ಸುಮ್ಮನೆ ಅಲ್ಲ ಬಿಡು

ಕಾವ್ಯ ಸಂಗಾತಿ

ಸುಮ್ಮನೆ ಅಲ್ಲ ಬಿಡು

ಪ್ರೊ ವಿಜಯಲಕ್ಷ್ಮಿ ಪುಟ್ಟಿ

ಸುಮ್ಮನೆ ಅಲ್ಲ ಬಿಡು ನನ್ನ ನಿನ್ನ ಬಂಧ, ಇಲ್ಲದಿರೆ ಹೀಗೇಕೆ ಕಾಡುತ್ತಿದ್ದೆ ಸುಖಾಸುಮ್ಮನೆ, ದಶಕಗಳಿಂದ ಎಂಬಂತೆ….

ನನ್ನೊಳಗೆ ಏನೋ ತಪ್ಪಿದೆ ಹಿಡಿತ, ಹೆಜ್ಜೆಹೆಜ್ಜೆಗೂ ಜೀವ ನಿನಗೆ ಮಿಡಿತ,
ಕುಂತಲ್ಲಿ ನಿಂತಲ್ಲಿ ಬರೀ ತುಡಿತ,
ಎದೆ ನಗಾರಿಯದು ಬರೀ ಜೋರು ಬಡಿತ, ಸುಮ್ಮನೆ ಅಲ್ಲ ಬಿಡು ನನ್ನ ನಿನ್ನ ಬಂಧ..

ಗಂಟಿಕ್ಕಿದ ಮುಖ ನಿನ್ನದು,
ಆದರೂ ಅದೇನೋ ಮೋಡಿ,
ತುಂಬ ಕಾಡುತ್ತಿದೆ ನಿನ್ನ ಕಣ್ಣ ಜೋಡಿ,
ದೂರದ
ನೀಲುವಲೂ ಸಮಾಲೋಚನೆ ತೀಡುತ್ತ, ಬೆಂಬಿಡಿದು ಮತ್ತೆ ಕಾಡಿ ಬೇಡಿ,
ಸುಮ್ಮನೆ ಅಲ್ಲ ಬಿಡು ನನ್ನ ನಿನ್ನ ಬಂಧ..

ನನ್ನ ನಿನ್ನ ಭಾವದ ಪಯಣ,
ಅದೆಂದೂ ಮುಗಿಯದ ಜೀವದ ಯಾಣ,
ಜಿಕುತಿರುವೆ ನೀನಿಲ್ಲದ ಜೀವನ ಜೋಕಾಲಿ, ದಿಗಂತಕ್ಕೆರಿದರೂ
ನಲಿವಿಲ್ಲ ಗೆಲುವಿಲ್ಲ,
ಸುಮ್ಮನೆ ಅಲ್ಲ ಬಿಡು ನನ್ನ ನಿನ್ನ ಬಂಧ….


Leave a Reply

Back To Top