ಅನುರಾಗದಲ್ಲಿ

ಕಾವ್ಯ ಸಂಗಾತಿ

ಅನುರಾಗದಲ್ಲಿ

ಪ್ರೊ ರಾಜನಂದಾ ಘಾರ್ಗಿ

ಹುಡುಕುತ್ತಿರುವೆ ನನ್ನ ನಾನು
ನಿನ್ನ ಕಣ್ಣಂಚಿನ ಮಿಂಚಿನಲ್ಲಿ
ತುಟಿಯಂಚಿನ ಮುಗುಳ್ನಗೆಯಲ್ಲಿ
ಹಾರಾಡುವ ಮುಂಗುರುಳಲ್ಲಿ

ಇಣುಕುತ್ತಿರುವೆ ನಿನ್ನ ಭಾವಗಳಲ್ಲಿ
ನೀ ಬರೆದ ಕಾವ್ಯ ಧಾರೆಯಲ್ಲಿ
ನೀ ನುಡಿಸುವ ರಾಗಗಳಲ್ಲಿ
ಬಳಸುವ ಸಂಗೀತ ವಾದ್ಯಗಳಲ್ಲಿ

ಆಲಿಸುತ್ತಿರುವೆ ಲಯಗಳಲ್ಲಿ
ದ್ವನಿಯ ತರಂಗಗಳಲ್ಲಿ
ಉಸುರಿನ ಎರಿಳಿತಗಳಲ್ಲಿ
ಹೃದಯದ ಬಡಿತಗಳಲ್ಲಿ

ಕಾಯುತಿರುವೆ ಮನದಲ್ಲಿ
ಕಾತರ ತುಂಬಿದೆ ನಯನದಲ್ಲಿ
ಮನವೆಲ್ಲ ಬರುವ ದಾರಿಯಲ್ಲಿ
ಸಿಲುಕಿಕೊಂಡು ಅನುರಾಗದಲ್ಲಿ


Leave a Reply

Back To Top