ಅಣ್ಣನ್ ಸಮಾಜ ಸೇವೆ      

ಹಾಸ್ಯ ಸಂಗಾತಿ

ಅಣ್ಣನ್ ಸಮಾಜ ಸೇವೆ 

ಬಿ.ಟಿ.ನಾಯಕ್

‘ಏಯ್ ಮಗಾ,  ಬಾರಲೋ ಇಲ್ಲಿ’ ಎಂದು ಅಣ್ಣಕೂಗಿದಾಗ  ಸೀನ ತಲೆ ಕೆರೆಯುತ್ತ ಬಂದು ಅಣ್ಣನ ಮುಂದೆ ನಿಂತು ಕೇಳಿದ.

‘ಅಣ್ಣಾ…., ನಂಗೆ ಕರೆದಂಗಾಯಿತು… ಏನಣ್ಣಾ ?’

‘ಲೋ…..ಮಗಾ, ನಾವ್ ಇಲ್ಲಿತನಕ ಶ್ಯಾನೆ ದುಡುದಿವಿ ಮತ್ತು ಸಾಕಾಗೈತಿ , ಅದ್ಕೇ ಒಂದ್ ಸಮಾಜ ಸೇವೆ ಮಾಡುವಾ ಅಂತ ಅನಸತೈತಿ. ಹೇಗೆ ಮಗಾ, ಮಾಡಬಹುದಾ ಈ ಅಣ್ಣಾ ?’

‘ಸ್ವಲ್ಪ ಕಷ್ಟ ಕಣಣ್ಣೋ, ಇದು ಹೊಂದಾಕಿಲ್ಲನಮ್ಗೆ.  ಅಣ್ಣಾ.., ಏನಿದ್ರೂ ನಾವು ಚೆನ್ನಾಗಿ ಉಂಡು, ಕುಡ್ದು  ಜಾಲಿಯಾಗಿ ಇರಬೇಕಣ್ಣ. ನಮ್ಗ ಟೆನ್ಶನ್ ಬ್ಯಾಡ ಕಣಣ್ಣೋ’ ಎಂದ ಶಿಷ್ಯೋತ್ತಮ.

‘ಹೌದಾ…. ನಮ್ಗೆ  ಒಗ್ಗಕಿಲ್ಲ ಅಂತೀಯಾ ?’

‘ಹೌದಣ್ಣೋ, ಇಲ್ಲಿ ತನಕ ಅಣ್ಣ ಮತ್ತು ನಾವು ಯಾರಿಗೂ ಬಗ್ಗಿಲ್ಲ. ಸಮಾಜ ಗಿಮಾಜ ಅಂದ್ರೆ ತಗ್ಗಿ ಬಗ್ಗಿ ಹೋಗಬೇಕಾಗತೈತಿ. ಇದು ಕಷ್ಟ ಕಣಣ್ಣೋ. ಬ್ಯಾಡ ಅಂತ ಅನ್ನಿಸತೈತಿ’ ಎಂದು ಹೇಳಿ ಮುಗಿಸಿದ.

‘ಲೋ ಸೀನ, ಆ ಗೋಪಿನ ಕರೀಲಾ,  ಇದ್ರಾಗ ಒಸಿ ಅವನ್ನೂ ಕೇಳುವಾ‘ ಎಂದಅಣ್ಣ. 

‘ಹಾಂ..ಆಯಿತಣ್ಣ ‘ ಎಂದು ಅವನನ್ನು ಕರೆಯಲು ಹೋದ. ಸ್ವಲ್ಪ ಹೊತ್ತಿನಲ್ಲಿ ಆತನನ್ನು ಹಾಜರು ಪಡಿಸಿದ.

‘ಲೋ ಗೋಪೀ, ಸೀನ ಏನಾದ್ರೂ ವಿವರ್ಸಿ ಯೇಳಿದ್ನಾ ?’

‘ಯೇಳಿದ್ನ ಕಣಣ್ಣೋ, ನಂಗ್ಯಾಕೋ ಅದು ಸಂದಾಕಿಲ್ಲ ಅಂತ ಅನಸತೈತಿ, ಆದ್ರೂ ಅಣ್ಣಂಗೆ ಮನಸ್ ಬಂದೈತಂದ್ರೇ ನಾವ್ ವಸಿ ಕಷ್ಟ ಪಡಬೇಕ್ ಬಿಡಣ್ಣ’ ಎಂದ.

‘ಆಲೆಲೇ…. ಲೌಡಿ ಮಗ ಇವ, ಅಣ್ಣನ್ ಅರ್ಥ ಮಾಡ್ಕೊಂಡ. ಮುಂದೆನ್ಲಾ ?’

;ಅಣ್ಣಾ, ನಂಗ ಒಬ್ಬಾಕಥಿ ಬರಿಯೋನುಪರಿಚಯಅವ್ನೆ. ಇದ್ರ ಬಗ್ಗೆ ತಿಳಿಸಿ ಹೇಳ್ತಾನ. ಅವನ್ನ ಕರ್ಕೊಂಡು ಬರ್ತೇನೆ’ ಎಂದ.

