ಪ್ರತಿಭೆಗಳ ಅಡ್ಡಾದಿಂದ ಹಾಸ್ಯ ಹನಿಗವನ ಸ್ಪರ್ಧೆ

ಪ್ರಕಟಣೆ

ಪ್ರತಿಭೆಗಳ ಅಡ್ಡಾದಿಂದ

ಹಾಸ್ಯ ಹನಿಗವನ ಸ್ಪರ್ಧೆ

ವಿಜೇತರಿಗೆ ಆಕರ್ಷಕ ನಗದು ಬಹುಮಾನ ಮತ್ತು ಇತರೆ ನೂರಕ್ಕೂ ಹೆಚ್ಚು ಬಹುಮಾನಗಳು

[7:43 am, 21/06/2022] KASE:  ಪ್ರತಿಭೆಗಳ ಅಡ್ಡಾ ಯೂಟ್ಯೂಬ್ ಚಾನೆಲ್ ಕಳೆದ ಒಂದೂವರೆ ವರ್ಷದಿಂದ ಸಾಹಿತ್ಯ, ಸಿನಿಮಾ, ಸಂಗೀತ ಹೀಗೆ ಕಲೆಗಳಲ್ಲಿ ಆಸಕ್ತಿ ಹೊಂದಿರುವ ಪ್ರತಿಭೆಗಳಿಗೆ ಪ್ರತಿಷ್ಠಿತ, ಅಧಿಕೃತ ಹಾಗೂ ಒಳ್ಳೊಳ್ಳೆಯ ಸ್ಪರ್ಧೆಗಳ ಬಗ್ಗೆ ಮಾಹಿತಿ ನೀಡುತ್ತಾ ಯಶಸ್ವಿಯಾಗಿ ಮುನ್ನಡೆದುಕೊಂಡು ಬರುತ್ತಿದೆ. ಹೀಗೆ ಸ್ಪರ್ಧೆಗಳ ಬಗ್ಗೆ ಮಾಹಿತಿ ನೀಡಿ ಪ್ರೋತ್ಸಾಹಿಸುವ ಕನ್ನಡದ ಏಕೈಕ ಯೂಟ್ಯೂಬ್ ಚಾನೆಲ್ ಪ್ರತಿಭೆಗಳ ಅಡ್ಡಾ ಆಗಿದೆ. ಇದೇ ಪ್ರಥಮ ಬಾರಿಗೆ ಪ್ರತಿಭೆಗಳ ಅಡ್ಡಾ ಹಾಸ್ಯ ಹನಿಗವನ ಸ್ಪರ್ಧೆಯನ್ನು ಏರ್ಪಡಿಸುತ್ತಿದೆ. ಎಲ್ಲರೂ ಸುಲಭವಾಗಿ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆಯಬೇಕು ಎಂಬ ಉದ್ದೇಶದಿಂದ ಸ್ಪರ್ಧೆಯನ್ನು ಏರ್ಪಡಿಸಿ ಅದರಂತೆ ಸರಳವಾಗಿ ಎಲ್ಲರೂ ಭಾಗವಹಿಸುವಂತೆ ಸ್ಪರ್ಧೆಯನ್ನು  ಯೋಜಿಸಿದೆ.

 ಹಾಸ್ಯ, ನಮ್ಮ ದಿನನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿದೆ. ಪ್ರತಿಯೊಬ್ಬರು ದಿನನಿತ್ಯವೂ ಒಂದಲ್ಲ ಒಂದು ನಗೆ ಚಟಾಕಿಯನ್ನು ಹಾರಿಸುತ್ತಲೇ ಇರತೀವಿ. ಎಂತಹ ಕಷ್ಟದ ಸಮಯದಲ್ಲೂ ಒಂದು ತಿಳು ಹಾಸ್ಯದ ಹನಿ ಎದುರಿಗೆ ಇರುವವರ ಮುಖದ ಮೇಲೆ ಒಂದು ತೆಳುವಾದ ನಗೆಯನ್ನು ಉಕ್ಕಿಸಿ ಮನಸ್ಸನ್ನೂ ಉಲ್ಲಾಸಗೊಳಿಸಿ ಬಿಡುತ್ತೆ. ಅಂತಹ ಉಲ್ಲಾಸಕರ ನಗೆ ಚಟಾಕಿಗಳ ಸ್ಪರ್ಧೆಯೇ ಹಾಸ್ಯ ಹನಿಗಳ ಸ್ಪರ್ಧೆ.

