ಕಾವ್ಯ ಸಂಗಾತಿ
ಉಸಿರು ಮೀರಿದ ಕವಿತೆ
ಮುತ್ತು ಬಳ್ಳಾ ಕಮತಪುರ
ಜಾರುವ ಮನಕೆ ರಂಗಿನ ದುನಿಯಾ ಸಮಾಧಾನ ನೀಡಬಹುದೆ |
ಸುತ್ತಲೂ ಕಲ್ಲು ಮುಳ್ಳುಗಳು ಬೆಸುಗೆಯ ನೆಪದಲಿ ಚುಚ್ಚಬಲ್ಲದೆ ||
ಬಿದ್ದ ನೆರಳಿಗೂ ಅಂಜಿಕೆ ಪಕ್ಕದ ನೆರಳಿನಲ್ಲಿ ಹೊಂದಾಣಿಕೆಯೆ ? |
ಮನದ ತುಮುಲ ನನ್ನೊಳಗಿನ ಪ್ರತಿಬಿಂಬ ಸಮತೆ ಕಾಣಬಲ್ಲದೆ ||
ಕಾಡುವ ನೆನಪು ನವಿರಾದ ಪಾದಗಳಿಗೆ ಮರಳು ಸೋಕಿದ ಹಾಗೆ |
ಬಯಕೆಯ ಬಲೆ ಎದೆಯ ಅಂಗಳದಲಿ ಸಂಚಲನ ಮಾಡಬಲ್ಲದೆ ||
ಬಿಟ್ಟು ಹೋದ ಹಾದಿಯಲಿ ನಿನ್ನದೆ ಮೆರವಣಿಗೆಯಲಿ ಒಬ್ಬಂಟಿ |
ಪ್ರೇಮವು ಸವಿ ಸವಿ ಕಾಣುವವರೆಗು ಮಧುರಸ ಉಳಿಯಬಲ್ಲದೆ ||
ಸಾವಿನ ಮನೆಯಲಿ ಮುತ್ತು ಕಣ್ಣ ಕಂಪನ ಉಸಿರು ಮೀರಿದ ಕವಿತೆ |
ಮೇಣದಂತೆ ಕರಗಿದ ಪ್ರೀತಿಯು ಮಸಣದ ಬಾಗಿಲು ಕಾಯಬಲ್ಲದೆ ||