ಸೆಲೆಬ್ರೆಟಿಗಳು ಮತ್ತು…

ಅಂಕಣ ಸಂಗಾತಿ

ಪ್ರಸ್ತುತ

ಸೆಲೆಬ್ರೆಟಿಗಳು ಮತ್ತು…

ಆಕೆಗೆ ರವಿ ಬೆಳೆಗೆರೆ ರೈಟಿಂಗ್ ಸ್ಟೆöÊಲ್ ಇಷ್ಟ . ಅವನಿಗೆ ಪುನೀತ್ ಫೈಟಿಂಗ್ ಇಷ್ಟ. ಹೀಗೆ ಒಬ್ಬೊಬ್ಬರಿಗೆ (ಒಬ್ಬೊಬ್ಬರು) ಒಂದೊಂದು ಮಾಡೆಲ್ (ಆದರ್ಶ/ಮಾದರಿ)ಯಾಗಿರುತ್ತಾರೆ . ಮಾತು , ನಗು , ವ್ಯಕ್ತಿತ್ವ, ಬದುಕು ಹೀಗೆ, ಹ್ಞಾಂ! ಈಗ ನನಗೊಂದು ಮಾತು ನೆನಪಾಗುತ್ತಿದೆ ,”ಕನಸು ಕಾಣಲುಧೈರ್ಯ ಬೇಕು .”

   ಮೊನ್ನೆ ನಿರಾಣಿ ಸರ್ ಟಿ ವಿ ಸಂದರ್ಶನದಲ್ಲಿ ಹೇಳಿದ್ರು. “ ನಾನು ಕುಟುಂಬದವರೊಂದಿಗೆಒಮ್ಮೆ ಮೈಸೂರುದಸರೆಗೆ ಹೋಗಿದ್ದೆ . ಆಗ ದಸರೆಯನ್ನು ನಾಡಹಬ್ಬವಾಗಿಆಚರಣೆಗೆತಂದ ನಾಲ್ವಡಿಕೃಷ್ಣರಾಜಒಡೆಯರಕಾರ್ಯ ಕ್ಷೇತ್ರಗಳ ಬಗ್ಗೆ ಒಮ್ಮೆಅವಲೋಕಿಸುತ್ತಾ ನಾನೂ ಯಾಕ್‌ಅವರಂತಾಗಬಾರದು ? ಎನಿಸಿ ಅಂದಿನಿಂದಲೇಅವರನ್ನ ಮಾಡೆಲ್ ಆಗಿ ಮಾಡಿಕೊಂಡು ಮುಂದೆ ಆ ಒಡೆಯರುತಮ್ಮನ್ನು ತೊಡಗಿಸಿಕೊಂಡ ಕ್ಷೇತ್ರಗಳಲ್ಲೆ ನಾವೂ ತೊಡಗಿಸಿಕೊಂಡು ಇಂದುರಾಜ್ಯದಲ್ಲೇ ಸಕ್ಕರೆಉತ್ಪಾದನೆಯಲ್ಲಿ ಮೂರನೆಯ ಸ್ಥಾನದಲ್ಲಿರುವುದು .” ಎಂದು ಹೇಳುತ್ತಿವಾಗ ಅವರ ಬಗ್ಗೆ ಹೆಮ್ಮೆ ಎನಿಸಿತು .

   ಹಾಗೆ ಕೆಲವರುಚಿತ್ರನಟರನ್ನು , ಕೆಲವರುಕ್ರಿಕೆಟ್‌ತಾರೆಯರನ್ನು , ರಿಚರ್ಡ ಬ್ರಾನ್ಸನ್ ನಂತಹಅದ್ಭುತ ಸಾಹಸಿಗರನ್ನು , ಸಾಹಿತಿಗಳನ್ನು ,ರಾಜಕಾರಣಿಗಳನ್ನು ತಮ್ಮ ಮಾಡೆಲ್ ಆಗಿ ಹೊಂದಿರುತ್ತಾರೆಅಥವಾಅಭಿಮಾನಿಯಾಗಿಆರಾಧಿಸುತ್ತಾರೆ . ಇದುಅತಿಯಾಗಿತಮ್ಮ ನೆಚ್ಚಿನತಾರೆಯರುಅನಿರೀಕ್ಷಿತ ನಿಧನರಾದಾಗ ಆ ನೋವನ್ನು ಭರಿಸಲಾಗದೇಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿವೆ . ನಿಷ್ಟಾವಂತರಾಜಕಾರಣಿ ಮಾನ್ಯ ಶ್ರೀವೈ ಎಸ್‌ರಾಜಶೇಖರರೆಡ್ಡಿ ಹೆಲಿಕ್ಯಾಪ್ಟರ್‌ಅಪಘಾತದಲ್ಲಿ ಅಸು ನೀಗಿದಾಗ ಎಷ್ಟೋ ಜನಆತ್ಮಹತ್ಯೆ ಮಾಡಿಕೊಂಡಿದ್ದು ವರದಿಯಾಗಿತ್ತು .ಆದರೆಅಭಿಮಾನಅತಿರೇಕ ಒಳ್ಳೆಯದಲ್ಲ .

