ನಟ, ನಾಟಕಕಾರ, ಕವಿ, ಕಲಾವಿದ ಎಲ್ಲಕ್ಕೂ ಮಿಗಿಲಾಗಿ ‘ಮಾನವಪ್ರೇಮಿ’ ಸಾಹಿತಿ ಸತೀಶ ಕುಲಕರ್ಣಿ.!

ವ್ಯಕ್ತಿ ಚಿತ್ರ

ನಟ, ನಾಟಕಕಾರ, ಕವಿ, ಕಲಾವಿದ ಎಲ್ಲಕ್ಕೂ ಮಿಗಿಲಾಗಿ ‘ಮಾನವಪ್ರೇಮಿ’ ಸಾಹಿತಿ

ಸತೀಶ ಕುಲಕರ್ಣಿ

ನಟ, ನಾಟಕಕಾರ, ಕವಿ, ಕಲಾವಿದ ಎಲ್ಲಕ್ಕೂ ಮಿಗಿಲಾಗಿಮಾನವಪ್ರೇಮಿಸಾಹಿತಿ ಸತೀಶ ಕುಲಕರ್ಣಿ.!

ನಟ — ನಾಟಕಕಾರ, ಕವಿ — ಕಲಾವಿದ — ಎಲ್ಲಕ್ಕೂ ಮಿಗಿಲಾಗಿ ‘ಮಾನವಪ್ರೇಮಿ’ ಅತಿಮಾನುಷ ಸರಳ, ಸಹಜ, ಪ್ರಾಕೃತಿಕ ಮನುಷ್ಯ ಸತೀಶ ಕುಲಕರ್ಣಿಯವರು ಹುಟ್ಟಿದ್ದು ಧಾರವಾಡದಲ್ಲಿ.

ತಂದೆ ನೀಲಕಂಠರಾವ್‌ ಕುಲಕರ್ಣಿ, ತಾಯಿ ಲೀಲಾಬಾಯಿ ಕುಲಕರ್ಣಿ ಅಂತ.

ಚಿಕ್ಕಂದಿನಿಂದಲೂ ನಾಟಕದ ಬಗೆಗೆ ಬೆಳೆದ ಅಭಿರುಚಿಯಿಂದ ಹಲವಾರು ನಾಟಕಗಳ ಅಭಿನಯ ಮತ್ತು ನಿರ್ದೇಶನ ಮಾಡಿದವರು..!

ಪಿ.ಲಂಕೇಶರ ತೆರೆಗಳು, ಜೋಕುಮಾರಸ್ವಾಮಿ, ಕುಂಟಾಕುಂಟಾ ಕುರವತ್ತಿ, ಪ್ರಸ್ತುತ, ಬಂಗಾರದ ಕೊಡ, ಗಾಂಧಿ ಹಚ್ಚಿದ ಗಿಡ, ಪರಸಪ್ಪನ ಕಥೆ, ಅನಾಮಿಕ, ಕಂಪ್ಯೂಟರ್, ದೊಡ್ಡಮನುಷ್ಯ, ಹಾವು ಬಂತು ಹಾವು, ಗಗ್ಗಯ್ಯನ ಗಡಿಬಿಡಿ, ಗಾಡಿ ಬಂತು ಗಾಡಿ ಮುಂತಾದವುಗಳಲ್ಲಿ ಅಭಿನಯ ಮತ್ತು ನಿರ್ದೇಶನ ಮಾಡಿದವರು ಸತೀಶ ಕುಲಕರ್ಣಿಯವರು.

ಅಲ್ಲದೇ ದೂರದರ್ಶನ ಧಾರಾವಾಹಿಗಳಲ್ಲೂ ನಟನೆ, ಭಾಗ್ಯಶ್ರೀ, ಸ್ವಾತಂತ್ರ್ಯ ಸಂಗ್ರಾಮದ ಪುಟಗಳು, ವೈಶಾಲಿ ಕಾಸರವಳ್ಳಿಯವರ ಮೂಡಲಮನೆ ಧಾರಾವಾಹಿಯಲ್ಲಿ, ಪ್ರಮುಖವಾದುವುಗಳಲ್ಲಿ ನಟಿಸಿದವರು..!

ಆಕಾಶವಾಣಿಯ ಹಲವಾರು ನಾಟಕ, ಕವಿಗೋಷ್ಠಿಗಳಲ್ಲಿಯೂ ಭಾಗಿಯಾದವರು ಸತೀಶ ಕುಲಕರ್ಣಿಯವರು.

ಅಲ್ಲದೇ ಬೆಂಕಿಬೇರು, ನೆಲದ ನೆರಳು, ವಿಷಾದಯೋಗ, ಗಾಂಧಿಗಿಡ, ಕಂಪನಿ ಸವಾಲ್‌ ಮುಂತಾದ ಕವನ ಸಂಕಲನಗಳನ್ನು ಪ್ರಕಟಿಸಿದವರು..!

