kadalu

ಕಾವ್ಯ ಸಂಗಾತಿ

ತೀರವಿರದ ಕಡಲು

ಅರುಣ ನರೇಂದ್ರ

ಬೆಳಕಿನ ಬಿಂದುಗಳು

ಕಣ್ಣಿಗೆ ಕತ್ತಲೆ ಬರಿಸುವ
ಆಟ ಸಾಕು ಬಿಡು
ಬೇಕಾದರೆ ಬೆಳಕನ್ನೆ
ಕುಡಿಯೋಣ

ನೀನಿಲ್ಲದಿದ್ದರೆ ಹಗಲಿಗೂ ವ್ಯಥೆ
ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುತ್ತದೆ
ನೀನಿಲ್ಲದಿದ್ದರೆ ಬೆಳಕಿನ ಕಣ್ಣೆಗೂ
ಕತ್ತಲೆ ಕವಿಯುತ್ತದೆ

.

ಕತ್ತಲೆಗೆ ಕದಯಿಕ್ಕಿ
ಹೊರನಡೆದ ನೆನಪುಗಳು
ಮಿಂಚು ಹುಳುಗಳ
ಬೆನ್ನುಹತ್ತಿವೆ

ಮನೆಯ ಹೊರ ಒಳಗೆ
ಝಗಮಗಿಸುತ್ತಿವೆ
ನೂರಾರು ದೀಪ
ನೀನು ದೇವರ ಮುಂದೆ
ದೇದೀಪ್ಯಮಾನವಾಗಿ ಬೆಳಗುವ
ನಂದಾದೀಪ


ಅರುಣಾ ನರೇಂದ್ರ

Leave a Reply

Back To Top