ಆತ್ಮಸಖಿ..ಗೆ ಅನಿಕೇತನ ಪುರಸ್ಕಾರ

ಆತ್ಮಸಖಿ..ಗೆಅನಿಕೇತನಪುರಸ್ಕಾರ

ಸಿದ್ದರಾಮ ಹೊನ್ಕಲ್ ಸರ್ ಗೆ

ಸಂಗಾತಿ ಬಳಗ ಅಭಿನಂದನೆ ಸಲ್ಲಿಸುತ್ತಿದೆ

ನಾಡಿನ ಹೆಸರಾಂತ ಲೇಖಕ ಸಿದ್ಧರಾಮ ಹೊನ್ಕಲ್ ಅವರಿಗೆ ರಾಷ್ಟ್ರಕವಿ ಕುವೆಂಪು ಅವರ ರಾಜ್ಯ ಮಟ್ಟದ ಅನಿಕೇತನ ಪುರಸ್ಕಾರ ದೊರೆತದ್ದು ಗಿರಿನಾಡಿಗೆ ಒಂದು ಹೆಮ್ಮೆಯಾಗಿದೆ.ಸುಮಾರು ಐವತ್ತಕಿಂತ ಹೆಚ್ಚು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿರುವ ಇವರಿಗೆ ಪ್ರತಿಷ್ಠಿತ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರ, ಸಾಹಿತ್ಯ ಸಮ್ಮೇಳನಗಳ ಸರ್ವಾಧ್ಯಕ್ಷತೆಯ ಗೌರವ ಸಂದಿವೆ.ಇದೇ ತಿಂಗಳು ೨೯-೬-೨೦೨೨ ರಂದು ಮೈಸೂರಿನಲ್ಲಿ ನಡೆವ ರಾಜ್ಯ ಮಟ್ಟದ ವಿಚಾರ ಸಂಕಿರಣ, ಕವಿಗೋಷ್ಠಿ,ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು ಅಂದು ಕಲ್ಯಾಣ ಕರ್ನಾಟಕದ ಪರವಾಗಿ ಇವರಿಗೆ ರಾಜ್ಯ ಮಟ್ಟದ ಅನಿಕೇತನ ಪುರಸ್ಕಾರ ನೀಡಿ ಗೌರವಿಸಲಾಗುವುದೆಂದು ಈ ಅನಿಕೇತನ ಸಾಂಸ್ಕೃತಿಕ ವೇದಿಕೆ ಯ ರಾಜ್ಯ ಅಧ್ಯಕ್ಷರಾದ ಶ್ರೀ ಕೆ.ಎಂ.ಮುನಿಕೃಷ್ಣಪ್ಪ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆತ್ಮಸಖಿ..ಗೆ ಅನಿಕೇತನ ಪುರಸ್ಕಾರ

೨೦೨೨ ಆರಂಭದ ತಿಂಗಳಲ್ಲಿ ಶ್ರೀ ಕೆ.ಎಂ. ಮುನಿಕೃಷ್ಣಪ್ಪನವರು  ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರು,ಕರ್ನಾಟಕ ರಾಜ್ಯ ಅನಿಕೇತನ ಸಾಂಸ್ಕೃತಿಕ ವೇದಿಕೆ ,ಕೃಷ್ಣರಾಜಪುರಂ,ಬೆಂಗಳೂರು ಇವರು ತಮ್ಮ ಪ್ರತಿಷ್ಠಾನದ ವತಿಯಿಂದ ೨೦೨೧ ಕೃತಿಗಳನ್ನು ಪುರಸ್ಕಾರಕ್ಕೆಅಹ್ವಾನಿಸಿದ್ದರು.

 ಆತ್ಮಸಖಿಯ ಧ್ಯಾನದಲಿ೨೦೨೧ ಕೃತಿ ಕಳಿಸಿದ್ದೆ. ಅವರು ಇದೇ ಮಾರ್ಚ ತಿಂಗಳಲ್ಲಿ ಫೋನು ಮಾಡಿ ನಿಮ್ಮ ಕೃತಿ ಹಾಗೂ ಅದರಲ್ಲಿ ಇರುವ ನಿಮ್ಮ ಪರಿಚಯ,ಸಾಧನೆ ಗಮನಿಸಿ ನಮಗೆ ತುಂಬಾ ಹೆಮ್ಮೆ ಅಭಿಮಾನ ಗೌರವ ಮೂಡಿದೆ.ನಾವುಮೈಸೂರಿನಲ್ಲಿ ಮುಂದೆ ಹಮ್ಮಿಕೊಳ್ಳಲಿರುವ ಮಹಾಕವಿಕುವೆಂಪು ಹೆಸರಿನಲ್ಲಿ ಕೊಡಮಾಡುವ ಅನಿಕೇತನ ಪ್ರಶಸ್ತಿ ಗೆ ನಿಮ್ಮನ್ನು ಆಯ್ಕೆ ಮಾಡಿದೇವೆ. ಒಪ್ಪಿಗೆ ತಿಳಿಸಿ.ತಾವುಮೈಸೂರಿಗೆ ಬಂದುನಮ್ಮ ಪ್ರಶಸ್ತಿ ಸ್ವೀಕರಿಸಬೇಕು. ದಿನರಾಜ್ಯಮಟ್ಟದ ವಿಚಾರ ಸಂಕಿರಣ, ಪ್ರಶಸ್ತಿ ಪ್ರದಾನ ಸಮಾರಂಭ, ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿ ನಡೆಯಲಿದೆ ಎಂದು ಬಹಳ ಅಭಿಮಾನದಿಂದ ಫೋನಲಿ ತಿಳಿಸಿದ್ದರು,