‘ಆಯಿತು ಬಿಡ್ಲಾ, ನಾಳೆ ಆ ವಯ್ಯನ ಮರ್ಯಾದಿಲಿಂದ ಕರ್ಕೊಂಡು ಬಾ, ಮತ್ತ ನಮ್ ಚಾಳಿಯಂಗ ನಡ್ಕ ಬ್ಯಾಡ.’ 

‘ಆಯಿತು ಕಣಣ್ಣೋ… ಚಿಂತಿ ಬಿಡು ನಾಳೆ ಅಣ್ಣನ್ ಕೆಲ್ಸ ಆಯಿತು ಅಂತ ಅನ್ಕೋಬೋದು’ ಎಂದು ಹೇಳಿ ರೈಟ್ ಹೇಳಿದ.

       -2-

ಮಾರನೇ ದಿನ ಸಾಹಿತಿ ಕನಕಯ್ಯ ಇವರ ಕೆಟ್ಟ ಕಣ್ಣಿಗೆ ಬಿದ್ದರು. ಪಾಪ ಅವರೋ ಅತ್ಯವಶ್ಯದ

ಕೆಲಸಕ್ಕೆಮೈಸೂರಿಗೆ ಹೋಗಬೇಕು ಎಂದು ಚಡಪಡಿಸುತ್ತಿದ್ದರು.  ಗೋಪಿ ಬಂದು ಅಡ್ಡಗಾಲು ಹಾಕಿದ.

‘ಅಣ್ಣನ್ ಆರ್ಡರ್ ಆಗಿದೆ,ನೀವ್ ಬರಲೇಬೇಕು’ಎಂದು  ಹೇಳಿದ. ಅದಕ್ಕೆ ಸಾಹಿತಿಗಳು ತಮ್ಮ ಸೌಜನ್ಯದ ಭಾಷೆಯಲ್ಲಿಯೇ ಹೇಳಿದರು; 

‘ಸ್ವಾಮಿ, ನನಗೆ ತುರ್ತಾಗಿ ಮೈಸೂರಿಗೆ ಹೋಗಬೇಕಾಗಿದೆ. ನಾನು ಈಗ ಹೋಗದಿದ್ದರೆ ನನಗೆ ಬಹಳೇ ಕಷ್ಟ. ಅದಕ್ಕೇ  ತಮ್ಮ ಯಜಮಾನರಿಗೆ ನನ್ನ ಸಮಸ್ಯೆಯನ್ನು ತಿಳಿಸಿ, ಬೇಕಾದ್ರೇ  ಇನ್ನೊಂದು ದಿನ ಬರ್ತೇನೆ’ ಎಂದರು.

ಆಗ ಗೋಪಿ ಸಿಟ್ಟಿನಿಂದ ‘ಅದೇನಯ್ಯ ನಿನ್ನಾಟ, ನಮ್ಮಣ್ಣ ನಿನ್ಕಣ್ಗೆಹೆಂಗ್ ಕಾಣ್ತಾನೆ, ಏನು ಮರ್ಯಾದೆ ಸ್ವಲ್ಪಾದ್ರೂ ಬೇಡ್ವಾ ?’

‘ಅಯ್ಯೋ ಪುಣ್ಯಾತ್ಮ ನಾನೆಲ್ಲಿ ತಪ್ಪು ಹೇಳಿದೆ.  ನನ್ನ ತೊಂದ್ರೆ ನಾನು ಹೇಳಿಕೊಂಡೆ ಅಷ್ಟೇ ‘ ಎಂದ ವಿನಯದಿಂದ. ಅದಕ್ಕವನು;

‘ಅದೆಲ್ಲ ನಂಗೊತ್ತಿಲ್ಲ, ನನ್ ಕೆಲ್ಸ ಏನಿದ್ರೂ ನಿಮ್ಮನ್ ಕರೆದೊಯ್ಯೋದು, ನಿಮ್ ತೊಂದ್ರೆ ಅಣ್ಣನ್ ಹತ್ರ ಹೇಳ್ಕೊಬೇಕಷ್ಟೇ.  ನಾನೀಗ್ ಓಯ್ತಿನಿ, ನಾಳೆ ನೀವಲ್ಲಿಗ್ಬನ್ನಿ’ ಎಂದು  ಹೊರಟುಹೋದ.

ಕನಕಯ್ಯಗೆದೊಡ್ಡಪೀಕಲಾಟಬಂದುಬಡಿದುಕೊಂಡಿತು. ಆತನಿಗೆಈಗಅನಿವಾರ್ಯಕೂಡ.  

ಮಾರನೇ ದಿನ ಅಣ್ಣನ ದರ್ಬಾರಿನಲ್ಲಿ ಸಭೆ ನಡೆಯಿತು. ಕನಕಯ್ಯ ಸರಿಯಾದ ಸಮಯಕ್ಕೆ ಬಂದರು. ಸೀನ, ಗೋಪಿ, ರುಪ್ಲ್ಯಾ ಧೀರಾ  ಮತ್ತು  ಕರಿಯಾ ಸೇರಿದರು. ಗೋಪಿ ಕನಕಯ್ಯನನ್ನು ಅಣ್ಣಗೆ  ಪರಿಚಯ ಮಾಡಿಕೊಟ್ಟ.

