ಕತ್ತಲ್ ರಾತ್ರಿ

ಕಥಾ ಸಂಗಾತಿ

ಕತ್ತಲ್ ರಾತ್ರಿ

ರಂಗಸ್ವಾಮಿ ಮಾರ್ಲಬಂಡಿ

“ಅವ ನಮ್ಮನ್ನು ಬಿಟ್ಟಿದ್ದಾನೆ ಇವಾಗ ಏನಿದ್ದರೂ ನಿನ್ ಕಥೆ” ಎಂದು ಬಸಂತಿ ವಾಟ್ಸ್ಯಪ್ ನಲ್ಲಿ ಹೇಳಿದರು ಸಾಕಿನ್ನು ನಾನು ಅವನನ್ನು ನೋಡೊದು ಬಿಡಬೇಕು ಎಂದು ನಿರ್ಧಾರ ಮಾಡಿಕೊಂಡು ಇವತ್ತು ಬಾಸ್ ಕರೆದ ಸಭೆಯಲ್ಲಿ ಅವನ ಮುಖವಾಗಿ ಕೂಡದೆ ಅವನ ಮುಖಾಮುಖಿಯನ್ನು ತಪ್ಪಿಸಿಕೊಂಡಿದ್ದೆ, ಅವನ ನೋಟಕ್ಕೆ ದಾಸವಾದ ನನ್ನ ಕಣ್ಣು ಮಾತ್ರ ಅವನನ್ನು ಮತ್ತೆ ಮತ್ತೆ ನೋಡುತ್ತಿದ್ದಾಗ ಅವನ ಕಣ್ಣು ಮಾತ್ರ ಬಸಂತಿ ಮತ್ತು ಸಂಜನಾ ನವರ ಕಡೆ ನೆಟ್ಟಿತ್ತು, ಮತ್ತೆ ಮತ್ತೆ ನೋಡಿದಾಗ ಅವನ ದೃಷ್ಟಿ  ಅವರ ಪಾದದಡಿ ನೆಟ್ಟಿರುವುದು ಸ್ಪಷ್ಟವಾಗಿ ಗೋಚರವಾಯಿತು…! ಈ ಹಿಂದೆ ಅವನು ಸಂಜನಾ ಕಾಲನ್ನು ವರ್ಣಿಸಿ ವಾಟ್ಸ್ಯಪ್ ನಲ್ಲಿ ಸ್ಟೇಟಸ್  ನೆನಪಾಗಿ ಇವತ್ತು ರಾತ್ರಿ ಅವನ ಸ್ಟೇಟಸ್ ನೋಡಲೇಬಾರದು ಎಂದು ನಿರ್ಧರಿಸಿದೆ.

    ಆಕೆ ಸಂಜನಾ ಇವತ್ತು ಮಾತ್ರ ತಾನು ನಾನು ನಮ್ ಆಫೀಸ್ ನಲ್ಲೆ ಕ್ಲಾಸ್ ಒನ್ ಫಿಗರ್ ಎಂದು ಬಿಂಬುಸುವಂತೆ ಅವಳ ಉಡುಗೆ ಇತ್ತು ಹಾಗಂತ ನೀವೇನು ಸಿನಿಮಾ ರೀತಿ ಮೊನಕಾಲು ಮೇಲೆ ಹಾಕುವ ಸ್ಕರ್ಟ್ ರೀತಿಯ ಬಟ್ಟೆಗಳ ಬಗ್ಗೆ ಊಹಿಸಬೇಡಿ ನಮ್ಮಲ್ಲಿ ಫೈಜಾಮ್ ಡ್ರಸ್ ಬಿಟ್ಟು ಬೇರೆಯದು ಹಾಕಲ್ಲ ನಾವು ಕಚೇರಿಗೆ ಸೀರೆಯಲ್ಲಿ ಬಂದೀವಿ ಅಂದರೆ ಅವತ್ತು ನಮ್ಮ ಮನೆಯಲ್ಲಿ ಏನಾದರೂ ಕಾರ್ಯಕ್ರಮ ಇರಬೇಕು ಅಥವಾ ನಮ್ಮ ಕಚೇರ್ಯಾಗ ಏನನ ಕಾರ್ಯಕ್ರಮ ಇರಬೇಕು. ಆದು ಬಿಟ್ಟು ಬೇರೆ ಬಟ್ಟೆ ಹಾಕೋಕೆ ಅವಕಾಶ ಇಲ್ಲ ಏಕೆಂದರೆ ನಮ್ಮ ಕಚೇರಿ ಇರೋದು ಎರಡನೇ ದರ್ಜೆ ನಗರದಲ್ಲಿ…! ಇಲ್ಲಿ ಸಂಪ್ರದಾಯವನ್ನು ಅಷ್ಟು ತಿರಸ್ಕಾರ ಮಾಡಿರಲ್ಲ ಅದೇ ರೀತಿ ನೂತನತೆಯನ್ನು ಕೂಡ ಸ್ವಲ್ಪ ಸ್ವಲ್ಪ ಒಪ್ಪಿಕೊಳ್ಳೊಕೆ ಶುರುಮಾಡಿರ್ ತೇವೆ… ಒಂದುವೇಳೆ ನಾವು ಸಂಪೂರ್ಣ ಆಧುನಿಕತೆಯನ್ನ ಒಪ್ಪಿಕೊಂಡ್ರೆ ನಮ್ಮೂರಾಗಿನ ಮಂದಿ ನಮ್ನ ಬಜಾರಿ ಅಂತ ಕರ್ಯಾಕ ಕೂಡ ಹಿಂದೆ ಮುಂದೆ ಕೂಡ ನೋಡಲ್ಲ….!

