ಕಾವ್ಯ ಸಂಗಾತಿ
ಹುಟ್ಟು ಸಾವು
ಶ್ರೀಕಾಂತಯ್ಯ ಮಠ
ಹುಟ್ಟು ಸಾವಿಗೇಕೆ ಇಲ್ಲಿ ಜಾಗ
ಒಂದನ್ನಾದರೂ ಬಿಡಬಾರದೆ ದೇವರು ನಮಗೆ ಅದರ ಭಾಗ
ಎರಡೇಕೆ ವಿಭಾಗ ವಿಭಿನ್ನವಾದವು ಏಕೆ
ಅದಕ್ಕೆ ಗೊಂದಲ ಶಂಕೆ.
ಹುಟ್ಟಿದಾಗ ಹಲವು ರೀತಿ ಸಂಭ್ರಮ
ಅವರವರ ಭಾವಕ್ಕೆ ಬರುವಂಥ ಪ್ರೀತಿ ಭಾವ ಸಂಗಮ
ಮೂರು ದಿನದ ನೆನಪುಗಳ ನಡುವೆ
ಮೂರು ನಿಯಮಗಳ ಬದುಕು
ಅಳೆದು ಹಾಕು ಮೊಳ ಉದ್ದ
ಸೋತು ಹೋಗುವೆ ಪೆದ್ದ.
ಸಾವಿಗಾಗಿ ಹೃದಯ ಒಡೆದ ಬಂಧನ
ತಡೆಯಲಾರದಷ್ಟು ದುಃಖ ಸನ್ನಿವೇಶದ ಭಾವನ
ಸಂಬಂಧದ ನಡುವೆ ಬರುವ ಬಿರುಕು ಚುರುಕಿಲ್ಲದ ಅಸಮಧಾನ.
ಯಾಕಿರಬೇಕಿತ್ತು ಇವೆರಡರ ವಿರುದ್ಧ ಸಮಾಗಮ
ಅದು ಇದ್ದರೆ ಇದಿಲ್ಲ ಇದು ಇದ್ದರೆ ಅದಿಲ್ಲ
ಯಾವುದಿರಬೇಕು ಯಾರ ಬಳಿಯಿರಬೇಕು ಸಾವು ಹುಟ್ಟು
ತಿಳಿಯಬೇಕು ನಾವು ಗುಟ್ಟು.
ಸಾವಿಲ್ಲದ ಮನೆಯಿಲ್ಲ ಹುಟ್ಟಿರದ ಮನೆಯಿಲ್ಲ
ಗುಟ್ಟಾದ ಎರಡಕ್ಕೆ ಸೋತು ಗೆದ್ದವರೆ ಯೋಚಿಸಬೇಕಲ್ಲ
ಹುಟ್ಟು ಉಚಿತ ಸಾವು ಖಚಿತ
ಇದು ಪ್ರಚಲಿತವಾಗಿದೆ
ಮತ್ತೇನು ಬಯಸುವಿರಿ ಹೇಳಿ ಹುಟ್ಟು ಸಾವು ಒಂದನ್ನೆ ಆಯ್ಕೆಯಿಲ್ಲ
ಎರಡಿರುವ ಮಧ್ಯೆ ನಾವೆಲ್ಲ
ಒಂದರ ಕಾಗುಣಿತ ಲೆಕ್ಕವಲ್ಲ.