‘ ಅಣ್ಣೋ , ಇತ್ನ ಹೆಸರು ಕನಕಯ್ಯ ಅಂತ.  ದೊಡ್ಡ ದೊಡ್ಡ ಕಥೀ ಬರೀತಾನೆ. ಬಹಳೇ ಬುದ್ಧಿವಂತ ಮತ್ತು ಭಾಳ ವಿಷಯ ತಿಳ್ಕೊಂಡಾನೆ.  ನಮ್ಮ ಮನಿತಾವ ಇರ್ತಾನೆ. ಅಂತಹೇಳಿ;

‘ಕನಕಣ್ಣ, ಅಣ್ಣಾಗೆ ತಲೆ ಬಗ್ಸು’ ಎಂದ. ಪಾಪ  ಆತ ಹಾಗೆಯೆ ಮಾಡಿದ. ಆಗ ಅಣ್ಣ ;

‘ಸಾಯಿತಿಗಳೇ, ನಾವೇನೋಗೂಂಡಾಗಳೇ ನಿಜಾ , ಆದ್ರೇ ,ನಾವೂ  ಮನಸ್ಯಾಗೆ ಪ್ರೀತಿಮಡಿಗಿರ್ತಿವೀ.  ಸಮಾಜ ನಮ್ ಮಾತು ಕೇಳ್ದಿದ್ದಾಗ ನಾವ್ ಕೇಳಂಗ್ಮಾಡ್ತೀವಿ . ಅದುತಪ್ಪಾ ?.

                                                 -3-

ಅದು ಹೋಗ್ಲಿ ಬಿಡಿ, ಏನೋ ಜನ್ರಿಗಾಗಿ ಒಂದ್ ಒಳ್ಳೆ ಕೆಲ್ಸ ಮಾಡ್ಬೇಕೆಂದು ಮನಸ್ಸಾಗೈತಿ ಅದ್ಕೇ ನೀವು ನಂಗೆ ತಿಳಿಸಿ ಹೇಳ್ರಿ ಏನ್ ಮಾಡಬೌದು ಅಂತ .’ ಅದಕ್ಕೆ ಸಾಹಿತಿಗಳು ಹೀಗೆ ಹೇಳಿದ್ರು;

‘ನೋಡಿ, ನಿಮ್ಮ ಮನಸ್ಸಿನಲ್ಲಿ ಒಂದು ಒಳ್ಳೆ ವಿಚಾರ ಬಂದಿದೆ ಎಂದರೇ, ಬೀಜ ಬಿತ್ತಿದಂಗೆ. ಇನ್ನೇನು ಮೊಳಕೆ ಒಡೆದ ತಕ್ಷಣ ಕಾಳಜಿ ಮಾಡಿದ್ರೆ ಅದು ಚೆಂದದ ಸಸಿ ಆಗುತ್ತೆ ಅಲ್ವ ?

‘ಅರ್ಥಾಗ್ಲಿಲ್ಲ, ವಸಿಬಿಡ್ಸಿಹೇಳಿಸಾಯಿತಿಗಳೇ ‘ ಎಂದಅಣ್ಣ.

ನೋಡಿ, ನೀವು ಮಾಡಬಹುದಾದ ಸಮಾಜ ಸೇವೆಗಳು  ಬಹಳಷ್ಟು ಇವೆ.  ಉದಾಹರಣೆಗೆ, ನೀವು ನಿಮ್ಮ ಏರಿಯಾವನ್ನು ಸ್ವಚ್ಛ ಮಾಡಬಹುದು.ಅಂದ್ರೇ, ಕಸ ಕಡ್ಡಿ ಎತ್ತಿ ಹಾಕೋದು, ಜನರಿಗೆ ಆರೋಗ್ಯದಬಗ್ಗೆ ತಿಳಿಸಿ ಹೇಳುವದು. ಇದು ಆಗಬಹುದಾ ?’ ನಡುವೆ ಗೋಪಿ ಬಾಯಿ ಹಾಕಿದ;

‘ಸಾಯಿತಿಗಳೇ, ಇದು ನಮ್ಮ ಜಾಯಮಾನಕ್ಕೆ ಒಗ್ಗೋದಿಲ್ಲ, ಏಕೆಂದ್ರೇ ನಮಗೆ ಕೋಪ ಜಾಸ್ತಿ, ಯಾವನಾದ್ರೂ ನಮ್ ಮಾತು ಕೇಳದಿದ್ರೆ ಹೊಡದಾಕಿಬಿಡ್ತೀವಿ. ಬೇರೆ ಏನಾದ್ರೂ ಇದ್ರೇ ಹೇಳ್ಕಳಿ’.

‘ಹಾಗಾದರೇ , ನೀವು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸಹಾಯ ಮಾಡಬಹುದಾ? ಅಂದ್ರೇ ಆಸ್ಪತ್ರೆಯಲ್ಲಿನ ಒಳಗಿನ ರೋಗಿಗಳಿಗೆ ತಾವು ಹಾಲು, ಬ್ರೆಡ್, ಮತ್ತು ಹಣ್ಣುಗಳನ್ನೂ ಹಂಚಬಹುದಾ ?’