ಇವರ ಸಾಹಿತ್ಯದ ಕೆಲಸಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ, ಜಿಲ್ಲಾ ಕನ್ನಡ ಜಾಗೃತಿ ಸಮಿತಿ, ಹಾವನೂರು ಪ್ರತಿಷ್ಠಾನ, ಕಡಕೋಳ ಪ್ರತಿಷ್ಠಾನ, ವಾಯುವ್ಯ ಕರ್ನಾಟಕ ಸಾರಿಗೆ ಕನ್ನಡ ಕ್ರಿಯಾ ಸಮಿತಿಯ ಪ್ರಶಸ್ತಿಗಳನ್ನು ಪಡೆದವರು..!

ಅಲ್ಲದೇ ಹಾವೇರಿ ಜಿಲ್ಲಾ ಸಾಂಸ್ಕೃತಿಕ ಉತ್ಸವ ಸಮಿತಿ, ‘ಕರ್ನಾಟಕ ನಾಟಕ ಅಕಾಡಮಿ’ ಜಿಲ್ಲಾ ಸಮಿತಿ ಮುಂತಾದ ಸಂಸ್ಥೆಗಳಲ್ಲಿ ವಹಿಸುಹಿಸಿರುವ ಪ್ರಮುಖ ಪಾತ್ರಗಳನ್ನು ಮಾಡಿದವರು ನಮ್ಮ ಸತೀಶ ಕುಲಕರ್ಣಿಯವರು..!

ಯುವರಂಗದ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಇವರು ಬರೆದು ನಿರ್ದೇಶಿಸಿದ ‘ಬಂಗಾರಕೊಡ’ ನಾಟಕಕ್ಕೆ ರಾಜ್ಯದ ಅತ್ಯುತ್ತಮ ನಟ ಮತ್ತು ನಿರ್ದೇಶಕ ಪ್ರಶಸ್ತಿಯನ್ನೂ ಪಡೆದವರು ನಮ್ಮ ಸತೀಶ ಕುಲಕರ್ಣಿಯವರು.

ಜೋಗದ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ನಟ, ‘ಕತೆಯಾದ ಕಾಳ’ ನಾಟಕಕ್ಕೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಗಳಿಸಿದವರು.

ರಾಜ್ಯಮಟ್ಟದ ಹಾಸ್ಯನಾಟಕ ಸ್ಪರ್ಧೆಯಲ್ಲಿ ‘ಸಾಹೇಬರ ನಾಯಿ’ ನಾಟಕಕ್ಕೆ ಅತ್ಯುತ್ತಮ ನಟ ಮತ್ತು ನಿರ್ದೇಶಕ ಪ್ರಶಸ್ತಿಯನ್ನು, ಹೀಗೆಯೇ ನಮ್ಮ ಸತೀಶ ಕುಲಕರ್ಣಿಯವರು ತಮ್ಮ ಸಾಹಿತ್ಯದ ಕೆಲಸದ ಜೊತೆಯಲ್ಲಿ, ಮುಂತಾದ ರಂಗಭೂಮಿ ಚಟುವಟಿಕೆಗಳಿಗೆ ಪ್ರಶಸ್ತಿಗಳನ್ನು ಪಡೆದವರು ಸಾಹಿತಿ ಸತೀಶ ಕುಲಕರ್ಣಿಯವರು..!

# ಹಾಗೆಯೇ ಇತ್ತೀಚಿಗೆ ಹಾವೇರಿಯಲ್ಲಿ ಸತೀಶ ಕುಲಕರ್ಣಿಯವರ ಎರಡು ಪುಸ್ತಕಗಳ ಬಿಡುಗಡೆ ಸಮಾರಂಭವಾಗಿತ್ತು..! —

ಹಿರಿಯ ಕವಿ ಸತೀಶ ಕುಲಕರ್ಣಿಯವರ ಎರಡು ಪುಸ್ತಕಗಳು ಇದೇ ಜುಲೈ 29 ರಂದು ಬಿಡುಗಡೆಯಾದ್ದವು..!

‘ಸತೀಶ್ ಸಮಗ್ರ ಕವಿತೆಗಳು’ (ಕಾವ್ಯ) ಮತ್ತು ‘ಓದೊಳಗಿನ ಓದು’ (ವಿಮರ್ಶಾ ಲೇಖನಗಳು) ಎಂಬ ಎರಡು ಪುಸ್ತಕಗಳನ್ನು ಹೆಸರಾಂತ ವಿಮರ್ಶಕ  ಡಾ.ಜಿ.ಎಸ್.ಅಮೂರ ಬಿಡುಗಡೆ ಮಾಡಿದ್ದರು..!

