ಕಾವ್ಯ ಸಂಗಾತಿ
ತೀರವಿರದ ಕಡಲು
ಅರುಣ ನರೇಂದ್ರ
ಕತ್ತಲೆ ಹಾಡು

ಹುಡುಕುತ್ತೇನೆ
ಕತ್ತಲೆಯಲ್ಲೂ
ನಿನ್ನ ಮುಖ
ಕಾಣುವುದೆಂದು
ಕಣ್ಣ ಬಟ್ಟಲಲಿ
ಹಣತೆ ಹಚ್ಚಿ

ನಿನ್ನನ್ನೇ ತಲಾಶ್ ಮಾಡುತ್ತಾ
ಮೇಣದ ಬತ್ತಿ
ದಣಿದು ಕರಗಿ
ನೀರಾಯಿತು

ಚಂದಿರನ ಅಪಹರಿಸಿ
ಒಯ್ದವರ್ಯಾರೋ
ತಾರೆಗಳ ವಿಚಾರಣೆ ಇದೆ
ರಾತ್ರಿಯಲ್ಲಾ

ನಲ್ಲನ ಹುಡುಕಾಟದಲ್ಲಿ
ಉಷೆಯ ಸೆರಗು ಜಾರಿ
ಕತ್ತಲೆ ಬೆತ್ತ ಲಾಯಿತು