ಆಗ ಖುದ್ದಾಗಿ ಅಣ್ಣನೇ ಹೇಳಿದ;

‘ನನ್ನ ಹುಟ್ಟಿದಬ್ಬಕ್ಕೆ ರುಪ್ಲ್ಯಾ, ಕರಿಯ ಇದರ ವ್ಯವಸ್ಥೆ ಮಾಡ್ತಾರೆ. ಇದು ಬೇಡ ಇನ್ನೇನಾದರಿದ್ರೇ   ಹೇಳಣ್ಣ.

‘ಆಯಿತು, ಇನ್ನೊಂದು ಇದೆ. ಅದೇನೆಂದ್ರೆ, ನೀವು ರಕ್ತ ದಾನ ಮಾಡಬಹುದಲ್ವಾ ?’

‘ಹಾಗಂದ್ರೇ …’ ಧೀರಾ ಕೇಳಿದ.

‘ಅಂದ್ರೇ ನೀವು ಒಂದು ರಕ್ತ ದಾನ ಶಿಬಿರ ಮಾಡಬೇಕು. ಯಾವುದಾದ್ರೂ ಒಂದು ಆಸ್ಪತ್ರೆ ಗೊತ್ತು ಮಾಡಿಕೊಂಡು, ಅಲ್ಲಿದ್ದ ಡಾಕ್ಟರ್ ಮತ್ತು ಸಿಬ್ಬಂದಿ ಜೊತೆಗೆ ಸೇರಿ ಇದನ್ನು ಮಾಡಬಹುದು. ಇಲ್ಲದಿದ್ದರೆ ಮೊಬೈಲ್ ಬ್ಲಡ್ ಬ್ಯಾಂಕ್ ಅಂತಾ ಇರುತ್ತೆ. ಬೇಕಾದ್ರೆ ನಾನು ವಿವರ ತಿಳಿದುಕೊಂಡು ನಿಮಗೆ ತಿಳಿಸುತ್ತೇನೆ’ ಎಂದರು ಕನಕಯ್ಯ .

‘ಅಷ್ಟು ಮಾಡಿ ನಮ್ಗೆ ಸಾಯ ಮಾಡಿ ಸಾಯಿತಿಗಳೇ’ ಎಂದ ಅಣ್ಣ.

‘ಹಾಗಾದ್ರೆ, ನನಗೆ ಈಗ ಹೋಗಲು ಬಿಡಿ, ನಾನು ಮೈಸೂರಿಗೆ ಹೋಗ್ಬೇಕು’ ಎಂದು ಕನಕಯ್ಯ ಚಡಪಡಿಸಿದಾಗ ಅಣ್ಣ;

                                               -4-

‘ಆಯಿತು, ನಾಳೆ ಅಥವಾ ನಾಡಿದ್ದು ನನಗೆ ಫೋನ್ ಮಾಡಿ, ಇಲ್ಲದಿದ್ದರೆ ಗೋಪಿಯನ್ನ ಕಳಿಸುತ್ತೇನೆ.’ ಅದಕ್ಕೆ ಆತ ಹೇಳಿದ;’ ನೀವು ಯಾರೂ ಬರುವುದು ಬೇಡ ನಾನೇ ಫೋನ್ ಮಾಡ್ತೇನೆ’ ಎಂದ.

‘ಲೋ ಸೀನ, ಸಾಯಿತಿಗಳನ್ನು ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಬಿಟ್ಟು ಬಾ.’ ಎಂದು ಹೇಳಿ ಅಣ್ಣ ಸಾಹಿತಿಗಳಿಗೆ ಫೋನ್ ಮಾಡಲು ಇನ್ನೊಮ್ಮೆ ನೆನಪಿಸಿದ. . 

ಕನಕಯ್ಯಮೂರುನಾಲ್ಕುದಿನಗಳಾದಮೇಲೆಅಣ್ಣನಿಗೆಫೋನಿನಲ್ಲಿಮಾತಾಡಿದ;

‘ಅಣ್ಣಾವ್ರೇ, ನಾನುಕನಕಯ್ಯಮಾತಾಡ್ತಿರೋದು, ಅದುರಕ್ತದಾನಶಿಬಿರದಬಗ್ಗೆವ್ಯವಸ್ಥೆಮಾಡಿದ್ದೇನೆ.  ತಾವುಬರುವನಾಲ್ಕೈದು ದಿನಗಳಲ್ಲಿಯಾವುದಾದರೊಂದುದಿನಾಂಕಗೊತ್ತುಪಡಿಸಿನನಗೆತಿಳಿಸಿ. ‘

‘ ಒಳ್ಳೆಕೆಲಸಮಾಡಿದೆಕಣಣ್ಣ, ಯಾವದಿವಸಆದ್ರೂನಡೀತೇತಿ, ನಾವೇಲ್ಲಖಾಲಿನೇ , ಹಾಗಾಗಿನಿಮ್ಮನುಕೂಲನೋಡಿಹೇಳಿಬಿಡಿ’ ಎಂದಅಣ್ಣ.

