ಆದಿಪ್ರಾಸ ಬಹು ಕಾಫಿಯ ಗಜಲ್

ಕಾವ್ಯ ಸಂಗಾತಿ

ಆದಿಪ್ರಾಸ ಬಹು ಕಾಫಿಯ ಗಜಲ್

ಮಾಜಾನ್ ಮಸ್ಕಿ

ಸೊರಗುತ್ತಿರುವೆ ನೋವು ಕೊಟ್ಟ ಮನವ ನೆನೆದು
ಮರಗುತ್ತಿರುವೆ ನಲಿವು ಬಿಟ್ಟ ದಿನವ ನೆನೆದು

ಒಳಗೊಳಗೆ ಕುದಿಯುತ್ತಿರುವ ಕಣ್ಣೀರಿನ ಲಾವಾರಸ
ಕೊರಗುತ್ತಿರುವೆ ಪಣವು ತೊಟ್ಟ ಸಮಯವ ನೆನೆದು

ಗಿಳಿಯಂತಹ ಹೆಂಗಳಿಯರಿಗೆ ಗಿಡುಗಗಳದೆ ಹಾವಳಿ ಏಕೆ
ಬೆದರುತ್ತಿರುವೆ ದುಃಖವು ನೆಟ್ಟ ನೋಟವ ನೆನೆದು

ಕೋಮಲತೆಯ ಕಮಲವು ಕೆಸರು ಸಹಿಸಬೇಕಾಗಿದೆ
ಮರೆಯುತ್ತಿರುವೆ ಬಂಧವು ಸುಟ್ಟ ಭಾವ ನೆನೆದು

ಪ್ರಸನ್ನತೆಯ ಬೇಲಿಯ ಬಳಸಿ ನಿಂತಿರುವೆ “ಮಾಜಾ”
ಬಳಲುತ್ತಿರುವೆ ತನುವು ಇಟ್ಟ ಶಾಪವ ನೆನೆದು


Leave a Reply

Back To Top