ಸಾಂಗತ್ಯ

ಕಾವ್ಯ ಸಂಗಾತಿ

ಸಾಂಗತ್ಯ

ಡಾ. ಡೋ ನಾ ವೆಂಕಟೇಶ

ದಾಂಪತ್ಯ ಜೀವನದ ಕಾವ್ಯ
ನಲವತ್ತೈದು ವರ್ಷದ ಹೊಸ ಬಾಲ್ಯ
ಹೊಸ ಹರ್ಷ
ಹೊಸ ಹೊನಲು
ನನಸಲ್ಲಿ ಕಥನ ಮುಗಿಯುವ
ಹೊತ್ತು
ಬದುಕಿದ್ದ ಕುರುಹು
ಅಳಿಸುವ ಹೊತ್ತು
ಆಸರೆ ತೀರುವ ಹೊತ್ತು

ನನ್ನವಳೆ ನನ್ನ ಹೊನ್ನಾಡನಾಡುವಳೆ
ನಿನ್ನ ಜತೆ ಕಳೆದ ಹರ್ಷದ
ಹೊನಲು ತಿಳಿ ತಿಳಿಯಾಗಿ
ಬಂದು
ಭೋರ್ಗೆರೆವ ಗಂಗೆಯಾಗಿ ಧಭ ಧಭಿಸುವ
ಪ್ರಪಾತದಿಂದ ಮೇಲೆದ್ದು
ಇವಳೆ
ಓ ನನ್ನವಳೆ ❕

ನೆನಪಿಲ್ಲದಿಲ್ಲ ನಿನಗೆ
ನೀ ಬಂದೆ
ನೀ ಕಂಡೆ
ನೀ ಆಕ್ರಮಿಸಿಕೊಂಡೆ

ನೆನಪಿಲ್ಲದಿಲ್ಲ ನಿನಗೆ
ಕಳೆದ ಮೈಲಿಕಲ್ಲುಗಳನ್ನ
ನಡೆದ ಹೂ ಹಾಸುಗಳನ್ನ ಆಘ್ರಾಣಿಸಿದ ಜೀವನದ ಇಂದ್ರಿಯಗಳನ್ನ

ಪ್ರಿಯೇ
ನೆನಪಿಲ್ಲದಿಲ್ಲ ನಿನಗೆ
ನೀ ಬಂದಾಗ ಸುಮ್ಮನೆ
ಬರಲಿಲ್ಲ
ಮಧುರ ಸಿಂಚನ ತಂದೆ
ಹಾಡಿದ ಕಾವ್ಯ ಕವಿತೆಯಾಗಿ
ಹೂಡಿದ ಬದುಕು ಬಂಗಾರವಾಗಿ ಬರೇ
ಮುತ್ತು!ಸಿಂಗಾರ!

11 thoughts on “ಸಾಂಗತ್ಯ

  1. ಮಧುರ ಸಿಂಚನ ತಂದ ನಿಮ್ಮ ಪ್ರಿಯೆಗೆ ಸಾಷ್ಟಾಂಗ ನಮಸ್ಕಾರ.. ಕವಿತೆಯೂ ಮುದುಡಿದ ಮನಸ್ಸಿಗೆ ತಂಪೆರೆಯಿತು.

    1. ಥ್ಯಾಂಕ್ಸ್ ಸೂರ್ಯ
      ಪ್ರೋತ್ಸಾಹಕ್ಕಾಗಿ ಆಭಾರಿ

  2. ಅತಿ ಸುಂದರವಾಗಿದೆ ಈ ಕವಿತೆ. ನಿಮ್ಮಿಬ್ಬರ ಬದುಕು ಬಂಗಾರವಾಗಿರಲಿ ಎಂದು ಆಶಿಸುತ್ತೇವೆ ❤️

  3. ತುಂಬಾ ಚೆನ್ನಾಗಿ ಬರೆದಿದ್ದೀರಿ ಡಾಕ್ಟರ್
    ಪತ್ನಿ ಯ ಒಲವಿಗೆ ಕವಿ ಯಾಗಿ ದ್ದೀರಿ.
    ನಿಮ್ಮ ಮದುವೆಯ ದಿನದ ಹಾರ್ದಿಕ ಶುಭಾಶಯಗಳು
    ಯಾವಾಗಲೂ ಸಂತೋಷ ವಾಗಿರಿ.

Leave a Reply

Back To Top