  ಸ್ಪರ್ಧೆಯಲ್ಲಿ ಹೇಗೆ ಭಾಗವಹಿಸುವುದು?

 1. ನೀವೇ ಬರೆದ ಹಾಸ್ಯಭರಿತವಾಗಿರುವ, ನಗೆ ಉಕ್ಕಿಸುವ ಹನಿಗಳನ್ನು ವಾಚಿಸಿ ವಿಡಿಯೋ ಮಾಡಿ ಪ್ರತಿಭೆಗಳ ಅಡ್ಡಾಕ್ಕೆ ವಾಟ್ಸಾಪ್ ಮಾಡಬೇಕು.

 2. ನೀವು ವಾಚಿಸುವ ಒಂದು ಹನಿಗವನವು 4 ರಿಂದ 8 ಸಾಲುಗಳ ಒಳಗೆ ಇರಬೇಕು.

 3. ಒಬ್ಬರು ಅಂತಹ ನಾಲ್ಕು ಹನಿಗಳನ್ನು ವಾಚಿಸಿ ಕಳಿಸಬಹುದು.

 4. ನಿಮ್ಮ ಹನಿಗಳು, ಹಾಸ್ಯ ಹನಿಗವನದ ಎಲ್ಲಾ ಗುಣ ಲಕ್ಷಣಗಳನ್ನು ಒಳಗೊಂಡಿರಬೇಕು. ಹಾಸ್ಯವನ್ನು ಸಮರ್ಥವಾಗಿ ಪ್ರತಿನಿಧಿಸಿ ಎದುರಿಗೆ ಇರುವವರ ಮುಖದಲ್ಲಿ ಮಂದಹಾಸ ಮೂಡಿಸುವಂತೆ ಇರಬೇಕು.

 5. ಪ್ರತಿ ಹನಿಯೂ ಕಾಮಿಡಿ ಪಂಚ್ ಗಳಿಂದ ಕೂಡಿರಬೇಕು. ನಿಮ್ಮ ಹಾಸ್ಯ ಹನಿಯೂ ಸಮರ್ಥವಾಗಿ ನಗೆಯನ್ನು ಚಿಮ್ಮಿಸುವಂತೆ ಇರಬೇಕು.

 6. ಸ್ಪರ್ಧೆಗೆ ಯಾವುದೇ ವಿಷಯ ಇಲ್ಲ. ನಿಮ್ಮ ಇಷ್ಟದ, ನಿಮಗೆ ಅನಿಸಿದ, ನಿಮ್ಮ ಹನಿ ಕೇಳಿದರೆ ನಗು ಬರುತ್ತೆ ಎನ್ನುವಂತಹ 4 ಹನಿಗಳನ್ನು ಬರೆದು ವಾಚಿಸಿ ವಿಡಿಯೋ ಕಳಿಸಬೇಕು. ಬರೆಯುವುದು ಸಾಹಿತ್ಯವಾದರೆ ಅದನ್ನು ಅಷ್ಟೇ ಸಮರ್ಥವಾಗಿ ವಾಚಿಸುವುದು ಕಲೆ. ಆದ್ದರಿಂದ ಇಲ್ಲಿ ಹಾಸ್ಯ ಹನಿಯ ಬರಹದೊಂದಿಗೆ ಅದನ್ನು ವಾಚಿಸುವ ಶೈಲಿ ಸ್ಪರ್ಧೆಯ ಫಲಿತಾಂಶದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಉತ್ತಮ ಹಾಸ್ಯ ಹನಿಗಳನ್ನು ಬರೆದು ಅಷ್ಟೇ ಸೊಗಸಾಗಿ ಹಾಸ್ಯಮಯವಾಗಿ ವಾಚಿಸಬೇಕು.

