ಋತುಸ್ರಾವ

ಕಾವ್ಯ ಸಂಗಾತಿ

ಋತುಸ್ರಾವ

ಶಂಕರಾನಂದ ಹೆಬ್ಬಾಳ

ಮಗಳಿಗೆ ಹುಷಾರಿಲ್ಲ
ನನಗೆ ನಿಲ್ಲದ ಋತುಸ್ರಾವ
ಹೇಗೆ ಹೊರಡಲಿ..

ಮಗಳೋ….
ಈಗ ಋತುಮತಿಯಾದ
ಸಮಯ….!
ನನಗೆ ಒಳಗೊಳಗೆ
ಭಯ..!
ನೀಡುವರಾರು
ನನಗೆ ಅಭಯ…!

ಮುಟ್ಟನ್ನು
ಶಪಿಸಲೆ.?
ಸ್ವೀಕರಿಸಲೆ..?
ಧಿಕ್ಕರಿಸಲೇ..?
ಬಾ ಎಂದು ಅಪ್ಪಿ
ಮುದ್ದಾಡಲೇ..?

ಅಪ್ಪ ನಡುನೀರಲ್ಲಿ
ಕೈಬಿಟ್ಟ
ಜೀವನ ದೋಣಿ
ನಡೆಸುವುದೆಂತು..?
ಪುತ್ರಿಯೀಗ ಋತುಮತಿ
ಸರಿಯಿಲ್ಲ
ನಿನ್ನ ಗ್ರಹಗತಿ….!

ಪ್ರತಿ ಹೆಣ್ಣಿಗೂ
ತಪ್ಪಿದ್ದಲ್ಲ ಇದು,
ತಿಂಗಳಿಗೊಮ್ಮೆ
ಅನಿವಾರ್ಯ..!
ಅನುಭವಿಸಲೆಬೇಕಲ್ಲವೇ..!
ಒಡಲ ಸಂಕಟ..
ನೆತ್ತರು ಹರಿದರೇನು..?
ಪಾಲಿಗೆ ಬಂದದ್ದು
ಪಂಚಾಮೃತ
ಉಣಲೆಬೇಕಲ್ಲವೇ..!


Leave a Reply

Back To Top