ಮುಂಗಾರು ಮಳೆ

ಕಾವ್ಯ ಸಂಗಾತಿ

ಮುಂಗಾರು ಮಳೆ

ಗಾಯಿತ್ರಿ ಬಡಿಗೇರ

ಹಿಂಗಾರಿ ಮಳೆ ಹೋಗಿ ಮುಂಗಾರು ಮಳೆಯು
ರೈತನಿಗೆ ಕೊಟ್ಟಿತು ಆಹ್ವಾನದ ಕರೆಯೋಲೆಯು

ಬಿಸಿಲು ಸರಿದು ಮೋಡ ಕವಿದು
ತಂಗಾಳಿಯಲ್ಲಿ ಗುಡುಗು ಸಿಡಿಲಿನ ಜೊತೆಗೆ
ದಾರಾಕಾರದ ತುಂತುರು ಮಳೆಗೆ ರೈತ
ಏಕ ಮತ್ತು ದ್ವಿದಳ ಧಾನ್ಯಗಳನ್ನು ಬಿತ್ತಲು
ಹೆಗಲಲ್ಲಿ ಬುತ್ತಿಯ ಗಂಟ್ಟಿನ ಜೊತೆಗೆ
ಮುದ್ದಿನ ಮಂದಾಕಿಣಿ ಬಳಿ ಬಂದಳು ಜೊತೆಗೆ

ನಾನು ರೆಂಟ್ಟೆ ಹೊಡೆಯುವಾಗ
ಪಶ್ಚಿಮ ದಿಕ್ಕಿನ ಎಡೆಗೆ
ಕಾಳು ಬಿತ್ತುವ ಹೆಂಡತಿಯ
ಸೀರಯ ಶೆರಗು ಮುಖಕ್ಕೆ ತಾಕಿದಾಗ
ತಂಪಾದ ಗಾಳಿ ಮೈ ಸುಕಿದಾಗ
ಆ ಆನಂದಕ್ಕೆ ಪಾರವೇ ಸಿಗಲಿಲ್ಲಿ

ಬಿಡುವಿಲ್ಲದೆ ನೆಲ್ಲವ ಹದವಮಾಡುತ್ತ
ಕೈಗೆ ಸವಡಿಲ್ಲದೆ ಬೀಜವ ಬಿತ್ತುತ್ತ
ದೇಹವು ಬಾಗಿಸಿ ದಾನ್ಯಗಳಿಗೆ ನೀರುಣಿಸುತ್ತ
ಕರಿದ ತಿನಿಸುಗಳಿಗಾಗಿ ಹೆಂಡತಿಯ ದಾರಿ ಕಾಯುತ್ತ
ಇದೇ ಸಂತೋಷದಲ್ಲಿ ಮುಂಗಾರು ಮಳೆಗೆ
ಬಿತ್ತಿದ ಪೈರಿನ ಫಲ ಬರಲಿ ನಮ್ಮ ಕೈಗೆ


ಗಾಯಿತ್ರಿ ಬಡಿಗೇರ

2 thoughts on “ಮುಂಗಾರು ಮಳೆ

Leave a Reply

Back To Top