ನಿಜ ನಮ್ಮೂರಾಗ ಎಲ್ಲರೂ ನಮ್ಮ ಹುಡುಗ ರಾಮಸ್ವಾಮಿ ಇದ್ದಂಗ ಇಲ್ಲ “ಉಣ್ಣೊ ಆಹಾರ ಉಡೊ ಬಟ್ಟೆ ಅವರಿಷ್ಟ ಅದನ್ನು ಟೀಕೆ ಮಾಡೊ ಅಧಿಕಾರ ಯಾರ್ಗೂ ಇಲ್ಲ” ಅಂತ ಆವಾಗ ಆವಾಗ ನಮ್ಮ ಗುಂಪಿನ್ಯಾಗ ಹಾಕ್ತೀರ್ ತಾನೆ ಅದು ನಿಜ ಅಂತ ಅನ್ಸತಿರುತ್ತೆ ಆದರೆ ಇವತ್ತು ಆಕೆ ಸಂಜನಾ ಹಾಕ್ಕೊಂಡು ಬಂದ ಡ್ರೇಸ್ ನೋಡಿದಾಗ ನನಗೆ ನಮ್ ಆಫಿಸ್ಗೂ ಒಂದು ಡ್ರೆಸ್ ಕೋಡ್ ಇದ್ರೆ ಬೇಸಿರುತ್ತೆ ಅಂತ ಅನ್ಸತಿದೆ ಆದರೆ ಅವತ್ತು ಆ ಗುರುಪಾದಪ್ಪ ನ ಮಗಳು ನನ್ ಗಿಂತ ಚೆಂದ ಕಾಣ್ಸಬೇಕು ಅಂತ ಪ್ರಯತ್ನ ಮಾಡುತ್ತಿದ್ದಾಗ ನಾನು ಸೀರೆ ಉಟ್ಕಂಡು ಅವಳ್ನ ಒವರ್ ಟೆಕ್ ಮಾಡಿದ್ದು ನೆನಪಾಗಿ ಮನಸು ಅಪರಾಧ ಭಾವನೆಯಲ್ಲಿ ತೇಲಾಡುತ್ತಿದ್ದಾಗ ನಮ್ ಬಾಸ್ ನಮ್ ಟೀಂ ಕೆಲಸದ ಬಗ್ಗೆ ವಿಚಾರಿಸಲು ಎಬ್ಬಸಿ ನಿಲ್ಲಿಸಿದರು.

***

    “ಉಂಬೋದು ಬಿಟ್ರೆ ತಳ್ಳಗ ಆಗಲ್ಲ  ಬದುಕು ಮಾಡೋದು ಕಲಿ ನಾಳೆ ಗಂಡ ಬಂದಾಗ ಏನು ಮಾಡಿ ಇಡ್ತಿ ” ಎಂದು ನಮ್ಮಮ್ಮ ವದ್ರು ತಿದ್ರುಕೂಡ ನಾನು ತಲೆ ಕೆಡಿಸಿಕೊಳ್ಳದೆ ಮುಂದೆ ನನ್ನ ನಾಲ್ಕು ಗೋಡೆಯ ಅರಮನೆಯಲ್ಲಿ ಬಾರ್ಲ ಬಿದ್ದೆ ಏಕೆಂದರೆ ಅಲ್ಲೆ ನನ್ನ ಊಹೆಗೆ ಪಾರವೇ ಇರಲ್ಲ ನನ್ನ ಜೊತೆಗಾರನಾದ ಮೆತ್ತನೆಯ ಗೊಂಬೆಯನ್ನು ಕೈಗೆತ್ತಿಕೊಂಡು ಇವತ್ತು ನಿನ್ನ ಹೆಸರು ರಾಮಾಸ್ವಾಮಿ ಎಂದೆ ಈ ಮೊದ್ಲು ಗೋವಿಂದ ರಾಮಣ್ಣ ಕೂಡ ಅದೇ ಅಗಿತ್ತು…!

