ಹೃದಯ ವೀಣೆ ಮಿಡಿಯುತಿದೆ

ಕಾವ್ಯ ಸಂಗಾತಿ

ಹೃದಯ ವೀಣೆ ಮಿಡಿಯುತಿದೆ

ಪ್ರೊ ರಾಜನಂದಾ ಘಾರ್ಗಿ

ಪ್ರೇಮತಂತು ಬಿಗಿದಿದೆ
ಭಾವಗಳು ಬೆರಳ ತುಂಬಿ
ಸಪ್ತ ಸ್ವರಗಳ ನುಡಿಸಿದೆ
ಹೃದಯ ವೀಣೆ ಮಿಡಿದಿಯುತಿದೆ

ನಾದ ಹೊಮ್ಮಿ ಹರಿದಿದೆ
ರಾಗದೊಂದಿಗೆ ತಾಳ ಬೆರೆತು
ಹೊಸ ಗಾನ ಹೊಮ್ಮಿದೆ
ಸಂಗೀತ ಹೊನಲು ಹರಿಸುತಿದೆ

ಬಣ್ಣ ಬಣ್ಣದ ಕನಸುಗಳು
ರಂಗಿನೋಕುಳಿ ಆಡಿವೆ
ಒಲವಿನ ಭಾವ ತುಂಬಿ
ಹೊಸ ಕವನ ಬರೆಯುತಿವೆ

ಸೋತಿದೆ ಮನ ಮಾತಿಗೆ
ತುಡಿಯುತಿದೆ ತನು ಸ್ಪರ್ಷಕೆ
ಹೊಸ ಜೀವನದ ಪಾದಾರ್ಪಣೆಗ
ಜೀವ ಕಾತುರದಿ ಕಾಯುತಿದೆ


Leave a Reply