‘ ಆಯಿತುನಾನುನಾಳೆತಿಳಿಸುತ್ತೇನೆ. ನೀವುಈಗಮಾಡಬೇಕಾದ್ದದ್ದುಮೊದಲಕೆಲ್ಸ ,ರಕ್ತದಾನಿಗಳು ಎಷ್ಟುಜನಬರ್ತಾರೆ ಎಂದುನನಗೆತಿಳಿಸಿ. ಊಟದವ್ಯವಸ್ತೆಯೊಂದು ಮಾಡಿರಿ, ಏಕೆಂದ್ರೇ ,ರಕ್ತದಾನಮಾಡಿಹೋಗುವವರಿಗೆ ಊಟಮಾಡಿಸಿಕಳಿಸಬೇಕಾಗುತ್ತೆ. ಉಳಿದದ್ದದ್ದುನಾನುನೋಡಿಕೊಳ್ತೇನೆಏನೂಚಿಂತಿಸಬೇಕಾಗಿಲ್ಲ’ ಎಂದರುಕನಕಯ್ಯ.

‘ ಆಯಿತುಕಣಣ್ಣೋ’ ಎಂದುಫೋನುಇಟ್ಟು ಗೋಪಿಗೆಕೂಗಿದಾಗಗೋಪಿ ಮುಂದೆಬಂದುನಿಂತ.

‘ ಲೋಗೋಪಿ, ಕನಕಣ್ಣಫೋನ್ಮಾಡಿದ್ದಕಣಲೇ.. ‘

‘ ಏನಂತೆಅಣ್ಣ ?’

‘ ಎಲ್ಲವ್ಯವಸ್ಥೆಮಾಡ್ತಾನಂತೆ, ನಾವುಎಷ್ಟುಜನ್ರನ್ನಕಲೆಹಾಕಬಹುದು ಎಂಬುದುಆತನಿಗೆತಿಳಿಸಬೇಕು,ಅಲ್ಲದೇ ಊಟದವ್ಯವಸ್ಥೆಮಾಡಬೇಕು. ಅಂದಹಾಗೆಎಷ್ಟುಜನ್ರುಬರಬೌದ್ಲಾ  ?’

‘ನಮ್ಮವರೆಲ್ಲಸೇರಿ ಸುಮಾರುಐವತ್ತುಜನರನ್ನುಸೇರಿಸ್ತೀವಿ.ಊಟದವ್ಯವಸ್ಥೆಹೊಟ್ಲಾಗೆಹೇಳಿ ಬಿಡುವಾಅಣ್ಣ’ ಎಂದ.

‘ಆಯಿತು, ಹೊಟ್ಲಾವ್ನಿಗೆಮಾತಾಡಾದ್ಕಿಂತ ಮೊದ್ಲುಎಷ್ಟುಜನ ಅನ್ನೋದುನೋಡಿಕೋ , ಆಮೇಲೆಮರ್ಯಾದೆಹೋಗೋಂಗಾಗಬಾರ್ದುತಿಳಿತಾ  ?’

‘ ಬಿಟ್ಟಾಕುಅಣ್ಣ,ನಾನ್ನಿಂತುವ್ಯವಸ್ಥೆಮಾಡ್ತೇನೆ’ ಎಂದಗೋಪಿ.

-5-

ಎರಡುದಿನದಲ್ಲಿಎಲ್ಲವ್ಯವಸ್ಥೆ  ಆಯಿತು. ಐವತ್ತುಜನರಲೆಖ್ಖಹಿಡಿದುಊಟದವ್ಯವಸ್ಥೆಕೂಡಆಯಿತು. ಒಂದುದಿನಾಂಕನಿಗದಿ ಆಗಿ, ವ್ಯವಸ್ಥೆ ಗಂಗಾಕಿರಣ್ಶಾಲೆಯಲ್ಲಿಆಯಿತು.

ಆದಿನಮುಂಜಾನೆಏಳುಗಂಟೆಗೇನೆಕನಕಯ್ಯಗಂಗಾಕಿರಣ್ಶಾಲೆಗೆಬಂದರು. ಆದರೆಅಣ್ಣಮತ್ತುಅವರಟೀಮ್ಪತ್ತೇನೇ ಇಲ್ಲ !ಗಂಟೆಎಂಟಾದ್ರುಯಾರುಕಾಣಲಿಲ್ಲ. ಆಮೇಲೆಫೋನ್ಮಾಡಿದಾಗ

ಗೊತ್ತಾಗಿದ್ದು, ಜನರನ್ನುಕರೆಯಲಿಕ್ಕೆಅಣ್ಣನ್ಟೀಮ್ಹೋಗಿದೆಎಂದು. ಬ್ಲಡ್ಬ್ಯಾಂಕಿನವ್ಯಾನ್ಕೂಡಶಾಲೆಗೆಬಂದುಪಾರ್ಕ್ಆಯಿತು.  ಆದರೆ, ಅಣ್ಣಮತ್ತುಟೀಮ್ಬರಲೇಇಲ್ಲ.