 8. ನೀವು ವಾಚಿಸಿ ಕಳಿಸುವ ವಿಡಿಯೋ ಕಡ್ಡಾಯವಾಗಿ horizontal mode ಅಲ್ಲಿ ಇರಬೇಕು. ಅಂದರೆ ನೀವು ಮಾತಾಡುವಾಗ ಮೊಬೈಲ್ ಅನ್ನು ಅಡ್ಡವಾಗಿ ಇಟ್ಟು ಹಾಸ್ಯ ಹನಿಗಳನ್ನು ವಾಚಿಸಿ ನಮಗೆ ಕಳಿಸಬೇಕು. ನಿಮ್ಮ ವಿಡಿಯೋ ಸಾವಿರಾರು ಜನರು ನೋಡುವುದರಿಂದ ವಿಡಿಯೋ ಕ್ವಾಲಿಟಿ ಚೆನ್ನಾಗಿ ಇರಲಿ. 4 ಹನಿಗಳನ್ನು ಒಮ್ಮೆಗೇ ವಾಚಿಸಿ ವಿಡಿಯೋ ಮಾಡಲು ಆಗದೆ ಇದ್ದರೆ ಒಂದೊಂದಾಗಿ ವಾಚಿಸಿ ನಂತರ ವಿಡಿಯೋ ಎಡಿಟ್ ಮಾಡಿ ನಮಗೆ ಕಳಿಸಬಹುದು. ಹನಿಗಳನ್ನು ವಾಚಿಸುವ ಮೊದಲು ಅಂದರೆ ವಿಡಿಯೋದ ಆರಂಭದಲ್ಲಿ ನಿಮ್ಮ ಬಗ್ಗೆ ಏನಾದರೂ ಹೇಳಿಕೊಳ್ಳಬಹುದು. ಪರಿಚಯ ತಿಳಿಸಬಹುದು. ಆದರೆ ಇದನ್ನು ಸ್ವಲ್ಪ ವಿಭಿನ್ನವಾಗಿ ನಿಮ್ಮದೇ ಸ್ಟೈಲ್ ನಲ್ಲಿ ಹಾಸ್ಯಮಯ ಧಾಟಿಯಲ್ಲಿ ಹೇಳಿದರೆ ತುಂಬಾ ನವಿರಾಗಿ ಇರುತ್ತೆಜೊತೆಗೆ ನೀವು ವಾಚಿಸುವ ಹನಿಗವನದ ಬಗ್ಗೆ ಏನಾದರೂ ತಮಾಷೆಯಾಗಿ ಅಭಿಪ್ರಾಯವನ್ನು ಹಂಚಿಕೊಳ್ಳಬಹುದು

  ಸ್ಪರ್ಧೆಗೆ ಇರುವ ಬಹುಮಾನ

  ಹಾಸ್ಯ ಹನಿಗಳ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ವಿಜೇತ ಹನಿಗಳಿಗೆ ಆಕರ್ಷಕ 1500 ರೂಪಾಯಿ ನಗದು ಬಹುಮಾನ. ಎರಡನೆಯ ಸ್ಥಾನ ಪಡೆಯುವ ಹನಿಗಳಿಗೆ 1200 ನಗದು ಬಹುಮಾನ ಮತ್ತು ಮೂರನೆಯ ಸ್ಥಾನ ಪಡೆಯುವ ಹನಿಗಳಿಗೆ 1000 ರೂಪಾಯಿ ನಗದು ಬಹುಮಾನವಿದೆ. ಇದು ಹಾಸ್ಯ ಹನಿಗಳ ವಿಡಿಯೋ ಸ್ಪರ್ಧೆ ಆದ್ದರಿಂದ 1000ಕ್ಕಿಂತ ಹೆಚ್ಚು ವೀಕ್ಷಣೆ ಪಡೆಯುವ ಪ್ರತಿಯೊಂದು ಹಾಸ್ಯ ಹನಿಗಳಿಗೆ ಮೆಚ್ಚುಗೆ ಬಹುಮಾನವೆಂದು ಒಂದು ಆಕರ್ಷಕ ಬಹುಮಾನ ನೀಡಲಾಗುತ್ತದೆ. ಹೀಗೆ ಸ್ಪರ್ಧೆಗಾಗಿ 100ಕ್ಕಿಂತ ಹೆಚ್ಚು ಬಹುಮಾನಗಳು ಇದ್ದೂ ನಿಮ್ಮನ್ನು ಪ್ರೋತ್ಸಾಹಿಸಿ ಗೌರವಿಸಬೇಕು ಎನ್ನುವುದೇ ಸ್ಪರ್ಧೆಯ ಆಶಯವಾಗಿದೆ.

