ಕಾವ್ಯ ಸಂಗಾತಿ

ಮುಂಗಾರಿನ ಸೊಬಗು

ಜಯಲಕ್ಷ್ಮಿ ಎಂ ಬಿ

Rain drops on water

ಮಾಘ ಮಾಸವು ಬಂದಿಹುದು
ಮನಕೆ ಸಂತಸ ತಂದಿಹುದು
ಬೀಜ ಬಿತ್ತುವ ಕೆಲಸದಲಿ
ಕಷ್ಟ ನೋವನು ಮರೆಯುತಲಿ

ಹಸಿರು ಇಳೆಯೊಳು ನಳನಳಿಸಿ
ಪ್ರಕೃತಿ ಮಾತೆಯು ಕಂಗೊಳಿಸಿ
ಪರ್ವಕಾಲದ ಋತುಮಾನ
ಹರಡಿ ಚೆಲ್ಲಿದೆ ಸವಿಗಾನ

ಜೀವಸಂಕುಲ ಸಂತಸದಿ
ಶುಭದ ಸಿಂಚನ ಮನುಕುಲದಿ
ತಳಿರು ತೋರಣ ಕಟ್ಟಿಹುದು
ಖುಷಿಯ ಸೊಬಗನು
ಹರಡಿಹುದು

ಸುಖದ ಸಿಂಚನ ಹರಿಸುತಲಿ
ಹೊಸತು ಜೀವನ ಸಾಗುತಲಿ
ಹಸಿರು ಸೀರೆಯ ಸೊಬಗಸಿರಿ
ಪುಷ್ಪ ರಾಶಿಯ ವನದಗರಿ

ಇಳೆಯು ನಗುತಲಿ ಮೆರೆದಿಹಳು
ಹೊಸದು ಚೇತನ ತಂದಿಹಳು
ಸವಿಯ ಗಾನದ ಸ್ವಾಗತವು
ಬದುಕೆ ಅರಿವಿನ ಹೂರಣವು


Leave a Reply

Back To Top