ರಾಮು  ಒಂದು ಸಾರಿ ಪ್ರಪೋಸ್ ಮಾಡೊ ಸಾಕು ಎಂದು ಮನಸ್ಸಿಂದ ನನ್ನ ಮಾತು ಹೊರಬಂದಾಗ ನನ್ನ ಕಣ್ಣಿಂದ ನೀರು ನನಗೆ ಗೊತ್ತಿಲ್ಲದಂತೆ ಹೊರಬಂದವು..! ಈ ಸಾರಿ ಮರ್ರೆಮ್ಮ ಅಕ್ಕ ಕೂಡ ಜೊತೆಗಿಲ್ಲ ಏಕೆಂದರೆ ರಾಮನ ಬಗೆಗಿನ ನನ್ನ ಪ್ರೀತಿಗೆ ಬೆಂಬಲ ನೀಡೊ ಒಬ್ಬೆ ಒಬ್ಬ ವ್ಯಕ್ತಿ ಅವಳು…!

ಈ ಹಿಂದೆ  ನಮ್ಮಮ್ಮನ ಜೊತೆ ಮದುವೆ ವಿಷಯ ಮಾತಾನಾಡೋಕೆ ಬಂದಾಗ  ನಮ್ ರೂಮ್ ನ್ಯಾಗ ಇದ್ದಾಗ ಅವ ನನ್ ಜೊತೆ ನಡೆಸಿದ ವಾಟ್ಸ್ಯಪ್ ಸಂದೇಶ ಅವಳಿಗೆ ತೋರಿಸಿದ್ದೆ ಅವ ನನ್ಗೆ ” ಗಂಡು ಹುಡುಕಿನಿ ನಿಮ್ ಫೋಟೊ ಕಳ್ಸಿ ಮೇಡಂ ” ಎಂದಾಗ ಮೈಉರ್ದಿದ್ದು ಅವಳಿಗೆ ಎಲ್ಲ ತಿಳಿಸಿ ಹೇಳಿದ್ದೆ.

  ಅಂದು ಆಫೀಸ್ ನಲ್ಲಿ ಅಕ್ಕ ಅವ ಚೆಂದ ಕಾಣ್ತ ಇದಾನೆ ನೋಡು ಎಂದು ಹೇಳಿದಾಗ ಅವಳು “ಏನಮ್ಮ ನಿನ್ ಕಣ್ ಬಿತ್ತ ಮತ್ತೆ” ಎಂದಳು

ಆ ರೀತಿ ಏನು ಇಲ್ಲ ಎಂದರೆ

“ಇದ್ರೆ ಹೇಳು ನಾನೇನು ಯಾರ್ಗು ಹೇಳಲ್ಲ” ಎಂದಿದ್ದಳು

ಇಲ್ಲ ಎಂದು ಹೇಳಿದ್ದರೂ ಅವಳಿಗೆ ಅವತ್ತೆ ಅನುಮಾನ ಶುರುವಾಗಿತ್ತು

ಮತ್ತೆ ಅವಳು ರಾತ್ರಿ ನಮ್ ಮನೆಯಲ್ಲೆ ಇದ್ದಾಗ ಅವಳು ನನ್ ಆಕರ್ಷಣೆಗೆ ಪ್ರೀತಿಯ ಹೆಸರು ಇಟ್ಟಿದ್ದಳು.

  ಅವ ಇತ್ತಿಚಿಗೆ ಬದ್ಲಾಗ್ಯಾನ ನೋಡು ಸಂಜನಾ ಉದ್ದೇಶಿಸಿ ಸ್ಟೇಟಸ್ ಇಡುತ್ತಿಲ್ಲ ಎಂದಾಗ ಅವಳು

 “ಬದಲಾಗುತ್ತಾರೆ ರೋಜಾ ಎಷ್ಟು ದಿವಸ ಅಂತ ಬಿಟ್ಟೋರ್ನ ನೆನಪಿಸಿಕೊಂಡಿರ್ತಾರೆ.”