 ಈಗ ಮಾಡೆಲ್ ಗಳ ಬಗ್ಗೆ ಒಂದಿಷ್ಟು … ಯಾವುದೇಕ್ಷೇತ್ರದಲ್ಲಿ ಮಿಂಚಿದವರು ಸೆಲೆಬ್ರೆಟಿ ಎನಿಸಿಕೊಳ್ಳುತ್ತಾರೆ .ಅಂಥವರಜವಾಬ್ದಾರಿದೊಡ್ಡದು .ತಮ್ಮನ್ನುಅದೆಷ್ಟೋಜನ (ಫಾಲೋರ‍್ಸ್) ಅನುಕರಿಸುತ್ತಿದ್ದಾರೆಎಂಬುದರ ಪರಿಜ್ಞಾನದಜೊತೆಗೆತಮ್ಮಜೀವನ ಶೈಲಿಯನ್ನು ಹೋದಿರಬೇಕಾಗುತ್ತದೆ .

ಒಬ್ಬ ನಾಯಕನನ್ನುದೇವರಂತೆ ನೋಡುವಜನರುಆತನ ವೈಯಕ್ತಿಕ ಬದುಕನ್ನುಅವಲೋಕಿಸುತ್ತಿರುತ್ತಾರೆ. ಆತನ ಬದುಕಿನ ಕಲಹ ವ್ಯಾಜ್ಯಗಳೊಂದಿಗೆ ಕೂಡ ಅಭಿಮಾನಿಗಳುಆತನನ್ನುತೂಕಿಸುತ್ತಾರೆ .ಪರದೆಯ ಮೇಲಿನ ನಾಯಕತನ್ನ ಬದುಕಿನಲ್ಲಿ ವಿಲನ್ ಆದಾಗ ಅಭಿಮಾನಿಗಳಿಗೆ ಭ್ರಮ ನಿರಸನವಾಗಿ ಯಾವುದು ಸತ್ಯ ? ಪರದೆಯ ಮೇಲಿನದಾ? ವೈಯಕ್ತಿಕವಾ? ದ್ವಂದ್ವವೆನಿಸಿ ನಾಯಕ ವಿಲನ್ ಆಗುತ್ತಾನೆ .

   ಈ ಲೇಖನದಉದ್ದೇಶ ಹೇಳಿಬಿಡುತ್ತೇನೆ . ೧೪/೬/೨೦೨೦ ರಂದು ಪ್ರಸಿದ್ಧ ಕ್ರಿಕೆಟಿಗ ಎಂ, ಎಸ್‌ಧೋನಿ ಅವರಕ್ರಿಕೆಟ್ ಬದುಕನ್ನುತೆರೆಮೇಲೆಕಣ್ಣಿಗೆಕಟ್ಟುವಂತೆ ಮನಸ್ಸಿಗೆ ನಾಟುವಂತೆ ಅಭಿನಯಿಸಿದ , ೩೪ ರ ಪ್ರಾಯದ ಮುದ್ದು ಮುಖದ ನಾಯಕ ಸುಶಾಂತ್ ಸಿಂಗ್ ರಜಪೂತ್ ೧೬ ಕಿಂತಲೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಆತ್ಮಹತ್ಯೆಗೆ ಶರಣಾಗಿದ್ದುಅವರಕೋಟ್ಯಂತರ ಅಭಿಮಾನಿಗಳಿಗೆ ದೊಡ್ಡ ಶಾಕ್‌ಆಯ್ತು . ಒಬ್ಬ ಮೀನುಗಾರನಿಗೆಎಲ್ಲಾ ವಿದ್ಯೆಗಳು ತಿಳಿದಿದ್ದು ಆಪತ್ಕಾಲದಲ್ಲಿಈಜುವುದೇ ತಿಳಿಯದಿದ್ದರೆ ? ಹಾಗೆ ತೆರೆ ಮೇಲೆ ಎಂತಹ ಪಾತ್ರಗಳಿಗೂ ಜೀವ ತುಂಬ ಬಲ್ಲ ಒಬ್ಬ ನಾಯಕತನ್ನ ಬದುಕಿನ ಸಮಸ್ಯೆಗಳನ್ನು ಎದುರುಸುವಲಿ ್ಲ(ಅದೇನೇಇರಲಿ) ಸೋತಿದ್ದು ವಿಷಾದನೀಯ . ಅದೆಷ್ಟು ಅಭಿಮಾನಿಗಳಿಗೆ ಮಾದರಿಯಾದ ಶಶಾಂತ್ ಹೀಗೆ ಮಾಡಿಕೊಂಡಿದ್ದು ಅದೆಷ್ಟು ಸರಿ ?“ ಯಾರಿಗಿಲ್ಲ ಪರದಾಟ? “ಒಬ್ಬೊಬ್ಬರಿಗೆಒಂದೊAದೊ ಸಮಸ್ಯೆ.ಕೆಲವು ತಾವಾಗೇ ಬಂದರೆ ಕೆಲವನ್ನು ನಾವಾಗೇ ಮೈಮೇಲೆ ಎಳೆದುಕೊಂಡಿರುತ್ತೇವೆ ಅದು ಬೇರೆ.ಯಾವುದಕ್ಕೂ “ಈಸಬೇಕು ಇದ್ದುಜೈಸಬೇಕು”

