣ ವಧುವಿ
ನಲಿ ಧಾರಾಕಾರ ಮಳೆ ಜಿನುಗು ಬೆರಗು
ಅದುವೇ ನಿಸರ್ಗ ರಾಣಿಯ ತಂಬೆಲರು
ಜಗದ ದೀಪ ಶ್ರಾವಣಾ ಬಂದೇ ಬಂತಲ್ಲ!
ಮುಗಿಲು ಮುಸುಕಿ ಜಿನುಗು ಸುರಿಯುತಿದೆ
ಹಗಲಲಿ ನಸುಕು ಮೂಡಿ ಹೊಸ ರಾಗವ
ಹಾಡಿ ದಿವ್ಯ ಚೇತನ ಸಮಾಧಿ ಸ್ಥಿತಿ ತಲುಪಿ
ಸಿಕ್ಕಿತಲ್ಲಾ ಅವನ ದರ್ಶನ ಭಾಗ್ಯದ ಶ್ರಾವಣ!
ಮೌನ ಮಾತಾಡಿ ನಮನ ಸಲ್ಲಿಸಿತು ನಲಿದು
ಓಲಗದ ಮೊಗವರಳಿತು ಸಂತಸವ ಉಕ್ಕಿ
ಪುಣ್ಯವೇ ನಡೆದು ಬಂತು ಭುವನದ ಭಾಗ್ಯಕೆ
ಒಲಿದು ಕರೆಯಿತು ಶ್ರಾವಣದ ಮೋಹಕತೆಗೆ!
ಅದೇ ಅದೇ ಈ ಜಗದ ಚೈತನ್ಯದ ಕೊಳಲು
ಮುರಳಿ ಗಾನದ ಅಭಿಷೇಕದಲೆಯ ಗೊಂಚಲು!
ಶ್ರಾವಣದ ಕವನ ಸುಂದರವಾಗಿ ಮೂಡಿ ಬಂದಿದೆ.
ಅಭಿನಂದನೆಗಳು.
ರಾಮಕೃಷ್ಣ ಕುಲಕರ್ಣಿ, ಹುಬ್ಬಳ್ಳಿ.
ಅತೀ ಸುಂದರ ರಚನೆ, ಶ್ರೀನಿವಾಸ್ ಅವರಿಗೆ ಅಭಿನಂದನೆಗಳು