ಮಿಡಿದ ಮನ

ಕಾವ್ಯ ಸಂಗಾತಿ

ಮಿಡಿದ ಮನ

ಚಂದ್ರು ಪಿ ಹಾಸನ್

CHANDRU HASSAN

ಮನದಲ್ಲೇ ಮಿಡಿಯುವ
ಭಾವನೆಗಳಿಗೆ ಕೊನೆಯಿಲ್ಲ
ಬಣ್ಣಿಸುವ ತುಡಿತದ
ಹಾದಿಗಳಿಗೆ ಮಿತಿಯಿಲ್ಲ

ಕಲ್ಪನೆಯ ಲೋಕದಲ್ಲಿ
ಎಚ್ಚರವಿಟ್ಟು ವಿಹರಿಸಿದೆ
ವಾಸ್ತವದ ಅರಿವು
ದೃಶ್ಯದಂತೆ ಬಿಂಬಿಸಿದೆ.

ಹೊಸ ನೀರು ಬಂದು
ಹಳೇ ನೀರ ಕೊಚ್ಚಿದಂತೆ
ವಾಸ್ತವತೆಯ ಹೆಗ್ಗುರುತು
ಅಚ್ಚಳಿಯದ ಅಳಿಸಿದೆ

ಕಟ್ಟಿದ ಕನಸುಗಳ
ಮುಟ್ಟುವ ವೇಳೆಗೆ
ಜಾರಿತೋ ಎಲ್ಲೋ
ವಿಹರಿಸಿತೋ ಎಲ್ಲೋ

ಹುಡುಕಿ ತಡುಕಿ ಬಳಲಿ ಬೆಂದು ನೊಂದು ತಂದು
ದಣಿವಾರಿಸಿಕೊಳ್ಳುವ ಮೊದಲೇ
ಮರೆತೆನು ಒಂದೊಂದೇ


Leave a Reply

Back To Top