ಆಕೆ ವಾಪಸು ಬಂದಿದಳಲ್ಲ ಅವ್ನಸಂಬಂಧೆ..! ನಾನಂದೆ

ಆಕೆ ಬಂದ್ರೆ ಅವನ್ಗೂ ಮನಸು ಇರಲ್ಲೇನು, ಅವ ಎಷ್ಟು ಇಷ್ಟ ಪಟ್ಟಿದ್ದ ಪ್ರತಿದಿನ ಅವಳ ಸಂಬಂಧ ಸ್ಟೇಟಸ್ ಹಾಕ್ತಿದ್ದ ವಾಟ್ಸ್ಯಾಪ್ ನವ ಇವ್ನ ಸಂಬಂಧ ಕಂಡ್ಹಿದನೇನೊ ಅನ್ಸಿತ್ತು…

ಇವಾಗೇನಾಯ್ತು ವಾಪಸು ಹೋದ್ರ ಆಯ್ತು ಅಕ್ಕ

ಹೋಗಾಕ ಕರ್ಕಬೇಕಲ್ಲ ನೋಡಿದ ನೋಟನ ಸುಳ್ಳು ಮಾಡೋರು ಜಗ್ಗಿ ಮಂದಿ ಇದಾರೆ ಇಲ್ಲಿ ರೋಜಾ.

ಹಂಗಲ್ಲ ಅಕ ಅವ ಮೆಸಜ್ ಮಾಡಿದ್ರೆ ತಾನೆ ಗೊತ್ತಾಗೋದು

ಮೆಸಜ್ ಮಾಡಿದಾಗ ಅವಳು ಎಷ್ಟು ಕಾಡಿಸಿದ್ದು ನೆನಪಿಲ್ವಾ !

ಅವ ಕೂಡ ಇಬ್ರು ಮೂವರ್ನ ಪ್ರೀತಿ ಮಾಡೋದು ತಪ್ಪಲ್ಲ ಏನು ಹಂಗಾದರೆ

ಯಾರು ಮಾಡಲ್ಲ ಇಲ್ಲಿ…? ನೀನು ಒಬ್ರೆ ನೇ ಪ್ರೀತಿ ಮಾಡ್ತೀಯ ನಿನಗೊಂದು ವಿಷಯ ಗೊತ್ತಿರ್ಲಿ ಹೊರಗ ಬೀಳದೆ ಇದ್ದರೆ ಎಲ್ರು ಶ್ರೀ ರಾಮಚಂದ್ರ ನೇ…! ಆಮೇಲೆ ಪ್ರೀತಿ ಮಾಡ್ಯಾನ ಅಂತ ನೀವೇ ಊಹಿಸಿಕೊಂಡಿರಿ ಅವ್ನ ಕೇಳಿರಾ…?

ಇಲ್ಲ ಮಾಡಿದ್ರು ಮುಚ್ಚು ಮರೆ ಇರ್ತಾದ ಅಲ್ಲ

ಮುಚ್ಚು ಮರೆ ಎಲ್ಲಿ ಬಂತು ರೋಜಾ ಅವನೇನ ಎಲ್ಲರತ್ರ ಡಂಗೂರ ಸಾರಿಕೊಂಡು ಹೊಂಟಾನ..! ನೀವೇ ಎಲ್ಲಾವಕೆ ನನ್ಗೆ ಮೆಸೆಜ್ ಮಾಡಿದ ನನ್ಗೆ ಮೆಸೆಜ್ ಮಾಡ್ಯಾನ್ ಅಂತ ಡಂಗೂರ ಸಾರಕತ್ತೀರಾ, “ನೋಡು ರೋಜಾ ಒಂದು ಮಾತು ಹೇಳ ಈ ಸಮಾಜದಾಗ ಸೂಳೆ ಕೂಡ ಪತಿವ್ರತೆಯಾಗಿರಬೇಕು”.

ನಾನು ಸಾರಿಲ್ಲವ್ವ..!

ನೀನ್ಯಾಕ ಸಾರಿಲ್ಲ, ಬಸಂತಿನ ಕರ್ ಸ್ಲಾ? ಹೋಗ್ಲಿಬಿಡು ಇವೆಲ್ಲ ಯಾಕೆ…!

ನಿನ್ದೇನು ಹೇಳು…!

ಏನಿಲ್ಲ ಅಕ ಅವನಿಂದ ನನ್ ಬಗ್ಗೆನೂ ಒಂದು ಕವಿತೆ ಬರ್ಸೆಕೊಂಡು ಒದ್ಸಿಕೊಳ್ಳಬೇಕು ಅಂತ ಆಸೆ…!