ಸುಮಾರು ಹತ್ತುಗಂಟೆಗೆಒಂದುವ್ಯಾನ್ನಲ್ಲಿಕುರಿಗಳಂತೆ ತಂದಿದ್ದವರನ್ನುಕೆಳಗಿಳಿಸಿದರು. ಅವರಿಗೆಲ್ಲದಬಾಯಿಸಿಶಾಲೆಯಒಳಕ್ಕೆಕಳುಹಿಸಿದರು. ಬಹುಶಅವರುಬರಲಿಕ್ಕೆಅಸಹಕಾರಮಾಡಿರಬೇಕು. ಆಮೇಲೆಗೋಪಿಕನಕಯ್ಯನಭೇಟಿಮಾಡಿಕೆಲಸಸಾಗಲಿಎಂದುಹೇಳಿದನು. ಕನಕಯ್ಯಕೂಡಮೊಬೈಲ್ಬ್ಲಡ್ಬ್ಯಾಂಕ್ವ್ಯಾನ್ಹತ್ತಿರಹೋಗಿತಮ್ಮ ಕೆಲಸಶುರುಮಾಡಿಕೊಳ್ಳಿಎಂದರು. ಅವರು ‘ ಸರಿ ‘ ಎಂದುಶಾಲೆಯಒಳಗಡೆಕಿಟ್ಗಳೊಂದಿಗೆರಕ್ತತಪಾಸಣೆಮಾಡಲುಹೊರಟರು. ಅಣ್ಣನ್ಶಿಷ್ಯರು ಹೇಗೋಮಾಡಿಮೂವತ್ತುಜನರನ್ನುಕಲೆಹಾಕಿದ್ದರು. ಆದರೇ,ತಮ್ಮವರುಮೃತರಾಗಿದ್ದರಿಂದ , ಅಂತಿಮಯಾತ್ರೆಯವ್ಯಾನ್ಎದುರಿಗೆಬಂದದ್ದುನೋಡಿ,ತಾವುಗಳು ನೇರವಾಗಿಅಲ್ಲಿಗೆಯೇಬರುತ್ತೇವೆಂದುಆಶ್ವಾಸನೆಕೊಟ್ಟು ಒಂದೇಕುಟುಂಬದ ಐವರುಕೆಳಗೆಇಳಿದಿದ್ದರು. 

ಇನ್ನೇನು, ಕರೆದುತಂದ ಇಪ್ಪತ್ತೈದರಲ್ಲಿ  ಐದುಜನಕಂಠಪೂರ್ತಿಮದ್ಯಕುಡಿದೇ ಬಂದಿದ್ದರು. ತಪಾಸಣಾತಂಡಮೊದಲು ಅವರನ್ನುಪಕ್ಕಕ್ಕೆಸರಿಸಿದರು. ಆಮೇಲೆಉಳಿದವರ ಹಿಸ್ಟರಿಮತ್ತುಬ್ಲಡ್ಸಾಂಪಲ್ಸ್ಪಡೆದರು.ಸ್ವಲ್ಪಸಮಯದಬಳಿಕಕನಕಯ್ಯನನ್ನುಕರೆದುಅವರಜೊತೆಗೆಮಾತಾಡಿದರುಮತ್ತುಅಣ್ಣಗೇಈವಿಷಯತಿಳಿಸುವಂತೆಹೇಳಿದರು. ಪಾಪಕನಕಯ್ಯಗೆಮುಜುಗರವಾಯಿತು. ದುಃಖಕರವಿಷಯಏನೆಂದರೆ, ಉಳಿದಇಪ್ಪತ್ತರಲ್ಲಿಇಬ್ಬರುಹೆಚ್.ಐ.ವಿ. ಪೀಡಿತರು, ಇಬ್ಬರುಮಲೇರಿಯಾ, ಐವರುಗಾಯಗಳಿಂದಜ್ವರಪೀಡಿತರು, ಐವರುಡಯಾಬಿಟಿಸ್ಮತ್ತುಮೂವರುಬಿ.ಪಿ.ಪೇಷಂಟಗಳು !ಹಾಗಾಗಿಐದುಜನಮಾತ್ರರಕ್ತದಾನಿಗಳಾದರು . ಆಐದರಲ್ಲಿಒಬ್ಬತನಗೆಇಷ್ಟವಿಲ್ಲ, ಒತ್ತಾಯಪೂರ್ವಕವಾಗಿಕರೆದುಕೊಂಡುಬಂದಿದ್ದಾರೆಎಂದುಪ್ರತಿಭಟಿಸಿದ ಎಂದುಬ್ಲಡ್ಟೀಮ್ನವರುಹೇಳಿದರು.

 -6-

‘ಆಯಿತುಅವರಿಗೆತಿಳಿಸುತ್ತೇನೆ ‘ ಎಂದುಅಣ್ಣನನ್ನುಹುಡುಕಿಕೊಂಡುಆತನಿದ್ದಲ್ಲಿಗೆಹೋಗಿ

ವಿಷಯತಿಳಿಸಿದರು. ಆಗಆತಹೀಗೆಹೇಳಿದ;

‘ ಆಯಿತುಆಐದುಜನರರಕ್ತಪಡೆಯಲಿ, ಜೊತೆಗೆ ನೀವುಮತ್ತುನಮ್ಜನಸೇರಿರಕ್ತಕೊಡಲು

ಮುಂದಾಗಿರಿಎಂದಮುಲಾಜಿಲ್ಲದೇ .ಕೂಡಲೇತನ್ನಗ್ಯಾಂಗಿನವರನ್ನುಕರೆದುಆದೇಶಿಸಿದ.

ಪಾಪಕನಕಯ್ಯಆಯೋಜನೆಮಾಡಲುಬಂದವನಿಗೆರಕ್ತಕೊಡುವಂತಾಯಿತು !

