ಗಝಲ್ 

ಕಾವ್ಯ ಸಂಗಾತಿ

ಗಜಲ್

ಸುಜಾತಾ ರವೀಶ್ 

ಅಹಮ್ಮಿನ ಕೋಟೆಯಲಿ ಬಂಧಿಯಾಗಿ ಪ್ರೀತಿ ನಗುವುದೇ 
ಭಿಮ್ಮಿರಲು ಮನಸಿನಲಿ ವಿಶ್ವಾಸ ತುಂಬಿ ತೂಗುವುದೇ 

ಮುರಿದಿದೆ ಹೃದಯ ಚುಚ್ಚುತಿದೆ ನಂಜಿನ ಮಾತುಗಳಿಗೆ 
ಶರವೇಗದ ಬಾಣಕ್ಕೆ ಎದೆ ಸೀಳಿದ ನೋವು ಕಾಡುವುದೇ? 

ಸ್ಪಂದನದ ತಂಗಾಳಿ ಬೀಸಿದರೆ ಕಾವು ತಂಪಾದೀತೇ 
ಬಂಧನದ ಗಂಟುಗಳು ಬಿಚ್ಚಿಹೋಗುತಿರೆ ನಂಟು ನಿಲ್ಲುವುದೇ?

ಭಾವತೀರಗಳ ಮಧ್ಯದಲಿ ವಿಸ್ತಾರ ಕಡಲಿನಂತರ 
ಜೀವಗಳೇಕೋ ವಿಮುಖ ಪರಸ್ಪರ ಒಲವು ಗೆಲ್ಲುವುದೇ

ಸುಜಿಯು ಬಲ್ಲಳು ವಿರಸದುರಿ ಇನ್ನೂ ಹೊಗೆಯಾಡಿದೆಯೆಂದು 
ವಿಜಯ ಸೋತು ತಾ ಗೆಲುವೆನೆಂಬ ಗೀತೆ ಹಾಡುವುದೇ 


Leave a Reply

Back To Top