ಅಪ್ಪನ ದಿನದ ವಿಶೇಷ

ಕ಻ವ್ಯ ಸಂಗಾತಿ

ಅಪ್ಪ ಬರೀ ಪದವಲ್ಲ

ಜಯಲಕ್ಷ್ಮಿ ಎಂ ಬಿ

ಅಪ್ಪ ಬರೀ ಪದವಲ್ಲ

ಅಪ್ಪ ಎಂಬ ಶಬ್ದ ಬರೀ ಪದವಲ್ಲ
ಅದೊಂದು ಮಿಂಚಿನ ಸಂಚಾರ
ಶಶಿಯುದಯಕೆ ಕಾದು ಕುಳಿತಿಹ ನೈದಿಲೆಯ ತೆರದಿ
ನೆನಪ ಬುತ್ತಿಯ ಒಯ್ಯುವ ಪ್ರೇಮದ ಚಿಲುಮೆ …. ಅಪ್ಪ

ಸಂಸಾರ ತೇರನು ಸರಿದೂಗಿಸಲು ಹೆಣಗುತ್ತಾ ಬದುಕ ಸಾಗಿಸಿದ ಕರುಣಾಳು
ಕಲ್ಪನೆಗೆ ಮೀರಿದ
ಬದುಕೆಂಬ ಜಂಜಾಟದಲಿ ಹಸಿವು ದಣಿವುಗಳೊಂದಿಗೆ ಮಕ್ಕಳ ಚಿಂತೆಯಲಿ ತನ್ನ ಸುಖ ಕಂಡವನು ಅಪ್ಪ……

ನನ್ನೀ ಅಂತರಂಗದ ಭಾವನೆಗಳು ಮೀಸಲಿಟ್ಟ ಬಯಕೆಯಂತೆ ಅಡಗಿಹವು ಇಂದು ಪಥವ ಬದಲಿಸದ ಛಾಯೆಯಂತೆ

ಮಾಸದೆ ಉಳಿದಿರುವ ನೆನಪುಗಳ ಸುತ್ತ ಕಳೆದು ಹೋಗಿಹೆನು ಇಂದು ನೀ ಹೆಣೆದ ಕನಸುಗಳ ಲೋಕದೊಳು ಅಪ್ಪ…….

ಒಲವ ಕದವ ತೆರೆದು ಪ್ರೇಮದ ಹಣತೆಯನು ಬೆಳಗಿದ ನಂದಾದೀಪ ನೀನು
ಬಾಲ್ಯದಲಿ ಬಾಗಿಲ ಹೊಸ್ತಿಲಲಿ ಕಾದು ಕುಳಿತಿದ್ದ
ಆ ದಿನಗಳು…. ಇಂದು ಬರೀ ನೆನಪು …. ಬರೀ ನೆನಪು…


ಜಯಲಕ್ಷ್ಮಿ ಎಂ ಬಿ

Leave a Reply

Back To Top