ಕಾವ್ಯ ಸಂಗಾತಿ
ಅದ್ಬುತ ವ್ಯಕ್ತಿತ್ವ
ಮಧುರಾ ಮೂರ್ತಿ
ಹೊಳೆಯುತಿಹ ಕಾಂತಿ ತುಂಬಿದ
ಮುಗ್ದ ಕಂಗಳಲಿ ನಾ ಕಂಡೆ
ಅದೇನೋ ಸುಪ್ತ ಬಯಕೆಗಳು
ಒಡಲಲಡಗಿದ ವೇದನೆಗಳು
ದೃಷ್ಟಿಯಲಿ ಕಾಣುತಿಹುದು
ಅದೆಂತಾ ಗಾಂಭೀರ್ಯತೆ
ಹುಳುಕು ಕೊಳಕಿಲ್ಲದಂತಹ
ಶುದ್ದ ಮನಸಿನ ಭಾವವು
ಅಸೂಯೆಯೇ ತುಂಬಿರುವ
ಜಗದಲಿ ಅಪವಾದವೆಂಬಂತೆ
ಹೃದಯ ಶ್ರೀಮಂತಿಕೆಯಿಂದ
ಕೂಡಿದ ಅಪರೂಪ ನೋಟವು
ಭಕ್ತಿಯ ಶಕ್ತಿಯ ನಂಬಿರುವ
ಅಂತಃಶಕ್ತಿ ಜಾಗ್ರತವಾಗಿರುವ
ವಿವೇಚನೆಗಳಿಂದ ಕೂಡಿದಂತೆ
ಚಿತ್ತದ ಭಾವ ತೋರುತಿಹುದು
ಆಕರ್ಷಿಸುವ ಮಂದಹಾಸ
ಸಮ್ಮಾನಿಸುವಂತಹ ಚರ್ಯೆ
ಭಿನ್ನವಾಗಿಹ ಅದ್ಭುತ ವ್ಯಕ್ತಿತ್ವ
ಮುಖದಿ ಕಂಗೊಳಿಸುತಿಹುದು
ನೀಲಿಯಾಗಸದ ತಾರೆಯಂತೆ
ಶುಭ್ರವಾಗಿಹ ಹಾಲಿನಂತೆ
ಶಾಂತವಾದ ತಿಳಿನೀರಿನಂತೆ
ಅಪ್ಪನ ಒಡನಾಟವಿರುವುದು
ತುಂಬು ಹೃದಯದ ಧನ್ಯವಾದಗಳು
ಅಪ್ಪನ ಕುರಿತು ಬಹಳ ಸೊಗಸಾದ ಕವನ..
ಧನ್ಯವಾದಗಳು
Superb
ಕವನ ಚಂದ. ಗಾಂಭೀರ್ಯ ಸರಿ, ಇಲ್ಲವೇ ಗಂಭೀರತೆ. ಗಾಂಭೀರ್ಯತೆ ತಪ್ಪು. ಹಾಗೆಯೇ- ಮುಗ್ಧ, ಶುದ್ಧ — ಆಗಬೇಕು.
ಜಾಗ್ರತ ಇಲ್ಲಿ ಸರಿಯಲ್ಲ: ಜಾಗೃತ ಸರಿ. ಜಾಗ್ರತ ಪದವಿಲ್ಲ. ಜಾಗ್ರತೆ ಇದೆ. ಅಂದರೆ ಜಾಗರೂಕತೆ..
ಅಕ್ಷರ ದೋಷ ಗಮನಿಸಿರಲಿಲ್ಲ…ಸರಿಪಡಿಸಿಕೊಳ್ಳುವೆ. ಧನ್ಯವಾದಗಳು
ಅಪ್ಪನ ಬಗ್ಗೆ ಅಪ್ಯಾಯಮಾನವಾದ ಭಾವನೆ