ಅಂಕಣ ಸಂಗಾತಿ
ಪ್ರಸ್ತುತ
ಅಂಕಣದ ಆರಂಭಕ್ಕಿಂತ ಮುನ್ನ
ಶರಣರ ನಾಡು ಬಾಗಲಕೋಟೆ ಜಿಲ್ಲೆಯ ಹುನಗುಂದದ ಸಾಹಿತಿ ನಿಂಗಮ್ಮ ಬಾವಿಕಟ್ಟಿ ಅವರು ಕಥೆ, ಕವನ, ಲೇಖನ, ಪ್ರಬಂಧಗಳನ್ನು ವಿಭಿನ್ನ ಶೈಲಿಯಲ್ಲಿ ಬರೆಯುವ ಕಲೆ ರೂಡಿಸಿಕೊಂಡವರು. ಅವರ ಬರಹದ ವಿಶೇಷತೆ ಎಂದರೆ ಕನಸು ಕಲ್ಪನೆಗಳಲ್ಲ, ನಮ್ಮ ಸುತ್ತಮುತ್ತಲಿನ ಪ್ರಸಂಗ ಘಟನೆಗಳನ್ನು ಬಿಂಬಿಸುತ್ತ ಹೋಗಿ ಒಂದು ಸಂದೇಶದೊಂದಿಗೆ ಬರಹ ‘ಫಳ್’ ಎಂದು ಮಿಂಚಿನ ಹಾಗೆ ಒಂದು ಚಿಂತನೆ ಮೂಡಿಸಿಬಿಡುತ್ತದೆ. ಅವರ ಬರಹದ ಓದಿನ ನಂತರ ನಮ್ಮೊಳಗೊಂದು ಬದಲಾವಣೆಯ ಸಂಚಲನ ಉಂಟಾಗುತ್ತದೆ. ಇದು ಅವರಿಗೊಲಿದ ವೈಶಿಷ್ಟ್ಯತೆ. ಇಂತಹ ವಿಶೇಷ ಶೈಲಿಯ ಬರಹಗಳು ಪ್ರತಿ ಸೋಮವಾರ ಸಂಗಾತಿ ಪತ್ರಿಕೆಯಲ್ಲಿ ‘ಪ್ರಸ್ತುತ’ ಎಂಬ ಅಂಕಣದಲ್ಲಿ ಮೂಡಿಬರಲಿವೆ. ಓದುವರು ಸ್ಪಂದಿಸಿ, ಪ್ರೋತ್ಸಾಹಿಸಿ ಸಲಹೆಗಳಿಗೂ ಸ್ವಾಗತ.
ಲೇಖಕಿಯ ಸಂಕ್ಷಿಪ್ತ ಪರಿಚಯ
ನಿಂಗಮ್ಮ ಭಾವಿಕಟ್ಟಿ ಅವರು ಪಂಚ ವಾಣಿ ಪತ್ರಿಕೆಯಲ್ಲಿ ಅಂಕಣ ಬರಹಗಾರ್ತಿ. ‘ಕುಶಲೋಪರಿ’ ‘ಹಾರೈಕೆ’ ಅವರ ಕವನ ಸಂಕಲನಗಳು ‘ವಚನ ಸಂಭ್ರಮ ಆಧುನಿಕ ವಚನಗಳು’ ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ಹೈಕುಗಳು, ಹನಿಗಳನ್ನು ಮನಮುಟ್ಟುವಂತೆ ಕಟ್ಟುವ ಲೇಖಕಿ ಬಾಗಲಕೋಟೆ ಜಿಲ್ಲೆಯ ಹುನಗುಂದದವರು. ಓದು, ಬರಹ, ಪ್ರವಾಸ ಅವರ ಹವ್ಯಾಸಗಳಾಗಿದ್ದು ಅವರಿಗೆ ‘ಕಾವ್ಯಶ್ರೀ’ ‘ರಾಜ್ಯೋತ್ಸವ ಪ್ರಶಸ್ತಿ’ ‘ಆಜೂರ್’ ಪ್ರಶಸ್ತಿಗಳು ಅರಸಿ ಬಂದಿವೆ ಆಕಾಶವಾಣಿಯಲ್ಲಿ ಅವರ ಚಿಂತನ ಸಂದರ್ಶನಗಳು ಮೂಡಿಬಂದಿವೆ.