ಹೊಸ ನ್ಯಾನೊ ಕಥೆಗಳು

ಕಥಾ ಸಂಗಾತಿ

ಹೊಸ ನ್ಯಾನೊ ಕಥೆಗಳು

ರಾಘವೇಂದ್ರ ಮಂಗಳೂರು

ಆಯ್ಕೆ

ಆವೊತ್ತು ತಮ್ಮ
ವೆಡ್ಡಿಂಗ್ ಆನಿವರ್ಸರಿ…
ಸೀರೆಗಳ ಶಾಪಿಂಗನ್ನು
ಆತನಿಗೇ ವಹಿಸಿದಳು…
ಏಕೆಂದರೆ
ಆತನ ಆಯ್ಕೆ ಅತ್ತ್ಯುತ್ತಮ
ಅಂತ ತನ್ನ ಮದುವೆ
ನಿಶ್ಚಿತಾರ್ಥದಲ್ಲೇ
ಜಾಹಿರಾಗಿತ್ತು!

ಪ್ರೀತಿ – ಮದುವೆ

ಯು.ಎಸ್. ನಿಂದ
ಐದು ವರ್ಷಗಳ ಬಳಿಕ
ವಾಪಾಸು ಬಂದ ಆಕೆ
” ಏನು ಇನ್ನೂ ಮದುವೆಯಾಗಿಲ್ವೆ..?
ಕೇಳಿದಳು ಆಕೆ ಆತನನ್ನು…
“ಇನ್ನೂ ನನ್ನನ್ನು ಪ್ರೀತಿಸುತ್ತಿರುವಿಯಾ.?”
ಎನ್ನುವದು ಆ ಮಾತಿನ ಗೂಡಾರ್ಥ!

ಗಿಫ್ಟ್ ಐಡಿಯಾ

ಇವೊತ್ತು ನನ್ನ ಹೆಂಡತಿಯ
ಹುಟ್ಟು ಹಬ್ಬ.
ಆಕೆಯ ಸಂಭ್ರಮ – ಸಂತಸ
ಹೆಚ್ಚಿಸಲು ಏನಾದರೂ
ಹೊಸ ಐಡಿಯಾ ಹೇಳು…”
ಆಕೆಯನ್ನು ಬಿಗಿದಪ್ಪಿಕೊಳ್ಳಲು
ಯತ್ನಿಸುತ್ತ ಆತ ಕೇಳಿದ…
ಆತನ ಪ್ರಯತ್ನವನ್ನು
ವಿಫಲಗೊಳಿಸುತ್ತ ನುಡಿದಳು ಆಕೆ…
“ಇಂದಿನಿಂದ ನಾವು ಬೇರೆಯಾಗಿಬಿಡೋಣ..!”

ದೇವರು

ಒಬ್ಬ ಸಾಧಾರಣ ನಿಜ ಭಕ್ತ
ಒಂದೊಂದೇ ಕಲ್ಲನ್ನು ಜೋಡಿಸಿ
ಗುಡಿ ಕಟ್ಟಿದ…
ವಿಗ್ರಹವನ್ನು ಪ್ರತಿಷ್ಟಾಪಿಸಿದ…
ಮರುದಿನವೇ…
ವೇದ ಪಂಡಿತರು ಕಾಲಿಟ್ಟರು…
ಬರು ಬರುತ್ತಾ ವಿ ಐ ಪಿ
ಭಕ್ತರು ಹೆಚ್ಚಾದರು…
ಆ ಜನ ಜಂಗುಳದ
ಮಧ್ಯೆ ಉಸಿರುಗಟ್ಟಿದಂತಾದ
ಸಾಮಾನ್ಯ ಭಕ್ತ ಅಲ್ಲಿಂದ
ನಿಧಾನವಾಗಿ ಹೊರ ಬಂದ…
ಆತನ ಕಿರು ಬೆರಳು ಹಿಡಿದು
ಜೊತೆಯಾದ ಇಲ್ಲಿಯವರೆಗೆ
ಅಲ್ಲಿ ನೆಲೆಸಿದ್ದ ದೇವರು ಕೂಡಾ!

