ಕಾವ್ಯ ಸಂಗಾತಿ
ಗಜ಼ಲ್
ವಾಣಿ ಭಂಡಾರಿ

ಅದೆಷ್ಟೊ ಕನಸುಗಳಿತ್ತು ಬೊಗಸೆ ಕಂಗಳಲ್ಲಿ ಹೇಳದೆ ಹೋದೆಯಲ್ಲ.
ಅದೆಷ್ಟೋ ಆಸೆಗಳಿತ್ತು ಮನದ ಮಹಲಿನಲ್ಲಿ ಹೇಳದೆ ಹೋದೆಯಲ್ಲ.
ಮುಂಗುರುಳ ಲಜ್ಜೆ ನಿನ್ನ ನಡಿಗೆಯ ಸಪ್ಪಳಕ್ಕಾಗಿ ಕಾಯುತ್ತಲಿತ್ತು.
ಅದೆಷ್ಟೋ ಮಾತುಗಳಿತ್ತು ಸಿಹಿ ಅದರದಲ್ಲಿ ಹೇಳದೆ ಹೋದೆಯಲ್ಲ.
ಬದುಕು ಬೆರಗಿಗಾಗಿ ಬಯಲಿನಲ್ಲಿ ಕಾದು ಶಿಲೆಯಾಯಿತು
ಅದೆಷ್ಟೋ ಕಲೆಗಳಿತ್ರು ಹೃದಯ ಕವಾಟಿನಲ್ಲಿ ಹೇಳದೆ ಹೋದೆಯಲ್ಲ.
ಮನಸ್ಸು ಮಂದಿರವಾಗಲು ತಕರಾರು ಇರಲಿಲ್ಲ ಸೌದ ಕಟ್ಟಬೇಕಿತ್ತು
ಅದೆಷ್ಟೋ ಭಾವಗಳಿತ್ತು ಎದೆಯ ಗೂಡಿನಲ್ಲಿ ಹೇಳದೆ ಹೋದೆಯಲ್ಲ.
ವಾಣಿಯ ಭಾವಗಳ ತೋಟದಲ್ಲಿ ನಿನ್ನದೆ ಬೀಜ ಚಿಗುರೊಡೆದಿದೆ
ಅದೆಷ್ಟೋ ವಿಚಾರಗಳಿತ್ತು ವಿನಿಮಯದ ಜಾಡಿನಲ್ಲಿ ಹೇಳದೆ ಹೋದೆಯಲ್ಲ
ಚೆಂದ