ಗಜಲ್

ಕಾವ್ಯಯಾನ

ಗಜಲ್

ಅನಸೂಯ ಜಹಗೀರದಾರ

.

ಯಾರು ಯಾರಲೂ ತಕರಾರಿರಲಿಲ್ಲ ನಿನ್ನ ಹೊರತಾಗಿ
ಸದಾ ದೇವರಲ್ಲೂ ದುವಾ ಬೇಡಲಿಲ್ಲ ನಿನ್ನ ಹೊರತಾಗಿ

ಯಾರೋ ಹೇಳಿದರು ಕೇಳಿದ್ದು ಕರುಣಿಸುವವ ಇಹನೆಂದು
ಹಸಿವೂ ತನ್ನಿರುವ ನೆನಪಿಸಲಿಲ್ಲ ನಿನ್ನ ಹೊರತಾಗಿ

ದೈವವನ್ನೂ ಮರೆಸಿಬಿಡುವ ಪ್ರೀತಿ ಅಚ್ಚರಿಯೆ ದೊರೆಯೆ
ಮತ್ತೊಂದು ಚಿತ್ರ ಒಳ ನುಸುಳಲಿಲ್ಲ ನಿನ್ನ ಹೊರತಾಗಿ

ಖ್ಯಾಲದಲಿದ್ದೂ ಹೇಳದಂತಹ ಬೇಕಾದ ಬಗೆಯಿದು
ಸಾಗರದಲ್ಲಿದ್ದೂ ತೃಷೆ ತಣಿಯಲಿಲ್ಲ ನಿನ್ನಹೊರತಾಗಿ

ನೀ ನಡೆದ ಹಾದಿಯಲಿ ಪ್ರತಿ ಹೆಜ್ಜೆ ಗುರುತು ಗಟ್ಟಿ ನೆಲೆಯೆ ಅನು
ಏನಿದ್ದೂ ಖಾಲಿತನ ತುಂಬಲಿಲ್ಲ ನಿನ್ನ ಹೊರತಾಗಿ


Leave a Reply

Back To Top