ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹೃದಯ ನಿವೇದನೆ

ಜಯಲಕ್ಷ್ಮಿ ಎಂ. ಬಿ

ಬದುಕೆಂಬ ಹಾಳೆಯಲಿ ಉಳಿದಿಹವು ಉತ್ತರವಿಲ್ಲದ ಅದೆಷ್ಟೊ ಪ್ರಶ್ನೆಗಳು

ಅರ್ಥವಿರದ ಮಾತುಗಳು ಕಳೆಯುತಿಹವು ಸಮಯವನು ಅರುಹಲಾರದೆ ನಿಜಮರ್ಮ

ಮನದೊಳಡಗಿದ ನೋವನು ಮರೆತು ಮತ್ತೆ ಮರುಕಳಿಸುತಿಹವು ನೆನಪುಗಳು

ಮರೆತ ಮಾತುಗಳು ಅರಸುತಿಹವು ನೆಮ್ಮದಿಯ ಸುಖದ ಅಲೆಯ ತಾಣವನು

ಕನವರಿಸುತಿಹವು ಕಾಣದ ನಾಳೆಗಾಗಿ ಎದೆಯೊಳಡಗಿದ ಕನಸುಗಳರಳದೆ

ನೆಮ್ಮದಿ ಇರದ ಹಗಲೊಳು ನಿದ್ದೆ ಇಲ್ಲದ ಇರುಳು ಸದ್ದಿಲ್ಲದೆ ಸಾಗುತಿಹವು

ಎತ್ತ ಪಯಣವೋ ಇನ್ನೆತ್ತ ಮನವು ಹರಿಯುತಿಹುದು ತಿಳಿಯೆನು ಕಾಣೆ

ಚಿತ್ತ ಶುದ್ಧಿಯನರಸಿ ಪರಿತಪಿಸುತಿಹುದು ಮನವು ಬದುಕ ನೆಲೆಯ ಕಾಣದೆ


ಜಯಲಕ್ಷ್ಮಿ ಎಂ. ಬಿ

About The Author

Leave a Reply

You cannot copy content of this page

Scroll to Top