ಗಜಲ್

ಕಾವ್ಯ ಸಂಗಾತಿ

ಗಜಲ್

ಮಾಜಾನ್ ಮಸ್ಕಿ

ಮುಂಗಾರು ಮಳೆ ಮಧುರ ಭಾವ ಹುಟ್ಟಿಸಿದೆ ಸಖಿ
ಜಿನುಜಿನುಗುವ ಹನಿಗಳು ಮನಗಳಲ್ಲಿ ಹಸಿರು ಹಬ್ಬಿಸಿದೆ ಸಖಿ

ತಂಬೆಳಕಿನ ತಂಗಾಳಿಯಲ್ಲಿ ತನುವಿಗೆ ಚಿಮ್ಮಿಸುವ ಪನ್ನೀರು
ಹೂವುಗಳ ಸುಹಾಸನೆಯಲ್ಲಿ ಹೊಸತನ ತರುಸಿದೆ ಸಖಿ

ಮಣ್ಣಿನ ಕಂಪಿನಂತಹ ಪ್ರೀತಿಯು ಮತ್ತೇರಿಸುತ್ತಿದೆ ಇನಿಯ
ಮಳೆಯಲ್ಲಿ ನೆನೆದ ನೆನಪು ಮರು ಕಳಿಸಿದೆ ಸಖಿ

ಓ ಮೇಘಗಳೆ ವರದಿ ಒಪ್ಪಿಸಬಾರದೇಕೆ ನನ್ನೊಲುಮೆಗೆ
ಸುರಿದ ವರ್ಷಧಾರೆಯು ಸಂದೇಶ ರವಾನಿಸಿದೆ ಸಖಿ

ಸೋನಿ ಸುರಿತ ಹಿತ ನೀಡಿ ಬಿಸಿ ಏರಿಸುತ್ತಿದೆ “ಮಾಜಾ”
ಮಿಂಚಿನ ಓಟಕ್ಕೆ ಹೃದಯವು ಕಂಪಿಸಿದೆ ಸಖಿ


Leave a Reply

Back To Top