ಹಾ ಗೊತ್ತು ಬಿಡು ಅವತ್ತೆ ಗೊತ್ತಾಯಿತು, ಪ್ರಯತ್ನ ಮಾಡು ನೀನ್ಗೂ ಕೂಡ ಬಂದ್ರೆ ಬರ್ಲಿ ಒಂದು ಕತ್ಲ್ ರಾತ್ರಿ …!

ಪ್ರಯತ್ನ ಅಂದರೆ…!

ಪ್ರಯತ್ನ ಅಂದರೆ ಪ್ರಯತ್ನ ಮಾಡು ನೋಡೊದು ಮೆಸಜ್ ಮಾಡೋದು ಇರ್ತಾವಲ್ಲ ಅವಲ್ಲ ಹೇಳಬೇಕೇನು…!

ಅಲ್ಲ ಅಕ್ಕ ಅವ ನನ್ ಜೊತೆ ಸಂಪರ್ಕದಲ್ಲಿ ಇದ್ದು ಇಲ್ಲಿಗೆ ಮೂರ್ ನಾಲ್ಕ ವರ್ಷ ಆಯ್ತು  ಒಂದಿನಾನು ಆ ತರ ಭಾವನೆ ಮೂಡಿಲ್ಲ ಅವನ್ಗೆ…!

ಮೂಡಿಲ್ಲ ಅಂದ್ರೆ ಮೂಡ್ಸೀಗ

ಅಂದ್ರೆ ಅರ್ಥ ಆಗಲಿಲ್ಲ

ಅಂದ್ರೆ ನೀನು ಕೂಡ ಆ ಸಂಜನಾ ಮತ್ತು ಬಸಂತಿ ಮಾಡಿದಂಗ ಮಾಡು ಮೀಟಿಂಗ್ ನಲ್ಲಿ ನೋಡು ಐ ಕಂಟಾಕ್ಟ್ ಕುಂದ್ರಸು ಇಷ್ಟ ಆದ್ರೆ ಅವಾಗ್ಲೆ ಹಳ್ಳಕ್ಕೆ ಬರುತ್ತೆ ಕುರಿ ನೀರು ಕುಡಿಯಾಕ ಎಂದಾಗ ಇಬ್ಬರು ನಗಲು ಶುರುಮಾಡಿದೆವು…

ಆ ಮರ್ದಿನ ಮೀಟಿಂಗ್ ನಲ್ಲೆ ನಾನು ಅವನ್ ಕಣ್ ಲ್ಲಿ ನನ್ ಕಣ್ ಪ್ರತಿಬಿಂಬ ಕೂಡ್ಸಿದೆ.

ಮತ್ತೊಮ್ಮೆ ಬಸಂತಿ ಸಿಕ್ಕಾಗ ಕೂಡ ಅವನು ನನಗೆ ಮೆಸಜ್ ಮಾಡ್ತಾನೆ ಅಂದಿದ್ದೆ ಅದ್ಕ ಅವಳು ಇಷ್ಟವಿಲ್ಲದೆ ಸಮ್ಮತಿ ನೀಡಿ ಆಮೇಲೆ ಅವನೇ ಮಾಡಿದ ಸಂದೇಶಗಳನ್ನು ತಂದು ಮೆಸಜ್ ಮಾಡಿದ್ರೆ ಏನಾಯ್ತೆಂಬ ಪ್ರಶ್ನೆಯನ್ನು ಗರ್ವದಿಂದ ತೋರಿಸಿದಾಗ ನಾನು ಏನು ಉತ್ತರ ಹೇಳಬೇಕೊ ಗೊತ್ತಾಗದೆ ಸುಮ್ಮನೆ ಹಿಂತಿರುಗಿ ಬಂದಿದ್ದೆ ಆದರೆ ಅವಳು ಪ್ರಯತ್ನ ಮಾಡು ನಾನು ಬಿಟ್ಟಿದ್ದೇನೆ ಅಂದಾಗ ನಾನು ಸ್ನೇಹಿತೆಯಾದರೂ ಅವಳ ಜೊತೆ ಮಾತನಾಡಲು ಬಿಡಬೇಕು ಎಂದು ಮನಸು ಕಾಡಿಸಿತು….

