ಕಾವ್ಯ ಸಂಗಾತಿ
ಮರಳ ಮೇಲಿನ ಹೆಜ್ಜೆ
ಪ್ರೊ ರಾಜನಂದಾ ಘಾರ್ಗಿ
ಕೇಸರಿ ಬಾನಿನ ಇಳಿಜಾರಿನಲ್ಲಿ
ರವಿ ಜಾರುತಿಹನು ಭುವಿಯಲ್ಲಿ
ಹುಚ್ಚೆದ್ದು ಕುಣಿಯುತಿದೆ ಕಡಲು
ಅವನನ್ನು ಹಿಡಿದು ಬಂದಿಸಲು
ಅಲೆಗಳ ಮೇಲೆ ಕುಪ್ಪಳಿಸುತ್ತಿವೆ
ಕಡಲಹಕ್ಕಿಗಳು ಹಾರಾಡುತ್ತಿವೆ
ತಂಪಾಗುತ್ತಿರುವ ನೇಸರನಿಗೆ
ಕೈ ಬೀಸಿ ವಿದಾಯ ಹೇಳುತ್ತಿವೆ
ನಿಸರ್ಗ ಭಾವಗೀತೆ ಹಾಡುತಿದೆ
ತೀರದ ಮರಗಳು ತೆಲೆದೂಗುತಿವೆ
ಸೂರ್ಯನಿಗೆ ಚಾಮರ ಬೀಸುತ್ತಿವೆ
ಅಂತಿಮ ನಮನ ಸಲ್ಲಿಸುತ್ತಿವೆ
ಕೈಹಿಡಿದು ಜೋಡಿಗಳು ನಡೆಯುತ್ತಿವೆ
ರಸಿಕತೆಯ ಗಂಧವನ್ನು ಹರಡುತ್ತಿವೆ
ಮರಳ ಮೇಲಿನ ಹೆಜ್ಜೆಗಳು ನಗುತ್ತಿವೆ
ನಡೆಯುತ್ತ ಪ್ರಣಯಗೀತೆ ರಚಿಸುತ್ತಿವೆ
ಮರಳ ಮೇಲಿನ ಹೆಜ್ಜೆ ಸ್ಫುಟಗೊಂಡು ತನ್ನ ಛಾಪು ಮೂಡಿಸಿದಂತಿದೆ ನಿಮ್ಮ ಕವನ