ತಾರೆಯರಷ್ಟೇಅಲ್ಲಅಪ್ಪಅಮ್ಮಂದಿರೂ ಮಕ್ಕಳಿಗೆ ಒಳ್ಳೆಯ ಮಾಡೆಲ್‌ಆಗಿರುತ್ತಾರೆ. ಆಗಿರಬೇಕು . ಹಾಗಿರುವಾಗಅವರಿಗೆತಮ್ಮ ನೈತಿಕಜವಾಬ್ದಾರಿಗೊತ್ತಿರಬೇಕು .ಬಿಡೋಕಾಗ್ತಿಲ್ಲಎಂದುಗುಟಕಾಚೀಟನ್ನು ಮಕ್ಕಳ ಕೈಲಿ ತರಿಸಿಕೊಂಡರೆ ಅಪ್ಪನಗೌರವ ಕೆಳಗಿಳಿಯುತ್ತದೆ. ಈಗ ಕರೋನದ ಸಂದರ್ಭದಲ್ಲಿ ಮಾಸ್ಕ್ ಹಾಕಿಕೊಂಡೇ ಹೊರಗೆಹೋಗು .ತುಂಬಾಜನ ಸೇರುವಲ್ಲಿಆದಷ್ಟುದೂರವಿರು .ಎಂದು ಕಾಳಜಿ ,ಪ್ರೀತಿಯಿಂದ ಹೇಳುವ ಅಪ್ಪತಾನೇದೂರದೂರಿಗೆ ಮಾಸ್ಕ್ ಹಾಕದೇ ಮದುವೆ , ಬರ್ಥಡೇ ಪಾರ್ಟಿಗಳಲ್ಲಿ ಭಾಗವಹಿಸಿದಾಗ ಮಕ್ಕಳಿಗೆ ಹೇಳುವ ಮಾತುತೂಕ ಕಳೆದುಕೊಳ್ಳುತ್ತದೆ. ನಡೆ ನುಡಿಗಳಲ್ಲಿ ಒಕ್ಕಟ್ಟಿರಬೇಕಲ್ಲವೇ?

   ಸೆಲೆಬ್ರೆಟಿಗಳನ್ನು ಫಾಲೋ ಮಾಡುತ್ತಾ ನಮ್ಮನ್ನೇ ನಾವು ಮರೆತರೆ ಹೇಗೆ ? ನಮ್ಮತನದಿಂದ ನಾವು ಇತರರಿಗೆ ಮಾಡೆಲ್‌ಗಳಾಗಬಹುದಲ್ಲವೆ ?

ಅವರನನುಕರಿಸುವುದು ಸಾಕು , ನಿನ್ನನುಸರಿವಂತೆ ಬದುಕು .


                                                           ನಿಂಗಮ್ಮ ಭಾವಿಕಟ್ಟಿ

ನಿಂಗಮ್ಮ ಭಾವಿಕಟ್ಟಿ ಅವರು ಪಂಚ ವಾಣಿ ಪತ್ರಿಕೆಯಲ್ಲಿ ಅಂಕಣ ಬರಹಗಾರ್ತಿ. ‘ಕುಶಲೋಪರಿ’ ‘ಹಾರೈಕೆ’ ಅವರ ಕವನ ಸಂಕಲನಗಳು ‘ವಚನ ಸಂಭ್ರಮ ಆಧುನಿಕ ವಚನಗಳು’ ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ಹೈಕುಗಳು, ಹನಿಗಳನ್ನು ಮನಮುಟ್ಟುವಂತೆ ಕಟ್ಟುವ ಲೇಖಕಿ ಬಾಗಲಕೋಟೆ ಜಿಲ್ಲೆಯ ಹುನಗುಂದದವರು. ಓದು, ಬರಹ, ಪ್ರವಾಸ ಅವರ ಹವ್ಯಾಸಗಳಾಗಿದ್ದು ಅವರಿಗೆ ‘ಕಾವ್ಯಶ್ರೀ’ ‘ರಾಜ್ಯೋತ್ಸವ ಪ್ರಶಸ್ತಿ’ ‘ಆಜೂರ್’ ಪ್ರಶಸ್ತಿಗಳು ಅರಸಿ ಬಂದಿವೆ  ಆಕಾಶವಾಣಿಯಲ್ಲಿ ಅವರ ಚಿಂತನ ಸಂದರ್ಶನಗಳು ಮೂಡಿಬಂದಿವೆ.

Leave a Reply

Back To Top