ಕಾವ್ಯ ಸಂಗಾತಿ
ಕಾಫಿಯಾನ ಗಜಲ್
ನಯನ ಭಟ್. ಜಿ. ಎಸ್.
ಗೌಣವಾಗುತ್ತಿವೆ ಮಾನವೀಯ ಮೌಲ್ಯಗಳು
ಸದ್ದಿಲ್ಲದೇ ಮರೆಯಾಗುತ್ತಿವೆ ಆದರ್ಶಗಳು
ಪರಿವರ್ತನೆ ನಿಯಮದಡಿ ಕುಕೃತ್ಯಗಳ ಪಾಶ
ಕುಸಿಯುತ್ತಲಿವೆ ನಲ್ನಡತೆಯ ಧೋರಣೆಗಳು
ಕುಟುಕುತ್ತಿವೆ ಮನವ ಬಿರಿಯುವ ಹುಚ್ಚಾಟಗಳು
ಮೌನ ಬೇಡಿಯಲಿ ಶೋಕಿಸಿವೆ ಮಾತುಗಳು
ಜಗತ್ತು ಬಿಗಿಯಾಗಿದೆ ಅಂಗೈ ಪರಿಧಿಯೊಳು
ಕ್ಲೇಶದಿ ಅಳುತ್ತಿವೆ ಮಾನವೀಯ ಗುಣಗಳು
ಋತುಗಳನು ಸೆರೆ ಹಿಡಿಯುತ್ತಿವೆ ‘ನಯನ’ಗಳು
ಅಸಿಂಧು ಭಾವದಿ ರೋಧಿಸುತ್ತಿವೆ ಚಿಂತನೆಗಳು.
ವಾಸ್ತವತೆಯ ವಿಚಾರಗಳಿವು.ಮರೆಯಾಗುತ್ತಿರುವ ಮೇಲಿನ ವಿಚಾರಗಳಿಗೆ ಕುರುಡು ಧರ್ಮ,ಕೊಳಕು ರಾಜಕೀಯ…..