
ಕಾವ್ಯ ಸಂಗಾತಿ
ತೀರವಿರದ ಕಡಲು
ಅರುಣಾ ನರೇಂದ್ರ
ನೀನಿಲ್ಲದಿದ್ದರೆ..

ನೀನಿಲ್ಲದಿದ್ದರೆ ಹಗಲಿಗೂ ವ್ಯೆಥೆ
ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುತ್ತದೆ
ನೀನಿಲ್ಲದಿದ್ದರೆ ಬೆಳಕಿನ ಕಣ್ಣಿಗೂ
ಕತ್ತಲೆ ಕವಿಯುತ್ತದೆ

ನೀನಿಲ್ಲದಿದ್ದರೆ
ಕತ್ತಲೆಯೂ ಕೊರಗುತ್ತದೆ
ನೀನಿಲ್ಲದಿದ್ದರೆ
ಗಾಳಿಯೂ ಸೊರಗುತ್ತದೆ

ನೀನಿಲ್ಲದಿದ್ದರೆ
ಇರುಳಿಗೂ ಇರುಸು ಮುರುಸು
ನಿನಗಾಗಿ ಅರಳಿದ ರಾತ್ರಿ ರಾಣಿ
ಮುಖದಲ್ಲೂ ಬರಿಯ ಮುನಿಸು

ನೀನಿಲ್ಲದಿದ್ದರೆ
ಹಗಲಿಗೂ ಉಸಿರಿಲ್ಲ
ಇಡುವ ಹೆಜ್ಜೆಯಲಿ
ಗೆಜ್ಜೆಯ ಧ್ವನಿ ಇಲ್ಲ