ಆಮೇಲೆ ಸಂಜನಾ ಬೇರೆ ಬ್ರಾಂಚ್ ಗೆ ವರ್ಗಾವಣೆ ಆಗಿ ಹೋಗಿದ್ದು ಬಸಂತಿ ಕೂಡ ಅವನನ್ನು ಮೈಯ್ಗೆ ಹಚ್ಚಿಕೊಳ್ಳದೆ ಇರೋದು ರಾಮಸ್ವಾಮಿಗೆ ನುಂಗ ಲಾರದ ತುತ್ತು ಆಗಿತ್ತು ಆದರೆ ಅವನ್ಗೆ ನನ್ ದಾರಿಯಲ್ಲಿ ಯಾರು ಇಲ್ಲದೆ ಇರೋದು ಕಾಣ್ ಲೆ ಇಲ್ಲ ಅದಕ್ಕೆ ಅವ ಹಿಂದೆ ಮುಂದೆ ನೋಡದೆ ಮದುವೆ ಮಾಡಿಕೊಂಡಬಿಟ್ಟ.

    ಒಂದೆರಡು ಸಾರಿ ಅವ ನೆನಪಾಗಿ ಮರೆಮ್ಮ ಅಕ್ಕನ ಹತ್ರ ವಿಚಾರಿಸದಾಗ ಮಾತ್ರ ಅವಳು “ಮದ್ವೆ ಆಗಿದೆ ಚೆನ್ನಾಗಿರ್ಲಿಬಿಡು” ಎಂದಿದ್ದಳು ಆದರೆ ನನ್ನ ಮನಸಿನ ಮೂಲೆಯೆಲ್ಲೊ ಒಂದು ಕಡೆ ಹೆಂಣ್ತಿ ಹಡಿಯಾಕೆ ಹೋಗಲ್ಲೇನು ಅನ್ಸಿದ್ದು ಮಾತ್ರ ಸುಳ್ಳಲ್ಲ.

ಹಲವಾರು ಸೂರ್ಯನಿಲ್ಲದ ರಾತ್ರಿಗಳು ಕಳೆದುಹೋದರು ಆ ಕತ್ತಲ್ ರಾತ್ರಿ ಬರಲೇ ಇಲ್ಲ.ನಾನು ಹಿರೆ ಮನ್ಷ್ಯಳಾಗಿ ಸುಮಾರು ವರ್ಷವಾಗಿತ್ತು ಆಗಿನ್ನ ನಾನು ಹತ್ನೆ ಕ್ಲಾಸ್ ನ್ಯಾಗ ಇದ್ದೆ , ಮೊಹರಂ ಹಬ್ಬಕ್ಕೆ ಅಂತ ಕುಂಟನಾಳ್ಗೆ ಹೋಗಿದ್ದೆ ಅಲ್ಲಿ ನಮ್ ಅಕ್ಕನ ಕೊಟ್ಟಿದವರ ಮನ್ಯಾಗ ಜಂಗ್ಲುದನ ಅಲ್ಲಿ ಎಲ್ಲರೂ ಅವರ ಅವರ ಬದುಕ್ ನ್ಯಾಗ ಬ್ಯುಸಿ, ಕಲ್ತು ಕುಟುಂಬ ನಮ್ ಅಕ್ಕ ಮಾತ್ರ ನನ್ ಮಾತಡ್ಸೋದು.

ನಮ್ ಅಮ್ಮನ ಅಣ್ಣನ ಮಗ ಅಂತ ನಮಮ್ಮ ಬೊಗ್ಸಿ ಬೊಗ್ಸಿ ಮಾಡಿದ್ರೆ ನಮ್ನ ಮಾತಡ್ಸೋರು ಇಲ್ಲ ಅಂತ ಬೇಜಾರ್ ನ್ಯಾಗ ಇದ್ರೆ ನಮ್ಮಮನ ಕಕ್ಕನ ಮಗ ಒಬ್ಬ ನನ್ಮೇಲೆ ವಿಶೇಷ ಒಲವು ತೋರ್ಸತಿದ್ದ , ಆಮೇಲೆ ಇನ್ನೊಂದು ವರ್ಷ ಅವರು ಬ್ಯಾಟೆ ಮಾಡದಾಗ ಆಲಾಯ ಕುಣಿಯೋ ಕತ್ತಲ್ ರಾತ್ರಿಗೆ ಅವ್ನ ಜೊತೆ ಅಲಾಯ ನೋಡಲು ಹೊಗಿದ್ದಾಗ ಅವನ ಅಲಾಯ ಕುಣಿತಕ್ಕೆ ನನ್ನ ಚಳಿ ಬಿಟ್ಟ್ಹೋಗಿತ್ತು.

