ಕಾವ್ಯ ಸಂಗಾತಿ
ಗಜಲ್
ಮಾಜಾನ್ ಮಸ್ಕಿ

ಕಣ್ಣುಗಳಲ್ಲಿಯ ವಿಷಾದವನ್ನು ಗುರುತಿಸಿದೇನು
ದೂರಾದ ಪ್ರೀತಿಯ ಬಯಸಿ ಪರಿತಪಿಸಿದೇನು
ಪರೀಕ್ಷೆಗೆ ಗುರಿಯಾದ ಸೀತೆ ನೊಂದ ರಾಮಾಯಣವಿದೆ
ನಿನ್ನಯ ಪ್ರೇಮಾಗ್ನಿಗೆ ದೂಡಿ ಪರೀಕ್ಷಿಸಿದೇನು
ಹಸಿದ ಮಾಂಸ ಭಕ್ಷಿಸುವ ನರರಾಕ್ಷಸರಿರುವರು ಹಸಿವಿನಲ್ಲಿ
ನಿನ್ನ ಬಯಸಿ ಚಿಗುರುತ್ತಿರುವ ಒಲವನ್ನು ಕಮರಿಸಿದೇನು

ಮೌನ ಮಾತಾಗಲು ಪ್ರಯತ್ನಿಸಿ ತೊದಲುತ್ತಿತ್ತು
ಅಬ್ಬರದ ಆರ್ಭಟದಲ್ಲಿ ಸ್ವರವನ್ನೇ ಹುದುಗಿಸಿದೇನು
ಮನ ನೊಂದು ಬೆಂದರು ಪ್ರೀತಿಸುವುದು ಏಕೆ “ಮಾಜಾ”
ನಿನ್ನ ಹೃದಯದಲ್ಲಿ ಸುಂದರ ನೆನಪುಗಳನ್ನು ಉಳಿಸಿದೇನು
ಮಾಜಾನ್ ಮಸ್ಕಿ