ನಾಡಿನ ಹಿರಿಯ ಕವಿ ದಿವಂಗತ ಚನ್ನವೀರ ಕಣವಿಯವರು ಅಧ್ಯಕ್ಷತೆ ವಹಿಸಿದ್ದರು. ಸಮಗ್ರ ಕಾವ್ಯ ಕುರಿತು ಖ್ಯಾತ ವಿಮರ್ಶಕ ಡಾ.ಚಂದ್ರಶೇಖರ ನಂಗಲಿ ಮತ್ತು ‘ಓದೊಳಗಿನ ಓದು’ ಕೃತಿಯ ಕುರಿತು ಶ್ರೀಮತಿ.ಪುಷ್ಪಾ ಶೆಲವಡಿಮಠ ಮಾತನಾಡಿದ್ದರು..!

ಮುಖ್ಯ ಅತಿಥಿಗಳಾಗಿ ಕವಿಪ್ರನಿನಿ ನೌಕರರ ಸಂಘ, ಹಾವೇರಿ ವೃತ್ತದ ಸಂಘಟನಾ ಕಾರ್ಯದರ್ಶಿ ವಿಜಯಕುಮಾರ ಮುದಕಣ್ಣನವರ ಮತ್ತು ಖ್ಯಾತ ಕವಿ ಡಾ.ಸರಜೂ ಕಾಟ್ಕರ ಆಗಮಿಸಿದ್ದರು..! 

ಕಣವಿಯರ ಮಾತುಗಳು ಬಂಡಾಯದ ಅಬ್ಬರ ಇಳಿದ ಮೇಲೂ ಕವಿತ್ವದ ಮೂಲಕ ತನ್ನತನ ಉಳಿಸಿಕೊಂಡು ನಿಸರ್ಗಧಾತು ಮತ್ತು ಪ್ರೇರಣೆಗೆ ಶಕ್ತಿಯಾಗಿರುವ ಎರಡು ಕೃತಿಗಳನ್ನು ನೀಡಿರುವ ಸಹೃದಯಿ ಕವಿ ಸತೀಶ ಕುಲಕರ್ಣಿ ಪ್ರವರ್ಧರಿಗೆ ಮಾದರಿ ಎಂದೂ ನಾಡೋಜ ಹಿರಿಯ ಕವಿ ಚೆನ್ನವೀರ ಕಣವಿ ಅಭಿಪ್ರಾಯ ಪಟ್ಟಿದ್ದರು..! 

ಜಿ.ಎಸ್.ಅಮೂರವರ ಮಾತುಗಳು ಕಾಲ ಘಟ್ಟದ ಚಳವಳಿಗಳು ತೀವ್ರತೆ ಪಡೆದುಕೊಂಡು ವಿಚಾರವಾದಿಗಳು ಬಂಡಾಯ ಸಂಘಟನೆ ಉಗಮಕ್ಕೆ ನಾಂದಿ ಹಾಡಿದ್ದರೂ ಇತ್ತೀಚಿನ ರಾಜಕೀಯ ಚಳುವಳಿಗಳ ಪ್ರಖರತೆಯಲ್ಲಿ

ಈ ಬಂಡಾಯದ ಧ್ವನಿ ಕ್ಷೀಣವಾಗಿ ತನ್ನತನ ಕಳೆದುಕೊಂಡಿದೆ ಎಂದು ಹಿರಿಯ ಲೇಖಕ ಹಾಗೂ ವಿಮರ್ಶಕ ಡಾ.ಜಿ.ಎಸ್.ಅಮೂರ ತಮ್ಮ ಪ್ರಾಮಾಣಿಕ ಅಭಿಪ್ರಾಯ ಪಟ್ಟಿದ್ದರು..! 

ಈ ಎಲ್ಲಾ ಮಾತುಗಳು ಸಾಹಿತಿ, ಹೋರಾಟಗಾರ ಸತೀಶ ಕುಲಕರ್ಣಿಯವರ ಬಗೆಗಿನ ಸೂಕ್ತ, ಸಮಂಜಸ ಮತ್ತು ಸಕಾಲಿಕ, ಸಮರ್ಪಕವಾಗಿಯೂ, ಮತ್ತು ಅನನ್ಯವಾಗಿಯೂ ಇದ್ದವು..!

# ಹಾಗಾದರೆ ಆ ಪುಸ್ತಕಗಳ ಸಂಕ್ಷಿಪ್ತ ಪರಿಚಯವು ಇಲ್ಲಿದೆ ನೋಡಿ… —

# ಸತೀಶ್ ‘ಸಮಗ್ರ ಕವಿತೆಗಳು’ —

ಕಳೆದ ನಾಲ್ಕು ದಶಕಗಳಿಂದ ಸತೀಶ ಕುಲಕರ್ಣಿಯವರು ಪ್ರಕಟಿಸಿದ ಆರು ಸಂಕಲನಗಳ ಒಂದನೂರಾ ಎಂಬತ್ತೇಳು ಕವಿತೆಗಳು ಈ ಸಮಗ್ರ ಕಾವ್ಯ ಸಂಪುಟದಲ್ಲಿವೆ.