 ಆ ರಾತ್ರಿ ನೆನಪಾಗಿ ಎಷ್ಟೊ ರಾತ್ರಿಗಳು ಕತ್ತಲಮಯವಾದರೂ ನನ್ನ ಬಾಳಲ್ಲಿ ಮತ್ತೊಂದು ಕತ್ತಲ್ ರಾತ್ರಿ ಬರಲೇ ಇಲ್ಲ ಕಾಲಾನುಗತಿಯಲ್ಲಿ ನಾನು ಈ ಆಫೀಸ್ ಕೆಲ್ಸಕ್ಕೆ ಸೇರಿಕೊಂಡು ಸಿಂನೂರ್ ಸೇರ್ಕೊಂಡು ಇಲ್ಲೆ ಮನೆಮಾಡ್ಕಂಡೆ.

     ಭೂಮಿ ನನ್ ಕ್ಕಿಂತ ಸ್ವಲ್ಪ ಎತ್ರ ನೋಡಾಕ ಮಾತ್ರ ನನ್ ಕಿತ ಸ್ವಲ್ಪ ಕೆಂಪ್ಗ ಆಕೆ ಸಿಟ್ಯಾಗ ಇರೋ ಹೆಂಗಸು ಸ್ವಲ್ಪ ಹೊಗಲು ಕೂಡ ಮಾಡ್ತಾಳೆ ಅದಕ್ಕೆ ಅವ ರಾಮಸ್ವಾಮಿ ಅವಳಿಂದೆ ಬಿದ್ದಿರೋದು ಅಂತ ಆಫೀಸ್ ತುಂಬಾ ಪ್ರಚಾರ ಆಗಿತ್ತು, ಅದ್ಕೆ ಬಸಂತಿ ಸಂಜನಾ ಕೂಡ ಅವ್ನ ಬಿಟ್ಟು ಹೋಗಿದ್ದು ಆದರೆ ಆಕೆ ಕೂಡ ಈಗ ಅವ್ನ ಬಿಟ್ಟ್ಹೋಗಾಳ ಅಂತ ಪ್ರಚಾರ ನಡೆದಿತ್ತು ಮತ್ತೆ ಅವ್ನ ಹೆಂಡತಿ ಕೂಡ ಧಿಮ್ನಸೇಳು ಅಂತ ಸುದ್ದಿ ಕೂಡ ಹೊಂಟಿತ್ತು ಇವಾಗ ಖಾಲಿ ಆಗ್ತಾನೆ ಎಂಬ ಖುಷಿಯಲ್ಲಿದ್ದಾಗ ಮತ್ತೆ ನಮ್ ಬಾಸ್ ಮೀಟಿಂಗ್ ಕರೆದ ಅವತ್ತು ನಾನು ಅರ್ಧ ತಾಸಿನ ಸಭ್ಯಾಗ ಸುಮಾರು ಹತ್ತು ಸಾರಿ ನನ್ನ ಕಣ್ಣು ಕೂಡಿಸಿದ್ದೆ ಅವತ್ತು ಮೆಸಜ್ ಮಾಡ್ತನೇನೊ ಅಂತ ಸುಮಾರು ರಾತ್ರಿ ಎಲ್ಡು ಘಂಟೆವರಗೆ ಕಾಯ್ದೆ ಆದರೆ ಅವನಿಂದ ಮೆಸಜು ಬರಲಿಲ್ಲ ಫೋನ ಕೂಡ ರಿಂಗ್ ಆಗಲಿಲ್ಲ…

     ಆಮೇಲೆ ಆಮೇಲೆ ಆವ ಆಫೀಸ್ನಲ್ಲಿ ಭೇಟಿಯಾದರೂ ಅವ್ನ ನೋಟದಲ್ಲಿ ಇಲ್ಲದ ಪ್ರೀತಿಯನ್ನು ಹುಡುಕಲು ಶುರು ಮಾಡಿ ಕಂಡುಕೊಳ್ಳಲು ಆಗದೆ ಸೋತು ಸುಣ್ಣವಾದೆ.

