ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಎ. ಹೇಮಗಂಗಾ

ಬರುವ ಕಷ್ಟಗಳ ಎದುರಿಸಲು ಆತ್ಮಬಲವಿರಲಿ ನಿಮ್ಮೊಳಗೆ
ಇರುವ ಇಷ್ಟಗಳ ಪೂರೈಸಲು ಅಂತಃಶಕ್ತಿಯಿರಲಿ ನಿಮ್ಮೊಳಗೆ

ಪ್ರತಿ ಜೀವಿಯ ಹುಟ್ಟೂ ಧನ್ಯತೆ ಪಡೆಯಬೇಕು ಬುವಿಯಲ್ಲಿ
ಕ್ಷಣಿಕ ಬದುಕಿನ ಅರಿವಿನ ಪ್ರಣತೆ ಬೆಳಗುತಿರಲಿ ನಿಮ್ಮೊಳಗೆ

ಸಂಗಾತಿಯ ಪ್ರೀತಿ ಸಿಂಚನದಿ ಅದೆಂಥಾ ಮಧುರಾನುಭೂತಿ!
ಜೊತೆ ಜೊತೆಗೆ ಮುನ್ನಡೆವೆವೆಂಬ ನಿಷ್ಠೆಯಿರಲಿ ನಿಮ್ಮೊಳಗೆ

ಪರಿಶ್ರಮವಿಲ್ಲದೇ ಅಂದುಕೊಂಡ ಕಾರ್ಯ ಸಿದ್ಧಿಸುವುದು ಹೇಗೆ ?
ನಿಮ್ಮತನ ತೊರೆಯದೇ ಸಾಧಿಸುವ ಬದ್ಧತೆಯಿರಲಿ ನಿಮ್ಮೊಳಗೆ

ಹೆತ್ತವರ ಆಶೀರ್ವಾದವೇ ಶ್ರೀರಕ್ಷೆ ಕೊನೆತನಕವೂ *ಹೇಮ
ಸಾರ್ಥಕತೆ ಗಮ್ಯ ಬಿಡದೇ ತಲುಪುವ ಛಲವಿರಲಿ ನಿಮ್ಮೊಳಗೆ


ಮೈಸೂರಿನ ಖ್ಯಾತ ಗಾಯಕರು , ರಾಗಸಂಯೋಜಕರು ಹಾಗೂ ನನ್ನ ಗುರುಗಳಾದ ಶ್ರೀ. ವೇದಾಂತ್ ಅತಿಶಯ್ ಜೈನ್ ಅವರ ಜನ್ಮದಿನ ಇಂದು. ಈ ಗಜಲ್ ಮೂಲಕ ಅವರಿಗೆ ಶುಭಹಾರೈಸಿದ್ದೇನೆ

About The Author

1 thought on “ಗಜಲ್”

Leave a Reply

You cannot copy content of this page

Scroll to Top