ಅದಾದಮೇಲೆಅಣ್ಣನಗ್ಯಾಂಗಿನಐವರನ್ನುಮತ್ತುಕನಕಯ್ಯನನ್ನುತಪಾಸಣೆಮಾಡಿದರು. ಅದರರಿಪೋರ್ಟ್ಹೀಗೆಬಂತು.

‘ ಕನಕಯ್ಯಗೆಬಿ.ಪಿ, ಉಳಿದವರಲ್ಲಿಇಬ್ಬರಿಗೆಡಯಾಬಿಟೀಸ್ಮತ್ತುಒಬ್ಬಮದ್ಯಕುಡಿದಿದ್ದ . ಹೀಗಾಗಿಇವರಲ್ಲಿಇಬ್ಬರೇಉಳಿದರು.

ಮೆಲ್ಲಗೆರೂಪ್ಲ್ಯಾಮತ್ತುಧೀರಅಣ್ಣನಹತ್ತಿರಬಂದು, ತಾವುರಕ್ತಕೊಟ್ಟರೆತಮಗೆಏನೂ ಕೆಲಸಮಾಡೋಕಾಗೋದಿಲ್ಲಎಂದುಮನವರಿಕೆಮಾಡಿದರು. ಹಾಗಾಗಿಆಇಬ್ಬರನ್ನೂಕೈಬಿಟ್ಟಅಣ್ಣ.ಕನಕಯ್ಯಗೆಹೇಳಿದ ‘ ಮೊದಲುಆಐದುಜನರರಕ್ತಪಡೆಯಿರಿ, ಮತ್ತೇ ನಾನುನಮ್ಮವರನ್ನುಕಳಿಸಿಇನ್ನೂಕೆಲವರನ್ನುಕರೆಸುತ್ತೇನೆ’ ಎಂದುದಕ್ಕೆ ‘ ಆಯಿತು’ ಎಂದರು ಕನಕಯ್ಯ.

ಕನಕಯ್ಯರಕ್ತನಿಧಿಅಧಿಕಾರಿಗಳಿಗೆಆಐವರರಕ್ತಪಡೆಯಲುಹೇಳಿದ. ಅದಕ್ಕೊಪ್ಪಿಆಐದುಜನರಲ್ಲಿ  ಇಬ್ಬಿಬ್ಬರನ್ನುಒಳಗೆ ಕಳುಹಿಸಲುಹೇಳಿದರು. ಹಾಗೆಯೆಅವರಿಗೆತಿಳಿಸಲಾಯಿತು. ಆದರೆಒಬ್ಬಮಾತ್ರಕಾಣಲಿಲ್ಲ. ವಿಚಾರಿಸಿದಾಗಇಲ್ಲಿಯೋಎಲ್ಲೊಇರ್ಬೇಕು  ಅಂತಉಳಿದವರುಹೇಳಿದರು.

ಆತನನ್ನುಹುಡುಕಲುಪ್ರಾರಂಭಿಸಿದರು.  ಆದರೇ,ಅಷ್ಟರಲ್ಲಿಯಾರೋಪ್ರಾಣಹೋಗೋಹಾಗೆಕಿರುಚಿಕೊಂಡಧ್ವನಿಕೇಳಿಸಿತು. ರೂಪ್ಲ್ಯಾಮತ್ತುಧೀರಆಕಡೆಓಡಿಹೋದರು. ಒಹ್ ! ರಕ್ತ  ದಾನಮಾಡಲುಬಂದಿದ್ದವ ಓಡಿಹೋಗಿಶಾಲೆಯಕಾಂಪೌಂಡ್ಹಾರಿಬಿದ್ದಿದ್ದ. ಅವನಿಗೋಬಹಳೇಪೆಟ್ಟಾಗಿತ್ತು. ರೂಪ್ಲ್ಯಾಮತ್ತುಧೀರಅವನನ್ನುಆಸ್ಪತ್ರೆಗೆಸಾಗಿಸಿದರು. ಅಣ್ಣನಿಗೆ ವಿಷ್ಯ ತಿಳಿದುಬಹಳೇಕೋಪಗೊಂಡ. ಆದರೂ, ಸಂಧಿಗ್ದಸ್ಥಿತಿಯಲ್ಲಿ ತಡೆದುಕೊಂಡ. ಉಳಿದನಾಲ್ವರಿಂದರಕ್ತಪಡೆಯುವಕಾರ್ಯಕ್ರಮಸಾಗುತ್ತಿತ್ತು. ಹೋಟೆಲ್ನಿಂದಆರ್ಡರ್ಮಾಡಿದಐವತ್ತು ಊಟಕೂಡಬಂತು. ಕಾರ್ಯಕ್ರಮಮುಗಿಯುವವರೆಗೆಕಾಯಲುಅಣ್ಣಸೂಚಿಸಿದ.