ನಮ್ ಟೀಂ ಇರೊ ಚೆಂಬರ್ ಗೆ ಕೂಡ ಬಂದಿದ್ದ ಅವತ್ತಾದರೆ ನನ್ ಸಲುವಾಗೀಯೇ ಬಂದ್ಹಾಗೆ ಅನ್ಸಿತ್ತು ಅವ ನನ್ ಸಲುವಾಗಿ ಬಂದಿಲ್ಲಂದ್ರು ಪರ್ವಾಗಿಲ್ಲ ಇನ್ನೊಮ್ಮೆ ಮೀಟಿಂಗ್ ಆದ್ರೂ ಕರ್ ದ್ರೆ ಮತ್ತೊಮ್ಮೆ ನನ್ನ ಬಯಕೆ ತೋರ್ಸಬಹುದು ಎಂದುಕೊಳ್ಳುತ್ತಾ ನಾನಾದ್ರೂ ಅವನನ್ನು ನೋಡಬೇಕೆಂದೆನಕೊಂಡು ಮತ್ತೆ ಅವನಿದ್ದ ಚೆಂಬರ್ ಗೆ ಹೋದೆ ಆದರೆ ಅವನು ಕಾಣುವ ಮುಂಚೆನೆ ಸಂಜನಾ ತಾನು ವಾಪಸು ಈ ಬ್ರಾಂಚ್ ಗೆ ಬಂದಿರುವುದಾಗಿ ಹೇಳಿದಳು.

ಮರೆಮ್ಮ ಅಕ್ಕ ಊಟ ಮಾಡಿಸುವ ಸಮಯದಲ್ಲಿ ನಾನು ಬಸಂತಿ ಸಂಜನಾ ಅನ್ನಮ್ಮ ಎಲ್ರೂ ಸೇರಿದ್ದೆವು ಮರೆಮ್ಮ ಅಕ್ಕ ಅಷ್ಟೆ ‍ಹೆಸ್ರು ಇಟ್ಟು ಮಾತಾನಾಡಿಸಿದರೆ ಮಾತ್ರ ಹಾ, ಹೂ ಅಂತಿದ್ದೆವು ಕಡೆಗೆ ಅಕ್ಕನೇ ಏನಾದ್ರೂ ಮಾತಾಡ್ರಿ ಅಂದರೂ ನಾವು ನಮ್ಮ ಪರಾಣಿ ನಾವು ಬಿಡಲಿಲ್ಲ..! ಸಂಜನಾ ಬಸಂತಿ ಮಾತ್ರ ಗುನು ಗುನು ಮಾತಾನಾಡುತ್ತಿದ್ರು, ಎಲ್ಲರೂ ಊಟಮಾಡಿ ಆದಷ್ಟು ಬೇಗ ಎದ್ದು ಬಂದಿದ್ದೆವು ಇಂದು ಮತ್ತೆ ಮೀಟಿಂಗ್ ಇದೆ ಅಂತ ನಮ್ ರೂಮ್ ಗೆ ಸೇರಿದ್ದೆವು ಎಲ್ಲರು ನಾನು ಅಂದುಕೊಂಡಷ್ಟಕ್ಕಿಂತ ಜಾಸ್ತಿ ದೂರಾನೇ ಸೇರಿದ್ದೆವು ನಮ್ ಮನಸಲ್ಲಿ…! ಅವನ ಪ್ರೀತಿಯ ಪ್ರಮಾಣ ಮೌಲ್ಯಮಾಪನ ಕೂಡ ಶುರು ಮಾಡಿದ್ದೆವು ಅವನು ಬರ್ತಡೇ ವಿಷ್ ಮಾಡಿದ್ದ ಮುಂಜಾನೆ ಐದು ಘಂಟೆಗೆ ಎಂದು ಬಸಂತಿ ಅಂದಾಗ ನನ್ಗೂ ವಿಷ್ ಮಾಡಿದ್ದ ಮುಂಜಾನೆ ಆರುವರೆಗೆ ಅವಾಗ ನೀವ್ಯಾರು ಇನ್ನ ಸ್ಟೇಟಸ್ ಇಟ್ಟಿದ್ದಿಲ್ಲ ಅಂತ ಸಂಜನಾ ಕೂಡ ಉತ್ತರಕೊಟ್ಟು ನಕ್ಕಾಂತ ಎದ್ದು ಹೋದಾಗ ನಾನು ಇನ್ಮೇಲೆ ಅವನನ್ನ ನೋಡಲೇಬಾರದು ಅಂತ ನಾನು ಇಂದಿನ ಸಭೆಯಲ್ಲಿ ಅವನ ಮುಖಾಮುಖಿ ಕೂಡದೆ ನನ್ನ ಕಣ್ಣೋಟವನ್ನು ತಪ್ಪಿಸಿಕೊಂಡಿದ್ದೆ.


 ರಂಗಸ್ವಾಮಿ ಮಾರ್ಲಬಂಡಿ ಹರಿವಾಣ

One thought on “ಕತ್ತಲ್ ರಾತ್ರಿ

Leave a Reply

Back To Top