ಕಾವ್ಯಸಂಗಾತಿ
ನೆನಪಿನಲೆಗಳ ಮೇಲೆ ಅಪ್ಪ
ಅಕ್ಷತಾ ಜಗದೀಶ.
ನೆನಪಿನಲೆಗಳ ಮೇಲೆ
ಹಾದು ಹೋಗುತಿಹ
ಹಾಯಿದೋಣಿ ಈಗ ಅಪ್ಪ..
ಕೈ ಬೀಸಿ ನನ್ನತ್ತ..
ಸಾಗುತಿಹೆ ಏಕೆ
ಮತ್ತೆ ಹೊಸ ದಿಗಂತದೆಡೆಗೆ..
ನೆನಪುಗಳೇ ಅಲೆಗಳಾಗಿ
ಮತ್ತೆ ಮತ್ತೆ ಅಪ್ಪಳಿಸುತಿದೆ
ಮನವೆಂಬ ತೀರಕೆ..
ತಿರುಗಿ ಬಂದು ಸಂತೈಸು
ನೆನಪಿಸುತಿಹ ಜೀವಕೆ.…
ಅಪ್ಪನೆಂದರೆ ವಿಶಾಲ ಕಡಲು
ಕಡಲೊಳು ಕಾಣುವ ಬಿಂಬವೆ
ಸ್ಪರ್ಶಿಸಲಾಗದ ಮುಗಿಲು…
ಬದುಕಿನ ಹೊಲದೊಳು
ನಿನ್ನ ನುಡಿಗಳೇ ನೆಗಿಲು..
ಅರಿವಿದೆ ಎನಗೆ ಅಪ್ಪ
ನೀ ಮರಳಿ ಬರದ ವಿಷಯ
ಮುಂದೊಂದು ದಿನ ನಾ ಬರುವೆ
ನಿನ್ನೆಡೆಗೆ ತಿಳಿಸಲು
ಅಪ್ಪಂದಿರ ದಿನದ ಶುಭಾಶಯ…..
ತುಂಬಾ ಚೆನ್ನಾಗಿದೆ ಕವನ.
Lovely