ಕಾವ್ಯ ಸಂಗಾತಿ
ನೀನು ಪರಿಸರವೇ…
ಟಿ.ದಾದಾಪೀರ್
ಗೆಳತಿ,
ನೋಡು ಜಗದ ಎಲ್ಲಾ ಆಚರಣೆಗಳು
ಹುಟ್ಟು ಹಬ್ಬಗಳು
ನಿನ್ನೊಂದಿಗೆ ತಳುಕು ಹಾಕಿಕೊಂಡಿವೆ
ನೀರು
ಮಣ್ಣು
ಮರ
ಗಾಳಿ
ನೆಲ
ಅಣು, ಅಣುವು
ಕಣ, ಕಣವು
ನಿನ್ನ ಪ್ರೀತಿಯ ರೀತಿ
ಕಲಿತು ಕೊಂಡಿವೆ
ಅದಕ್ಕೆ ನೋಡು ಎಲ್ಲರಿಗೂ
ಆಚರಣೆಯ ಸಂಭ್ರಮ
ಹೂ ನಗುವುದು
ಬಳ್ಳಿ ಬಳುಕೋದು
ಕಡಲು ಉಕ್ಕೋದು
ಚಂದಿರ ಬೆಳದಿಂಗಳ ಸ್ಕಲಿಸುವುದು
ಪರಿಸರದಲ್ಲು ನೀನು ರೂಡಿಸಿದ
“ರಸಂ ಮತ್ತು ರಿವಾಜುಗಳು”
ಪರಿಸರ ಸಂರಕ್ಷಣೆಯ
ಕೂಗು ಕೇಳುತ್ತಲೇ
ನೀನು ನೆನಪಾಗುತ್ತೀಯ
‘ಹಸಿರು-ಉಸಿರು’
‘ಪರಿಸರದಿಂದಲೇ ಬದುಕು’
ನಿಜ ನನಗಷ್ಟೆ ಗೊತ್ತು
‘ನೀನು ಪರಿಸರದಷ್ಟೆ ಮುಖ್ಯ’
ತುಂಬಾನೇ ಚೆನ್ನಾಗಿದೆ. ಸರಳವಾಗಿದೆ ಮತ್ತು ಅರ್ಥಪೂರ್ಣವಿದೆ.
Best wishes
Thank u sir