ಬೆಂಕಿ ಬೇರು (1973), ನೆಲದ ನೆರಳು (1974), ಒಡಲಾಳ ಕಿಚ್ಚು (1980), ವಿಷಾದ ಯೋಗ (1994), ಗಾಂಧೀ ಗಿಡ (2001) ಹಾಗೂ ಕಂಪನಿ ಸವಾಲ್ (2006) ಸಂಕಲನದ ಕವಿತೆಗಳಿವೆ..!

ಈಗಾಗಲೆ ಐದು ವಿಶ್ವ ವಿದ್ಯಾಲಯಗಳ ಪಠ್ಯ ಪುಸ್ತಕಗಳಲ್ಲಿ ಇಲ್ಲಿಯ ಕವಿತೆಗಳು ಆಯ್ಕೆಯಾಗಿವೆ. ಇಂಗ್ಲೀಷ, ಹಿಂದಿ ಹಾಗೂ ತೆಲಗು ಭಾಷೆಗೂ ಇಲ್ಲಿಯ ಕೆಲವು ಕವಿತೆಗಳು ಅನುವಾದವಾಗಿವೆ..!

“ಸತೀಶರ ಕಟ್ಟತೇವ ನಾವು ಕಟ್ಟತೇವ” ಅತ್ಯಂತ ಪ್ರಸಿದ್ದ ಕ್ರಾಂತಿಗೀತೆಗಳಲ್ಲಿ ಒಂದಾಗಿದೆ..!

# ‘ಓದೊಳಗಿನ ಓದು’ —

ಇದು ಲೇಖಕರ ಮೊದಲ ಸ್ವತಂತ್ರ್ಯ ಗದ್ಯ ಕೃತಿ ಇದರಲ್ಲಿ ಒಟ್ಟು ಮುವತ್ತಾರು ವಿಮರ್ಶ ಲೇಖನಗಳಿವೆ. ಮಹಿಳಾ ವಿಶ್ವವಿದ್ಯಾಲಯ, ಸಾಹಿತ್ಯ ಅಕಾಡಮಿ ಒಳಗೊಂಡಂತೆ ಪ್ರಕಟಿಸಿದ ಹಲವು ಲೇಖನಗಳಲ್ಲದೇ ಕನ್ನಡದ ಮಹತ್ವದ ಐದು ಜನ ಲೇಖಕರ ಸಮಗ್ರ ಅಧ್ಯಯನದ ಲೇಖನಗಳು ಇದರಲ್ಲಿವೆ..!

ಬೇರೆ ಬೇರೆ ಕೃತಿಗಳಿಗೆ ಬರೆದ ಮುನ್ನುಡಿಗಳು ಕೂಡ ‘ಓದೊಳಗಿನ ಓದು’ ವಿಮರ್ಶಾ ಕೃತಿಯಲ್ಲಿವೆ..!

ಇಷ್ಟು ಹೇಳಿ ಕವಿ, ನಾಟಕಕಾರ, ಹೋರಾಟಗಾರ ಸತೀಶ ಕುಲಕರ್ಣಿಯವರ ಬಗೆಗೆ ಒಂದೆರಡು ಈ ಮಾತುಗಳನ್ನು ಮುಗಿಸುತ್ತೇನೆ ನಾನು…

ಪುಸ್ತಕಗಳು ಬೇಕಾದವರು ಇಲ್ಲಿ ಸಂಪರ್ಕಿಸಬಹುದು

 ಸತೀಶ ಕುಲಕರ್ಣಿ

   ಬಸವೇಶ್ವರ ನಗರ

   ಹಾವೇರಿ — 581110

   ಫೋನ್ ನಂಬರ್ — 9845408934


ಕೆ.ಶಿವು.ಲಕ್ಕಣ್ಣವರ

One thought on “ನಟ, ನಾಟಕಕಾರ, ಕವಿ, ಕಲಾವಿದ ಎಲ್ಲಕ್ಕೂ ಮಿಗಿಲಾಗಿ ‘ಮಾನವಪ್ರೇಮಿ’ ಸಾಹಿತಿ ಸತೀಶ ಕುಲಕರ್ಣಿ.!

  1. ಸತೀಶ ಕುಲಕರ್ಣಿಯವರ ಕುರಿತ ಲೇಖನ ತುಂಬಾ ಚೆನ್ನಾಗಿ ಬಂದಿದೆ

Leave a Reply

Back To Top