ಗಜಲ್

ಕಾವ್ಯ ಯಾನ

ಗಜಲ್

ನಯನ. ಜಿ. ಎಸ್

ಎದೆಯಲ್ಲಿ ಬಚ್ಚಿಟ್ಟ ಕನಸು ಬೆರೆತು ಅರಳಿಸುವವರೇ ಇಲ್ಲ
ಕಂಗಳಲಿ ಬಿಚ್ಚಿಟ್ಟ ಬವಣೆ ಅರಿತು ಶಮನಿಸುವವರೇ ಇಲ್ಲ

ಭ್ರಾಂತಿಗಳ ಕೂಪಕೆ ನೆಚ್ಚಿಕೊಳ್ಳುತ್ತಿದೆ ಮೌಢ್ಯಗಳ ಅಂಧತ್ವ
ನಗಣ್ಯ ಬಿಂಬಕೆ ತೆರೆದಿಟ್ಟ ಭಾವ ಹಚ್ಚಿಕೊಳ್ಳುವವರೇ ಇಲ್ಲ

ಬಿಕರಿಯಾಗುತಿದೆ ಅಂತರಾತ್ಮದ ಅಸು ಕಡು ದೈನ್ಯತೆಯಲಿ
ಸ್ವಾರ್ಥದ ಕುಣಿಕೆಗೆ ಕಟ್ಟಿಟ್ಟ ಖಾತ್ರಿಗಳು ಬಿಡಿಸುವವರೇ ಇಲ್ಲ

ಭಾವ ಗಣಿತಕೆ ಗುಣಕಗಳ ಸೆಲೆಯಿಲ್ಲ ಶೂನ್ಯವಾಗಿದೆ ಗಮ್ಯ
ನಿರ್ಲಿಪ್ತತೆಗೆ ಬೆಸೆದಿಟ್ಟ ಬಾಳ್ವೆ ಮಿಳಿತು ಮುದ್ದಿಸುವವರೇ ಇಲ್ಲ

ಋಜುತ್ವಕ್ಕೆ ಋಣಭಾರ ಕ್ರಯವ ತೆತ್ತುವುದು ತ್ರಾಸ ‘ನಯನ’
ಸಾಲಂಕಿಗೆ ಬಂಧಿಸಿಟ್ಟ ತನು ವಿಮುಕ್ತಿ ಕರುಣಿಸುವವರೇ ಇಲ್ಲ


4 thoughts on “ಗಜಲ್

  1. ಅರ್ಥಪೂರ್ಣ ಪದಗಳು.ಪರಿಕಲ್ಪನೆ ಅಧ್ಭತ.ಇನ್ನಷ್ಟು ಸ್ಫೂರ್ತಿಯ ಸಾಲುಗಳು ನಿಮ್ಮಿಂದ ಬಯಸುವೆವು.

Leave a Reply

Back To Top