ಅಪ್ಪನ ದಿನದ ವಿಶೇಷ

ಕಾವ್ಯಸಂಗಾತಿ

ಅಪ್ಪನೆಂದರೆ ಕಡಲು

ಲಕ್ಷ್ಮೀದೇವಿ ಕಮ್ಮಾರ

ಅಪ್ಪ ನನಗೆ ಯಾವಾಗಲು ಕಡಲಿನಂತೆ
ಅದೇ ಅರ್ಭಟ, ನಿಗೂಢ, ಅಗಾಧತೆ
ಆತನ ಕೈ ಬೆರಳ ಹಿಡಿದು
ಅಂಗಡಿ ಬಜಾರ,ನದಿ ದಡದಗುಂಟಾ ಸುತ್ತಾಡಿದರೆ
ಎಲ್ಲೆಲ್ಲಿದ ಸಂಭ್ರಮ ಸಡಗರ
ಕಡಲ ತಟದಲಿ, ಅಲೆಗಳೊಂದಿಗೆ ‘ನೀರಾಟಕ್ಕಿಳಿದಂತೆ ಆನಂದ

ಜಾತ್ರೆ, ಉತ್ಸವಗಳಲ್ಲಿ
ಅಪ್ಪನ ಹೆಗಲೇರೆ ಹೊರಟರೆ
ಜನಸಾಗರದ ಮಧ್ಯ ತಲೆ ಏತ್ತಿ
ಉತ್ಸವದ ಮೂರ್ತಿ ನಾನೆಂಬ
ಗರ್ವ ಹೆಮ್ಮೆ
ಅಪ್ಪನೊಂದಿಗಿದ್ದರೆ ಯಾವ ಭಯವಿಲ್ಲ
ಮಳೆ-ಗುಡುಗು-ಸಿಡಿಲಿನ ಆರ್ಭಟ
ಉರಿಬಿಸಿಲು, ಸೋಲು, ಅವಮಾನ
ಗಳಿಗೆ ಅಪ್ಪನ ಬಳಿ ಯಾವಾಗಲು
ಎಲ್ಲದಕ್ಕೂ ಪರಿಹಾರ

ಅಪ್ಪನೆಂದರೆ ಸದಾ ಕಾಯುವ ನೆರಳು,
ಧೈರ್ಯ ,ಬಲಕ್ಕೆ ಅಪ್ಪನ ತೋಳು
ಕಷ್ಟಕಾರ್ಪಣ್ಯದಲ್ಲಿ ಬಲವಾದ ಹೆಗಲು


Leave a Reply

Back To Top