ಮುಂಗಾರಿನ ಸೋನೆ

ಕಾವ್ಯ ಸಂಗಾತಿ

ಮುಂಗಾರಿನ ಸೋನೆ

ಹಷಿ೯ಣಿ ತರೀಕೆರೆ

ಬರಿದೇ ನೆನಪಲ್ಲ
ನೀನು..
ತುಸು ತಣ್ಣಗಿನ
ಮುಂಗಾರಿನ ಸೋನೆಯಂತೆ

ತಾರೆಗಳೇ ಇಲ್ಲದೇ
ಕವಿದ ನಟ್ಟಿರುಳಿನಲಿ
ತುಸು ಮಿಂಚಿದ
ಕೋಲ್ಮಿಂಚಿನಂತೆ

ಬೋಗ೯ರೆಯಲಿಲ್ಲ
ಮುಂಗಾರಿನ
ಜಡಿ ಮಳೆಯಂತೆ
ಆಭ೯ಟಿಸಲಿಲ್ಲ
ಮೊದಲ ಗುಡುಗಿನಂತೆ

ಬರಿದೇ ನಕ್ಕು ಬಿಟ್ಟೆ
ಬಿದಿಗೆ ಚಂದಿರನಂತೆ


ಹಷಿ೯ಣಿ ತರೀಕೆರೆ

One thought on “ಮುಂಗಾರಿನ ಸೋನೆ

Leave a Reply

Back To Top