ಕಾವ್ಯ ಸಂಗಾತಿ
ಅಪ್ಪನಿಗೊಂದು ಗಜಲ್
ಮಾಜಾನ್ ಮಸ್ಕಿ
.
ಸ್ವಾಭಿಮಾನದಿಂದ ಬದುಕಲು ಕಲಿಸಿದ್ದು ನನ್ನಪ್ಪ
ಸಂಸಾರ ಸಾಗರದಲ್ಲಿ ಈಜಲು ನೂಕಿದ್ದು ನನ್ನಪ್ಪ
ಬಣ್ಣಕ್ಕೆ ಬೇರೆ ಬಣ್ಣ ಸೇರಿದರೆ ಬಣ್ಣದ ರಂಗು ಬದಲಾಗುವುದು
ಎಲ್ಲರೊಂದಿಗೆ ಬೆರೆತು ಬೆಸೆಯುವುದನ್ನು ತೋರಿಸಿದ್ದು ನನ್ನಪ್ಪ
ತಂದೆಯ ಎದುರು ನಿಲ್ಲುವ ಧೈರ್ಯ ಎಂದೆಂದಿಗೂ ಇಲ್ಲ
ಜಗತ್ತನ್ನೇ ಎದುರಿಸಿ ನಿಲ್ಲುವ ಶಕ್ತಿ ಕೊಟ್ಟಿದ್ದು ನನ್ನಪ್ಪ
ತಾಯಿಗಿಂತಲೂ ಹೆಚ್ಚಿನ ಕರುಣೆ ರಕ್ಷಣೆ ವಾತ್ಸಲ್ಯ ನೀಡಿದರು
ಮಕ್ಕಳನ್ನು ಭದ್ರತೆ ಪ್ರೀತಿಯಿಂದ ಬೆಳೆಸುವುದನ್ನು ಹೇಳಿದ್ದು ನನ್ನಪ್ಪ
ಒಂದೂ ಮಾತಾಡದೇ ಜೀವನದ ಪಾಠ ಕಲಿಸಿದರು ತಮ್ಮ ನಡೆಯಲ್ಲಿ
“ಮಾಜಾ” ಕಣ ಕಣದಲ್ಲೂ ಜೀವಂತಿಕೆಯಲ್ಲಿ ಜೀವಿಸಿದ್ದು ನನ್ನಪ್ಪ