ಕಾವ್ಯ ಸಂಗಾತಿ
ಗಜಲ್
ಬಾಗೇಪಲ್ಲಿ
ನನಗೆ ಚಂದಿರನ ನೆನಪು ಆಗುವುದೇ ನಿನ್ನಿಂದ ಚಂದ್ರಮುಖಿ
ನೀ ಶಶಿಮುಖಿ ಎಂದು ಎಲ್ಲರಿಗೆ ತಿಳಿದದ್ದು ನನ್ನಿಂದ ಚಂದ್ರಮುಖಿ
ಗೊತ್ತೇ ತಿಂಗಳಮಾಮಗೆ ಕಾಂತಿ ಬಂದುದು ಎಲ್ಲಿಂದ ಚಂದ್ರಮುಖಿ
ಇನ ತನ್ನ ರಶ್ಮಿಯ ಪೂರ್ಣ ಸುರಿಸುತ ಈಗ ನೋಡೆಂದ ಚಂದ್ರಮುಖಿ
ಕವಿ ಕೇಳಿದ ತಾರೆಯರು ಬೇಡ ರಜನೀಶ ಒಬ್ಬ ಸಾಕೆಂದ ಚಂದ್ರಮುಖಿ.
ಪ್ರೀಮಿ ಎಂದ, ಜೇನ್ಹೊಳೆ ಎನ್ನ ಪ್ರಿಯೆ ಅವಳೇ ಬೇಕೆಂದ ಚಂದ್ರಮುಖಿ.
ಜೋಗಿ ಹಾಡುತ ಚೌತಿಚಂದ್ರನದೋ ಮೇಲಿಹ ಕಾಣೆಂದ ಚಂದ್ರಮುಖಿ.
ಪ್ರೀಮಿ ಕೇಳಿದ ಪ್ರಿಯತಮೆ ಹುಣ್ಣಿಮೆ ಆಗೆ ಕಾಯಲೇಕೆಂದ ಚಂದ್ರಮುಖಿ
ಕೃಷ್ಣಾ ಬೌದ್ದ ಭಿಕ್ಷು ಎಲ್ಲವ ಕೇಳಿ ನಗುತಲಿ ಹೀಗೆಂದ ಚಂದ್ರಮುಖಿ.
ಚೆಲುವೆ ಮುಖ ತೊಳೆದು ಕುಡಿವುದೇನೂ ಇಲ್ಲೆಂದ ಚಂದ್ರಮುಖಿ.