ಕಾವ್ಯ ಸಂಗಾತಿ
ಭಾವಭಿತ್ತಿ
ರೇಷ್ಮಾ ಕಂದಕೂರ
ನಿರೀಕ್ಷೆಯ ಹಾದಿಯಲಿ
ಪರೀಕ್ಷೆ ನೂರು ತರಹ
ನಿರೀಕ್ಷಿತ ಗುರಿ ಮುಟ್ಟದಿರೆ
ಹತಾಶೆಯ ಭಿತ್ತರ.
ಸಮರೋಪಾದಿಯ ಬಯಕೆಗೆ
ಅರೋಪ ಪ್ರತ್ಯಾರೋಪದ ಬಳುವಳಿ
ನಿರಂತರ ಜೀವಯಾನದಿ
ಪರಿಸ್ಥಿತಿಯ ಅರ್ಥೈಸುವವರಾರು.
ನನ್ನವರೆಂಬ ಕಬಂಧ ಭಾವದ ಚಳುವಳಿ
ತೊರೆದಭಾವಕೆ ಏನೆನ್ನಲಿ
ಆಡಂಬರದಿ ಹಕ್ಕಿಯಂತ ಮನ
ತೊಡರಾದರೆ ಬೇಲಿಹೊಕ್ಕ ತನು.
ತಡಬಡಿಸಿದ ಕುರುಡು ಒಲವು
ಗರಬಡಿದು ನಿಂತ ಹಾಗಿದೆ
ನಿರೀಕ್ಷೆಯ ನೇತ್ರ ರಕ್ತ ಸುರಿಸಿದೆ
ಸುಭಿಕ್ಷೆಗೆ ಕಾದ ಬಕಪಕ್ಷಿಯಂತೆ.
ಚೇತೋಹಾರಿ ಎದೆಬಡಿತ
ವೇದನೆಯ ರಂಗು ಲೇಪಿಸಿ
ರೋಧನೆಯ ಜಾಡಿನಲಿ
ನಿತ್ಯ ಮತ್ತೆ ನಿರೀಕ್ಷೆಯ ಮಾರುಹೋಗಿದೆ.
ಅದ್ಭುತವಾದ ಸಾಲುಗಳು, ಅನುಭವದ ಮಾತು ಅನುಭೂತಿಯ ಬುತ್ತಿಯ ಸಾಲುಗಳಿಂದ ಸಾಹಿತ್ಯ ಆಸಕ್ತರಿಗೆ ” ಭಾವ ಬುತ್ತಿ” ಯನ್ನು ಉಣಬಡಿಸಿದ ನಿಮಗೆ ಅಭಿನಂದನೆಗಳು ….