ಗಜಲ್

ಕಾವ್ಯ ಸಂಗಾತಿ

ಅನಸೂಯ ಜಹಗೀರದಾರ

ಗಜಲ್

ಕಣ್ಣಲ್ಲಿ ಹರಿದಾಡುವ ಆ ಕನಸನು
ಹುಡಿಯಾಗಿಸಿ ಚದುರಿಸದಿರು
ಸದಾ ನಿನ್ನ ನೆನಪಿಸುವ ಈ ದೂರವನು
ದೂರ ಮಾಡದಿರು

ಎದೆಯ ಶಿಲ್ಪದಲಿ ಕೆತ್ತಿದ ಆ ಹೆಸರನು
ಉಳಿಯಿಕ್ಕಿ ಅಳಿಸದಿರು
ಹರಿವ ರಕ್ತದಲಿ ಉಸಿರಾದ ನಾಮವ
ದಯಮಾಡಿ ಅಗಲಿಸದಿರು

ನನಗಿತ್ತ ನಾವೆಯೇ ಸಾಕು ಮತ್ತೊಂದು
ಕೇಳಿದರೂ ನೀಡದಿರು
ಸ್ವತ್ವದಲಿ ನೆಲೆಯಾದ ನನ್ನತನವನು ನಿನ್ನ
ಆಮಿಷಕೆ ದಾಳವಾಗಿಸದಿರು

How To Protect Grass Seed From Heavy Rain | Obsessed Lawn

ಆಷಾಢ ಮಳೆಗೆ ಅಂಕುರಿಸಿದ ಬೀಜವ
ಒಣ ಹವೆಗೆ ಒಣಗಿಸದಿರು
ಹಸಿರು ಚಿಗುರು ಎಲೆ ಮೂಡುತಿರುವ ಆ
ದೇಟನು ಕಮರಿಸದಿರು

ಧೃಡ ಸಂಕಲ್ಪದಿ ಬರೆದ ಈ ಗಜಲನು ನಿನ್ನ
ನುಡಿಯಲಿ ಸಂಪನ್ನಗೊಳಿಸದಿರು ಅನು
ನನ್ನ ತಲ್ಲೀನವಾಗಿಸಿಹ ಆ ಮಧುರ
ಅನುಭೂತಿಯನು ಅಂತ್ಯವಾಗಿಸದಿರು


2 thoughts on “ಗಜಲ್

  1. ಗಜಲ್ ತುಂಬಾ ಚೆನ್ನಾಗಿದೆ ಮುಖ್ಯವಾಗಿ ಎರಡನೇ ಪ್ಯಾರ…

  2. ಎರಡನೆಯ ಶೇರ್ (ದ್ವಿಪದಿ) .ಇಷ್ಟಪಟ್ಡಿದ್ದೀರಿ ಬಹುವಾಗಿ.

    Thank you so much..! ☺ ಖುಶಿಯಾಯ್ತು..!

Leave a Reply

Back To Top