ಕಾವ್ಯ ಸಂಗಾತಿ
ಬೆಸೆದ ಬಾಂಧವ್ಯ
ವಾಣಿ ಯಡಹಳ್ಳಿಮಠ

ನೀ ನನ್ನಂತಲ್ಲವೆಂದೇ ,
ನನ್ನ ಸೆಳೆದೆಯೋ ಏನೋ ??
ನಾ ನಿನ್ನಂತಿಲ್ಲವೆಂದೇ,
ನನ್ನೆಡೆಗೆ ಆಕರ್ಷಿತಳಾದೆಯೋ ಏನೋ??
ನಾ ತುಸು ಮಾತಿಗೆ ಸನಿಹ,
ನೀ ತುಸು ಮೌನಕೆ.
ನಾ ತುಸು ನಗುವಿಗೆ ಸನಿಹ ,
ನೀ ತುಸು ನಿಗೂಢಕೆ.
ಭಾವನೆಗಳನು ಬಯಲಾಗಿಸಿ, ಹಗುರಾಗುವ ನಾನು ..
ಬಚ್ಚಿಟ್ಟು ಭಾವನೆಗಳನು, ಬಲಗೊಳ್ಳುವ ನೀನು ..
ಹೇಳಿ ಕನಸುಗಳನು, ಖುಷಿಪಡುವ ನಾನು ..
ಹೇಳದೇ ,ಹೊಂಗನಸುಗಳನು ಹೊಸೆಯುವ ನೀನು..
ಆದರೂ,,
ನನ್ನ ಪ್ರತಿ ಕಣ್ಣೀರು ಕರಗಿಸುವ ಕಲೆ ಗೊತ್ತು ನಿನಗೆ..
ಆದರೂ,,
ನಿನ್ನ ಪ್ರತಿ ಗಾಯ ಮಾಯಿಸುವ ಮದ್ದು ಗೊತ್ತು ನನಗೆ..
ಇದು ಬಾಲ್ಯದ ಅನುಬಂಧ ಇದು ಬದುಕು ಬಂಧಿಸಿದ ಅನುಬಂಧ
ಇದು ಬಾಲ್ಯದ ಬಾಂಧವ್ಯ
ಇದು ಬದುಕು ಬೆಸೆದ ಬಾಂಧವ್ಯ
ಚೆಂದದ ಕವನ
ತುಂಬಾ ಧನ್ಯವಾದಗಳು ಮೇಡಂ