ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನನ್ನ ಹೃದಯದಿಂದ ನಿಮ್ಮ ಹೃದಯಕ್ಕೆ

ಕಮಲಾ ರಾಜೇಶ್

ನಾರಿಮಣಿ ತಾನೊಪ್ಪಿ ಮುದ್ದಾಡ ಬಯಸಿದರೆ
ಪೌರುಷದ ಗಂಡು ಸಹಕರಿಸಿ ನಲಿಯೆ
ನಾರಿಮಣಿ ಒಪ್ಪದಲೆ ಮುದ್ದಾಡ ಬಯಸಿದರೆ
ಕ್ರೂರಮೃಗ ನೀನಾಗ ಕಮಲಾತ್ಮವೆ
ನನ್ನ ಹೃದಯದಿಂದ ನಿಮ್ಮ ಹೃದಯಕ್ಕೆ
ಶುಭರಾತ್ರಿ


ನೀನಿರದ ರಾತ್ರಿಯಲಿ ನೆನಪುಗಳು ಸುಳಿಯುತಿರೆ
ನಾನೆದ್ದು ಕುಳಿತು ನೋಡಿದೆನು ಸುತ್ತ
ಮೌನದಲಿ ಮಾತಾಡಿ ನಿಶ್ಶಬ್ದ ಸರಿಸಿದರೆ
ನಾನಿನಗೆ ಸಖಿಯಾದೆ ಕಮಲಾತ್ಮವೆ
ನನ್ನ ಹೃದಯದಿಂದ ನಿಮ್ಮ ಹೃದಯಕ್ಕೆ
ಶುಭೋದಯ


ಬೇಲೂರ ಶಿಲೆಯಂತೆ ನೋಡ ಬಯಸಿದ ನಲ್ಲ
ಬೇಲೂರು ಇಲ್ಲ ಬನವಾಸಿ ಇಲ್ಲ
ಮಾಲೂರ ಪಕ್ಕ ಕೋಸಂಬರಿಯೆ ಸವಿಬೆಲ್ಲ
ಕಾಲ ನೂಕಿದಿರಲ್ಲ ಕಮಲಾತ್ಮವೆ
ನನ್ನ ಹೃದಯದಿಂದ ನಿಮ್ಮ ಹೃದಯಕ್ಕೆ ಶುಭೋದಯ


ಸುತನ ಭಂಡಾರವನು ಬರಿದು ಮಾಡುವ ತಂದೆ
ಸುತನ ಏಳ್ಗೆಯನು ಸಹಿಸದ ತಾಯಿಯು
ಜತನದಲಿ ಸೋದರನ ಹಾರೈಸದಿಹ ತಂಗಿ
ಕ್ಷಿತಿಯೊಳಗೆ ಸತ್ತಂತೆ ಕಮಲಾತ್ಮವೆ


About The Author

Leave a Reply

You cannot copy content of this page

Scroll to Top