  ಸ್ಪರ್ಧೆಯಲ್ಲಿ ನೀವು ಭಾಗವಹಿಸುವ ಕೊನೆಯ ದಿನಾಂಕ ಜುಲೈ 30. ಅಷ್ಟರೊಳಗೆ ನೀವು ಹಾಸ್ಯ ಹನಿಗಳನ್ನು ಬರೆದು ವಾಚಿಸಿ ನಮಗೆ ವಾಟ್ಸಾಪ್ ಮೂಲಕ ಕಳಿಸಬಹುದು. ನಿಮ್ಮ ವಿಡಿಯೋಗಳನ್ನು ನಮಗೆ ಕಳಿಸಬೇಕಾದ ವಾಟ್ಸಾಪ್ ಸಂಖ್ಯೆ 7348900821. ಸಂಖ್ಯೆಗೆ ನಿಮ್ಮ ವಿಡಿಯೋಗಳನ್ನು ವಾಟ್ಸಾಪ್ ಮಾತ್ರ ಮಾಡಬಹುದು, ಕರೆ ಮಾಡುವಂತಿಲ್ಲ. ಮೇಲ್ ವಿಳಾಸ pratibhegalaadda@gmail.com

 ನೀವು ಕಳಿಸಿದ ಹಾಸ್ಯ ಹನಿಗಳ ವಿಡಿಯೋವನ್ನು ಪ್ರತಿಭೆಗಳ ಅಡ್ಡಾ YouTube channel ಅಲ್ಲಿ ಅಪಲೋಡ್ ಮಾಡಲಾಗುತ್ತದೆ. ಇಲ್ಲಿ ಬರುವ views ಗಳು ಫಲಿತಾಂಶದ 50% ಅಂಕಗಳನ್ನು ಹೊಂದಿರುತ್ತವೆ. ಸ್ಪರ್ಧೆಯ ಫಲಿತಾಂಶ ಬರುವವರೆಗೆ ನಿಮ್ಮ ವಿಡಿಯೋವನ್ನು ಬೇರೆ ಎಲ್ಲಿಯೂ ಅಪಲೋಡ್ ಮಾಡುವಂತಿಲ್ಲ. ತರಹ ಮಾಡಿದ್ದೇ ಆದರೆ ಅವುಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ನಾವು ಅಪಲೋಡ್ ಮಾಡಿದ ವಿಡಿಯೋದ ಲಿಂಕ್ ಶೇರ್ ಮಾಡಬಹುದು. ನಿಮ್ಮ ಹನಿಗಳು ಹಾಸ್ಯದಿಂದ ಕೂಡಿಲ್ಲ ಎನಿಸಿದರೆ ಅಂತಹ ವಿಡಿಯೋಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ ಮತ್ತು ಅಂತಹ ವಿಡಿಯೋಗಳನ್ನು ಅಪಲೋಡ್ ಮಾಡಲಾಗುವುದಿಲ್ಲ. ಪ್ರತಿಭೆಗಳ ಅಡ್ಡಾ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮವಾಗಿ ಇರುತ್ತದೆ.

 ಈ ಸ್ಪರ್ಧೆಗೆ ಯಾವ ವಿಡಿಯೋಗಳು ಬೇಗ ಬರುತ್ತವೋ ಅವುಗಳನ್ನು ಹಾಗೆ ಕ್ರಮವಾಗಿ ಅಪಲೋಡ್ ಮಾಡಲಾಗುವುದು. ಆದ್ದರಿಂದ ಬೇಗ ಅಪಲೋಡ್ ಮಾಡುವ ವಿಡಿಯೋಗಳಿಗೆ ಹೆಚ್ಚು views ಪಡೆಯಲು ಸಮಯಾವಕಾಶ ಜಾಸ್ತಿ ಇರುತ್ತದೆ. ಆದ್ದರಿಂದ ತಡ ಮಾಡದೇ ಆದಷ್ಟು ಬೇಗ ಹಾಸ್ಯ ಹನಿಗಳನ್ನು ಬರೆದು ವಿಡಿಯೋ ಮಾಡಿ ಕಳಿಸಿ. ಒಂದು ಒಳ್ಳೆಯ ತೆಳು ಹಾಸ್ಯ ನವಿರಾದ ನಿರೂಪಣೆಯೊಂದಿಗೆ ಕೂಡಿರಲಿ. ಈ ಸ್ಪರ್ಧೆಯಲ್ಲಿ ಎಲ್ಲರೂ ಮುಕ್ತವಾಗಿ ಭಾಗವಹಿಸಬಹುದು. ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಬಹುಮಾನ ಪಡೆಯುವ ಅವಕಾಶ ಇದೆ. ಆದ್ದರಿಂದ ಯಾರು ಮಿಸ್ ಮಾಡದೇ ಈ ಸ್ಪರ್ಧೆಯಲ್ಲಿ ಭಾಗವಹಿಸಿ. ನಿಮ್ಮ ಬರಹ, ವಾಚನ, ಹಾಸ್ಯ ಜ್ಞಾನದ ಚಾತುರ್ಯವನ್ನು ತೋರಿಸಿ.


Leave a Reply

Back To Top