ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪ್ರೊ ವಿಜಯಲಕ್ಷ್ಮಿಪುಟ್ಟಿ

ಮರೆತ ಚಣಗಳು…

ಕಳೆದು ಹೋದ ಕ್ಷಣಗಳಲ್ಲಿ
ನವಿರಾದ ಭಾವ ಕಥನ
ಮುಗಿಯದ ಕನಸುಗಳಲ್ಲಿ
ನಿನ್ನ ಹೆಜ್ಜೆಗಳ ದೂರ ಪಯಣ…

ಪ್ರೀತಿಯ ಮೊದಲ ಸಾಲು
ನಿನ್ನ ಹೆಸರ ಅಕ್ಷರ
ನವಿರಾದ ಹೃದಯದ ಮೇಲೆ ಕಾಣದ ಕೈ ಸಾಕ್ಷರ….

ಮಾಯದ ತಂತು ಪ್ರೀತಿಯ ಬೆಸುಗೆ, ಸಮಯದ
ಹಂಗಿಲ್ಲ ಅದರ ರೀತಿ ನೀತಿಗೆ
ಹನಿಗಾಗಿ ಕಾಯುವ
ಇಳೆಗೆ

Beautiful card for Valentine’s Day with heart-shaped lights vector

ಬೇಕು ಮೋಡದ ಒಸಗೆ..

ಮುಚ್ಚಿಟ್ಟ ಪುಟಗಳ ನಡುವೆ
ಬಚ್ಚಿಟ್ಟ ಭಾವಗಳ ಪದಗಳು
ವಿಧಿಯಾಟ ಜಗದಾಟದ ನಡುವೆ
ಮೌನವೇ ನಿಜ ಸಂಗಾತಿ
ಕಾಲನ ಕೈಯಲ್ಲಿ ನಮ್ಮ ಆಟ
ಅದಕ್ಕಿನ್ನೊಂದು ಹೆಸರು ಬದುಕು


About The Author

Leave a Reply

You cannot copy content of this page

Scroll to Top