ಕಾರುಗಳು

ಆತ ಅಮೇರಿಕದಿಂದ
ಇಪ್ಪತ್ತೈದು ವರ್ಷಗಳ
ಬಳಿಕ ಸ್ವಂತ
ಊರಿಗೆ ಮರಳಿ ಬಂದ…
ರಸ್ತೆ ಮೇಲೆ ಬಸವ, ಚಂದ್ರು,
ಸುಬ್ಬಣ್ಣ,ಅಬ್ದುಲ್ಲಾ, ಜೋಸೆಫ್
ಕಾಣುತ್ತಾರೆಂದುಕೊಂಡ..
ಆದರೆ ಬರೀ
ಕಿಯಾ, ಎಂ ಜಿ ಹೆಕ್ಟರ್,
ಹೊಂಡಾಯಿ,
ಟೊಯಾಟೊ ಕಾರುಗಳೇ
ದರ್ಶನವಿತ್ತವು!


22 thoughts on “ಹೊಸ ನ್ಯಾನೊ ಕಥೆಗಳು

  1. ಎಲ್ಲಾ ಕಥೆಗಳು ಚೆನ್ನಾಗಿವೆ. ರಾಘವೇಂದ್ರ ಮಂಗಳೂರು ಅವರು ನ್ಯಾನೋ ಕಥೆಗಳನ್ನು ಹೆಣೆಯುವದರಲ್ಲಿ ಸಿದ್ಧಹಸ್ತರು. ಅವರು ಚಿಕ್ಕಥೆಗಳ ರಾಜ. ಅಭಿನಂದನೆಗಳು

    1. ರಾಘವೇಂದ್ರ ಅವರ ನ್ಯಾನೋ ಕಥೆಗಳು ಚೆನ್ನಾಗಿವೆ. : ಬಿ.ಟಿ.ನಾಯಕ್.

  2. ನಿಜವಾದ ಅರ್ಥದಲ್ಲಿ ನ್ಯಾನೋ ಕಥೆಗಳು ಇವಾಗಿವೆ…. ಅರ್ಥಪೂರ್ಣ ಕೂಡ ಅಭಿನಂದನೆಗಳು ಸರ್

  3. The way in which style the stories told are simply fantastic.Congratulations
    N K Dalabanjan

  4. ನ್ಯಾನೋ ಕಥೆಗಳೆಲ್ಲವೂ ಒಂದಕ್ಕಿಂತ ಒಂದು ಚೆಂದ. ಎಲ್ಲವೂ ಅರ್ಥಪೂರ್ಣ ಮತ್ತು ಮಾರ್ಮಿಕ. ನ್ಯಾನೋ ಕಥೆಯ ವೀರರಿಗೆ ಹೃತ್ಪೂರ್ವಕ ಅಭಿನಂದನೆಗಳು.

  5. ಇಲ್ಲಿಯ ಎಲ್ಲ ಕಣಕಥೆಗಳು ಸೊಗಸಗಿವೆ. ರಾಘವೇಂದ್ರ ಮಂಗಳೂರು ಅವರು ಆಯ್ದುಕೊಂಡ ಸಂಗತಿಗಳು ವಿವಿಧವಾಗಿವೆ. ಇವುಗಳಲ್ಲಿ ಜೊತೆಯಾದ ಭಗವಂತ, ಪ್ರೀತಿ-ಮದುವೆ ವಾಸ್ತವವನ್ನು ಅದರ ಇತಿಹಾಸದಿಂದ ಬೇರ್ಪಡಿಸುತ್ತದೆ. ಇಪ್ಪತ್ತೈದು ವರ್ಷಗಳು ಈ ಬದಲಾವಣೆಯ ಕಾಲದಲ್ಲಿ ಕಡಿಮೆ ಅವಧಿಯಲ್ಲವಾದರೂ, ಕಾರು ಮಾಲ್ ಗಳಿಗಿಂತಲೂ ಸ್ನೇಹ ಮುಖ್ಯವೆಂದು ಸೂಕ್ಷ್ಮವಾಗಿ ತಿಳಿಸಿದ್ದಾರೆ.

  6. ತೀಕ್ಷ್ಣ ತಿರುಳಿನ ಸೊಗಸಾದ ನ್ಯಾನೋ ಕಥೆಗಳು.
    ಅಭಿನಂದನೆಗಳು

Leave a Reply

Back To Top