-7-

ಈಮಧ್ಯೆಆಸ್ಪತ್ರೆಯಿಂದಫೋನ್ಬಂತು. ಶಾಲೆಯಗೋಡೆಹಾರಿದವನಿಗೆತುಂಬಾಪೆಟ್ಟಾಗಿರಕ್ತಸ್ರಾವ ಆಗಿದೆಯೆಂದು, ಅವನಿಗೆಕೊಡಲುಏ.ಬಿ.ಪಾಸಿಟಿವ್ಗುಂಪಿನ ರಕ್ತಬೇಕೆಂದುಅಣ್ಣನಶಿಷ್ಯರ

ಮೂಲಕಹೇಳಿದರು. ಅಣ್ಣನಿಗೆಇದೊಂದುತಲೆನೋವುಆಯಿತು. ಕನಕಯ್ಯನನ್ನುಕರೆದುವಿಷಯ

ತಿಳಿಸಿದ. ಕನಕಯ್ಯಚಿಂತಿತರಾದರು. ಅಣ್ಣನಿಗೆಹೇಳಿದರು;

‘ ಬಿಡಿ, ನಾನುರಕ್ತದವಿಚಾರ ಮಾತಾಡ್ತೇನೆಎಂದುಆಕಡೆಗೆಹೊರಟರು.

ರಕ್ತದಾನಕಾರ್ಯಕ್ರಮನಡೆಯುತ್ತಿತ್ತು. ಇಬ್ಬರದುಮುಗಿದಿತ್ತು, ಇನ್ನಿಬ್ಬರದುನಡೆಯುತ್ತಿತ್ತು. ಕನಕಯ್ಯಅವರಿಗೆಆಸ್ಪತ್ರೆಯವಿಷಯತಿಳಿಸಿದ. ಅದಕ್ಕೆಅವರುಇಲ್ಲಿಇದ್ದರೂಕೊಡಲುಬರುವುದಿಲ್ಲ, ಅವರನ್ನು ಬ್ಲಡ್ಬ್ಯಾಂಕ್ಗೆಹೋಗಿಪಡೆಯಲುಹೇಳಿದರು. ಅದನ್ನುಅವರುಅಣ್ಣಾಗೆತಿಳಿಸಿದಾಗಆತನತಲೆಸಿಡಿಯುವಂತಾಯಿತು. ಅಣ್ಣಕನಕಯ್ಯಗೆಮನವಿಮಾಡಿಆಮನುಷ್ಯನಿಗೆರಕ್ತದವ್ಯವಸ್ಥೆಮಾಡಲುಹೇಳಿದ. ‘ಸರಿ’ ಎಂದಕನಕಯ್ಯ.

ಇತ್ತಆಶ್ವಾಸನೆಕೊಟ್ಟುದಾರಿಯಲ್ಲಿಇಳಿದವರ್ಯಾರೂಬರಲಿಲ್ಲಮತ್ತುಗೋಡೆಹಾರಿದವನಆರೈಕೆಯಲ್ಲಿಇದ್ದವರುಬೇರೆಯವರನ್ನುಕರೆತರಲಾಗಲಿಲ್ಲ.  ಅಂತೂ ಇಂತೂ, ರಕ್ತದಾನಶಿಬಿರನಾಲ್ಕುದಾನಿಗಳೊಂದಿಗೆ ಮುಗಿದೇ ಹೋಯಿತು.  ದಾನಿಗಳು,ದಾನಿಗಳಲ್ಲದವರು ಸೇರಿಸಕತ್ತಾಗಿ ಊಟಹೊಡೆದು ತಮ್ಮತಮ್ಮಮನೆಗಳನ್ನುಸೇರಿಕೊಂಡರು. ಹೇಗೋಕನಕಯ್ಯನು  ಬಿದ್ದವನಿಗೆ ರಕ್ತದವ್ಯವಸ್ಥೆಮಾಡಿದ್ದರಿಂದಆತಸುಧಾರಿಸಿಕೊಂಡ. ಕನಕಯ್ಯಅಣ್ಣನಅನುಮತಿ ಪಡೆದುಅಲ್ಲಿಂದಜಾಗಖಾಲಿಮಾಡಿದ.

ಎರಡುದಿನಗಳಾದಮೇಲೆಗೋಡೆಹಾರಿಬಿದ್ದವನನ್ನು ಆಸ್ಪತ್ರೆಯಿಂದಡಿಸ್ಚಾರ್ಜ್ಮಾಡಿದರು. ರಕ್ತದಾನಶಿಬಿರ,ಭೋಜನ ಮತ್ತುಆಆಸ್ಪತ್ರೆಯಬಿಲ್ಸೇರಿಸುಮಾರುಎಪ್ಪತ್ತುಸಾವಿರವಾಯಿತು. ಒಂದು ಧೀರ್ಘಉಸಿರೆಳೆದುಪಾವತಿಸಿದಅಣ್ಣ !

ಹಾಗೋ ಹೀಗೋ ‘ ಅಣ್ಣನ್ ಸಮಾಜಸೇವೆ ‘ ಅನ್ನಿಸಿಕೊಂಡಿತು , ಆದರೆ ಅಣ್ಣನಿಗೆಈರಕ್ತದಾನಶಿಬಿರಮಾರಕವಾಗಿ, ತನ್ನಶಿಷ್ಯಂದಿರಮಾತನ್ನುಕೇಳಿದ್ರೇಚೆನ್ನಾಗಿರುತ್ತಿತ್ತುಎಂದಂದುಕೊಂಡು ಒಳಒಳಗೇ ಕುದಿಯುತ್ತಲೇ  ಇದ್ದ !


ಬಿ.ಟಿ.ನಾಯಕ್

Leave a Reply

Back To Top