ಗಜಲ್

ಕಾವ್ಯ ಸಂಗಾತಿ

ಗಜಲ್

ದೇವರಾಜ್ ಹುಣಸಿಕಟ್ಟಿ

ಈ ಶಹರದೊಳಗ ಅದೆಷ್ಟು
ನಟಿಸುತ್ತಾರೆ ಜನ
ಪರಿಚಯಸ್ಥರು ಅಪರಿಚಿತರಂತೆ
ವರ್ತಿಸುತ್ತಾರೆ ಜನ

ರಾತ್ರಿ ರಸ್ತೆಯಲಿ ಬೆಳಗುವಷ್ಟು
ಬೆಳಕಿಲ್ಲ ಹೃದಯದಲಿ
ಬೊಗಸೆ ನೀರಿಗೂ ಲೆಕ್ಕ
ಹಾಕುತ್ತಾರೆ ಜನ

ಮಾತಿನಲಿ ಪೆಂಟಿ ಬೆಲ್ಲವನೆ
ಸುರಿಸುತ್ತಾರೆ ಇಲ್ಲಿ ಗೊತ್ತೇ
ಸಾರಿಗೆ ಕೇಳಿದರೆ ಹಿಡು ಉಪ್ಪು
ನಿರಾಕರಿಸುತ್ತಾರೆ ಜನ

ಮಾನವೀಯತೆ ಸತ್ತು ನರಳುತ್ತಿದೆ
ಆಸ್ಪತ್ರೆಯ ಮಂಚದ ಮೇಲೆ ಗೊತ್ತೇ
ಹಣದ ಥೈಲಿಗೆ ಮಾತ್ರ
ತುಟಿ ಬಿಚ್ಚುತ್ತಾರೆ ಜನ

ನಗರದ ನೌಟಂಕಿ ಆಟಗಳಿಗೆ
ಹಗಲಲು ಬೆಚ್ಚತ್ತೇನೆ ಗೆಳೆಯ
‘ದೇವ’ನೂರಿನ ಪಯಣವನ್ನೂ
ಈಗೀಗ ಮರೆತು ಬದುಕುತ್ತಾರೆ ಜನ


2 thoughts on “ಗಜಲ್

  1. ಕಾಫಿಯಾ ಸಮ ಅಕ್ಷರ/ಮಾತ್ರೆಗಣ ಇಲ್ಲ, ಪ್ರಕಟಿಸುವ ಆತುರ ಎದ್ದು ಕಾಣುತ್ತದೆ. ಏಕೆಂದರೆ
    ಹಾಕುತ್ತಾರೆ ಬದಲಿಗೆ ಇರಿಸುತ್ತಾರೆ ತಸು ಸಮಯ ನೀಡಿದ್ದರೆ ಅವರಿಗೇ ಹೊಳೆಯುತ್ತಿತ್ತು.
    ನಿರಾಕರಿಸುತ್ತಾರೆ……ಇಲ್ಲವೆನ್ನುತ್ತಾರೆ ಸಿಗುತ್ತಿತ್ತು.
    ತುಟಿ ಬಿಚ್ಚುತ್ತಾರೆ. ಬಾಯ್ಬಿಡ್ತಾರೆ
    (ಹಣವೆಂದರೆ ಹೆಣ ಬಾಯ್ಬಿಡ್ತದೆ ಗಾದೆ ಇದೆ
    ಈಗೀಗ. ಈಗಲೇ ಇನ್ನೂ ಅರ್ಥ ಕೊಡುತ್ತಿತ್ತು.
    ಸಹನೆ ವಜ್ರದ ಕವಚ (ಡಿ.ವಿ.ಜಿ)

Leave a Reply

Back To Top