ಬಂಧನ….

ಕಾವ್ಯ ಸಂಗಾತಿ

ವಿದ್ಯಾರ್ಥಿ ವಿಭಾಗ

ಬಂಧನ….

                   ದಿವ್ಯಾ ಶೆಟ್ಟಿ.

ಗಿಣಿಯೇ ಗಿಣಿಯೇ ಕೊರಗೋ ದನಿಯೇ…

ಏಕೆ ಹೀಗೆ ಮೌನ ಗಿಣಿಯೇ…

ಪಂಜರದಲ್ಲಿ ನಿನ್ನ ಬಂಧನವೇ…

ಸುತ್ತಲು ಕಂಬವನ್ನು ನೋಡುತ್ತಾ ಕೂತಿರುವೆಯೇ…

ನಾನು ಒಳಗೆ ನೀನು ಹೊರಗೆ…

ಯಾಕಿತರ  ಆಗಿ ಹೋಯಿತು ಗಿಣಿಯೇ…

ಮಾತಾಡು ಮಾತಾಡು ಗಿಣಿಯೇ…

ನೀ ಸುಮ್ಮನೆ ಇರುವುದು ಸರಿಯೇ…

ಹೇಳು ಗಿಣಿಯೇ ಇದುವಿಧಿಯೇ…

ನನಗು ನಿನಗೂ ಈ ಬಂಧನವೇ…

ಯಾವಾಗ ಈ ಬಂಧನದಿಂದ ಬಿಡುಗಡೆ  ವಿಧಿಯೇ….

ನಾನು ನೀನು ಕೊರಗಿ ಕೊರಗಿ ಸಾಯುವವೆ ಹೇಳು ಗಿಣಿಯೇ…


Leave a Reply

Back To Top