
ಕಾವ್ಯ ಸಂಗಾತಿ
ತೀರವಿರದ ಕಡಲು
ಅರುಣಾ ನರೇಂದ್ರ
ಹೃದಯದ ಮಾತು

ನಾ ಉಡುವ ಬಟ್ಟೆ
ನೀ ಕೊಡುವ ಪ್ರೀತಿ
ಎರಡೂ ಅಷ್ಟೇ
ಯಾವುದನ್ನೂ ಬಿಟ್ಟು
ಬದುಕಲಾಗದು

ಮುಗಿಯದ ಕತೆಗೆ
ನೀ ಮುನ್ನುಡಿ ಬರೆಯಬೇಕಿದೆ
ವ್ಯೆಥೆಯ ಕಣ್ಣೀರು ಒರೆಸಿ
ನಗುವಿಗೆ ನೀ
ನಾಂದಿ ಹಾಡಬೇಕಿದೆ

ಯಾಕಿಷ್ಟು ದೂರ ನಿಲ್ಲುತ್ತಿ
ಹೃದಯದ ಭಾಷೆಗೆ
ನೀ ಕಿವಿಯಾಗು ಬಾ
ಮಾತು ಮೌನವಾಗುತ್ತದೆ

ನೀನಿಲ್ಲದಿದ್ದರೆ
ಹಗಲಿಗೂ ಉಸಿರಿಲ್ಲ
ಇಡುವ ಹೆಜ್ಜೆಯಲಿ
ಗೆಜ್ಜೆಯ ಧ್ವನಿಯಿಲ್ಲ