ಸರ್,ತಾವು ಮಹಾಕವಿ ಕುವೆಂಪು ಹೆಸರಿನಿಂದ ಕೊಡುವ ಅನಿಕೇತನ ಪುರಸ್ಕಾರ ಕ್ಕೆ ದೂರದ, ಅಪರಿಚಿತನಾದ ನನ್ನನ್ನು ನನ್ನ ಕೃತಿಗಳ ಮೂಲಕ ಗಮನಿಸಿಪರಿಗಣಿಸಿರೋದು ತುಂಬಾಸಂತೋಷ ಸರ್, ಕುವೆಂಪು ಹೆಸರಿನ ಪ್ರಶಸ್ತಿ ಅಂದರೇನೇ ಥ್ರಿಲ್ ಆಗುತ್ತದೆ. ಖಂಡಿತಾ ನೀವು ಕಾರ್ಯಕ್ರಮ ಎರ್ಪಡಿಸಿದಾಗ ಬರುವೆ ಅಂತ ಆಗ ಅವರಿಗೆ ಒಪ್ಪಿಗೆ ಸೂಚಿಸಿದ್ದೆ.

ಕಾರ್ಯಕ್ರಮ ಇದೇ ೨೯೨೦೨೨ ರಂದು ಸಿರಿಗನ್ನಡ ಸಾಹಿತ್ಯ ವೇದಿಕೆ ಕೋಲಾರ,ಅನಿಕೇತನ ಸಾಂಸ್ಕೃತಿಕ ವೇದಿಕೆ ಬೆಂಗಳೂರು ಹಾಗೂ ಇತರ ಸಂಸ್ಥೆಗಳ ಸಹಯೋಗದ ಮೂಲಕ ಮೈಸೂರಿನಲ್ಲಿ ನಡೆಯಲಿದೆ. ಅನೇಕ ಗಣ್ಯರು, ಹೆಸರಾಂತರು,ಕೆಲವು ಆತ್ಮೀಯರು ಭಾಗವಹಿಸುವ ಸಮಾರಂಭದ ಆಹ್ವಾನ ಪತ್ರಿಕೆ ಗಮನಿಸಿ.ಇದು ಒಂದು ರೀತಿಯಲ್ಲಿ ನನಗೆ ಅವರು ಒಟ್ಟು ಸಾಹಿತ್ಯಿಕ ಸಾಧನೆಯ ದೃಷ್ಟಿಯಿಂದ ನೀಡಿದ್ದರು ಸಹ; ಅದು ನನ್ನ ಆತ್ಮಸಖಿಯ ಧ್ಯಾನದಲಿಗಜಲ್  ಕೃತಿಯ ಮೂಲಕ ಅವರ ಗಮನಕ್ಕೆ ನಾನು ಬಂದಿರೋದರಿಂದ ಕೃತಿಗೆ ಸಂದ ಪುರಸ್ಕಾರ ಅಂತ ಖುಷಿ ಹಾಗೂ ಹೆಮ್ಮೆ ಮೂಡಿದೆ. ದಿನ ಸಾಂಸ್ಕೃತಿಕ ನಗರಿಮೈಸೂರಿಗೆ ಹೊರಡಲಿದೆ.ಗೌರವದಿಂದ ಮಹಾ ಕವಿಯ ಪುರಸ್ಕಾರ ಪಡೆಯಲಿದೆ. ಪ್ರಶಸ್ತಿ ಗೆ ಆಯ್ಕೆ ಮಾಡಿದ ಗೌರವಯುತ  ಶ್ರೀ ಕೆ.ಎಂ.ಮುನಿಕೃಷ್ಣಪ್ಪನವರನ್ನು ಹಾಗೂ ಅವರ ಸಂಘಟನೆಯ,ಆಯ್ಕೆ ಸಮಿತಿಯ ಎಲ್ಲರಿಗೂ ಕಾಣುವ, ಭೇಟಿ ಆಗಿ ಕೃತಜ್ಞತೆಗಳು ಹೇಳುವ ಸಂತಸ ನನ್ನದು.

ಬರುವ ಒಂದೊಂದು ಪುರಸ್ಕಾರ ಸಹ ನಮ್ಮನ್ನು ಇನ್ನಷ್ಟು ಮತ್ತಷ್ಟು ವಿನಯವಂತರಾಗಿಸಲಿವೆ. ಸಾಮಾಜಿಕಜವಾಬ್ದಾರಿ ಹೆಚ್ಚಿಸಲಿವೆ.ನೂರಾರು ಜನರ ಸಂತಸ, ಅಭಿನಂದನೆಗಳು ಪಡೆಯಲಿವೆ.ಒಂದೆರಡು ಅತೃಪ್ತ ಆತ್ಮಗಳ ಹೊಟ್ಟೆ ಉರಿಗೂ ಕಾರಣ ಆಗಲಿದೆ. ಅವುಗಳ ಮಟ್ಟದ! ಕುಹಕ ನುಡಿಗಳು ಸಹ ಸಹಜ.! ನಿಲುಕದ ದ್ರಾಕ್ಷಿ ಯಾವತ್ತೂ ಹುಳಿಯೇ.. ತಮಗೆ ಬಂದಾಗ ಮಾತ್ರ ಪ್ರಶಸ್ತಿ ಗಳಿಗೆ ಘನತೆ ಇರುತ್ತದೆ. ಬೇರೆಯವರಿಗೆ ಬಂದಾಗ ಪ್ರಶಸ್ತಿಗಳು ಘನತೆ ಕಳೆದುಕೊಂಡಿವೆ ..ಎಂಬ ಮಾತುಗಳು ಸಹ ಚಾಲ್ತಿಗೆ ತರೋದುಂಟು.ಪ್ರಶಸ್ತಿ ಕೊಡುವವರು ಯಾರು? ಪಡೆಯುವವರು ಯಾರು ? ಎಂಬುದು ಇಲ್ಲಿ ಮುಖ್ಯವಾಗುತ್ತದೆ.ಇರಲಿ ಇದೆಲ್ಲ ಸಾಹಿತ್ಯ ಲೋಕದಲ್ಲಿ ಸಹಜ. ಚರ್ಚೆ ಮೊದಲು ಅಲ್ಲ.ಕೊನೆಯದು ಅಲ್ಲ.

ನಮಗೆ ಯಾರೇ ಕೊಡುವ ಯಾವುದೇ ಪುರಸ್ಕಾರ, ಗೌರವ, ಅದು ಕೊಡುವವರ ಔದಾರ್ಯವೇ ಹೊರತು ನಮ್ಮ ದೊಡ್ಡಸ್ತಿಕೆ ಅಂತ ಯಾರು ಸಹ ಯಾವತ್ತೂ ಅಂದುಕೋಬಾರದು. ನಾನಂತೂ ಮಾತನ್ನು ನನಗೆ ದೊರೆತ ಪ್ರತಿ ಪ್ರಶಸ್ತಿ, ಪುರಸ್ಕಾರ,ಸಮ್ಮೇಳನಗಳ ಸರ್ವಾಧ್ಯಕ್ಷತೆ,ಇತರ ಯಾವುದೇ ಗೌರವ,ಸನ್ಮಾನ ದೊರೆತಾಗಲೂ ನೆನಪಿಸಿಕೊಂಡಿದೇನೆ.ನಿಮ್ಮಂತಹ ಸಾವಿರಾರು ಸಹೃದಯಿಗಳ ಒಂದೊಂದು ಶುಭ ಹಾರೈಕೆಯಿಂದ ಇದೆಲ್ಲಾ ಆಗಿದೆ ಅನ್ನೋ ನಂಬಿಕೆಯೊಂದಿಗೆ ಮಾತು ಮುಗಿಸುವೆ.ನಮಸ್ಕಾರ.

ಸಿದ್ಧರಾಮ ಹೊನ್ಕಲ್

ಕಾವ್ಯಾಲಯ,ಶಹಾಪುರ.


One thought on “ಆತ್ಮಸಖಿ..ಗೆ ಅನಿಕೇತನ ಪುರಸ್ಕಾರ

  1. ಶುಭಾಶಯಗಳು ಸರ್ ತಮ್ಮ ಅದ್ಭುತ ಗಝಲ್ ಪ್ರತಿಭೆಗೆ ದೊರೆತ ಗೌರವ ಇನ್ನೂ ಹೆಚ್ಚಿನ ಗೌರವ ಪ್ರಶಸ್ತಿಗಳು ತಮ್ಮ ಸಾಹಿತ್ಯಕ್ಕೆ ಸಿಗಲಿ. ಎಂದು ಹಾರೈಸುವೆವು.

Leave a Reply

Back To Top